ಬಿಗ್ ಬಾಸ್’ ವಿನ್ನರ್ ಆಗಿರುವ ಸಂಗೀತ ನಿರ್ದೇಶಕ ಕಮ್ ಗಾಯಕ ಚಂದನ್ ಶೆಟ್ಟಿ (Chandan Shetty) ಈಗ ನಟರಾಗಿ ಹೊರಹೊಮ್ಮಿರುವುದು ಎಲ್ಲರಿಗೂ ಕೂಡ ಗೊತ್ತೇ ಇದೆ ‘ಎಲ್ರ ಕಾಲೆಳಿಯತ್ತೆ ಕಾಲ’ (Yelra Kaleliyutte Kala) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಟರಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾವು ತೆರೆಗೆ ಬರುವ ಮೊದಲೇ ಸಾಲು ಸಾಲು ಅವಕಾಶಗಳು ಬಂದಿದ್ದು, ‘ಸೂತ್ರಧಾರಿ’ (Sutradhari)ಸಿನಿಮಾವನ್ನು ಒಪ್ಪಿಕೊಂಡು ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ರ್ಯಾಪರ್ ಚಂದನ್ ಶೆಟ್ಟಿ ಅಭಿನಯದ ಕಿರಣ್ ಕುಮಾರ್ (Kiran Kumar) ನಿರ್ದೇಶನದ ‘ಸೂತ್ರಧಾರಿ’ ಚಿತ್ರದ ವಿಡಿಯೋ ಹಾಡನ್ನು ರಿಲೀಸ್ (Song Release) ಆಗಿದೆ. ಈ ರಿಲೀಸ್ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಜೊತೆಗೆ ಮಡದಿ ನಿವೇದಿತಾಗೌಡ ಕೂಡ ಕಾಣಿಸಿಕೊಂಡಿದ್ದಾರೆ. ವೇದಿಕೆಯ ಮೇಲೆ ಚಂದನ್ ಹಾಗೂ ಸಿನಿ ಚಿತ್ರ ತಂಡದ ಜೊತೆಗೆ ಶಾರ್ಟ್ ಡ್ರೆಸ್ ನಲ್ಲಿ ನಿವೇದಿತಾ ಗೌಡ (Niveditha Gowda) ಸ್ಟೆಪ್ ಹಾಕಿದ್ದಾರೆ. ಅಷ್ಟೇ ಅಲ್ಲದೇ ವೇದಿಕೆಯ ಮೇಲೆ ಮಾತನಾಡಿದ್ದು, ಚಂದನ್ ಅವರಿಗೆ ನೂರಕ್ಕೆ ನೂರರಷ್ಟು ಬೆಂಬಲ ನೀಡಿದ್ದಾರೆ.
‘ಸೂತ್ರಧಾರಿ’ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, “ಸಿನಿಮಾದ ಸಾಂಗ್ ಕೂಡ ನೋಡಿದೆ ತುಂಬಾ ಇಷ್ಟ ಆಯ್ತು. ಚಂದನ್ ಅವರ ಸಾಂಗ್ ಗಳಿಗೆ ಎಷ್ಟು ಸಪೋರ್ಟ್ ಮಾಡ್ತಿರೋ ಅಷ್ಟೇ ಸಪೋರ್ಟ್ ಸಿನಿಮಾಗೂ ಮಾಡ್ತೀರಾ ಅಂತ ಅಂದುಕೊಂಡಿದ್ದೇನೆ. ಸಾಂಗ್ ಅಲ್ಲಿ ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಚಂದನ್ ಅವರು ಈ ಸಿನಿಮಾದಲ್ಲಿ ಫ್ಯಾಷನ್ ಯಿಂದ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕಾಗಿ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಸಿನಿಮಾದ ಬಗ್ಗೆ ನನ್ನ ಫೀಡ್ ಬ್ಯಾಕ್ ತೆಗೆವುದರ ಜೊತೆಗೆ ಅದನ್ನು ಕೆಲಸದಲ್ಲಿ ಅಳವಡಿಸಿಕೊಳ್ಳುತ್ತಾರೆ, ಅಲ್ ದಿ ಬೆಸ್ಟ್ ಚಂದನ್” ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.
‘ಸೂತ್ರಧಾರಿ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯೂ ಕೂಡ ಚಂದನ್ ಶೆಟ್ಟಿ ಅವರದ್ದೆ ಆಗಿದೆ. ಸೂತ್ರಧಾರಿ’ ಒಂದು ಕ್ರೈಂ ಥ್ರಿಲ್ಲರ್ (Crime Thriller) ಚಿತ್ರವಾಗಿದ್ದು, ಈ ಚಿತ್ರವನ್ನು ನವರಸನ್ ನಿರ್ಮಿಸುತ್ತಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ಕ್ರಿಯೇಟಿವ್ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸೂತ್ರಧಾರಿ ಚಿತ್ರಕ್ಕೆ ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಚಂದನ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡರೆ ಅಪೂರ್ವ (Apoorva) ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಜೊತೆಗೆ ತಬಲಾ ನಾಣಿ (Tabala Nani) ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್. ದಾಸ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ಮೂಲಕ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ.