ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿಮಣಿಯರಲ್ಲಿ ಕಾವ್ಯಾ ಶಾ (Kavya Sha) ಕೂಡ ಒಬ್ಬರಾಗಿದ್ದಾರೆ. ಈಗಾಗಲೇ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ನಟಿ, ನಿರೂಪಕಿಯಾಗಿಯೂ ಕೆಲಸ ಮಾಡಿರುವ ಕಾವ್ಯಾ ಶಾ ಕಳೆದ ವರ್ಷ ಪ್ರೀತಿಸಿದ ಹುಡುಗನ ಕೈ ಹಿಡಿದಿದ್ದರು.
ಕನ್ನಡ ಕಿರುತೆರೆ ಲೋಕದ ನಟಿ ಕಮ್ ನಿರೂಪಕಿ ಕಾವ್ಯಾ ಶಾ 2022 ಜೂನ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದಡುವ ಮೂಲಕ ಸಿಹಿ ಸುದ್ದಿ ನೀಡಿದ್ದರು. ಚಿತ್ರರಂಗದ ಪ್ರೊಡಕ್ಷನ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ವರುಣ್ (Varun) ಅವರನ್ನು ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು.
ಈ ಜೋಡಿಯ ಮದುವೆಗೆ ಸ್ಯಾಂಡಲ್‌ವುಡ್ ಮಂದಿ ಕೂಡ ಸಾಕ್ಷಿಯಾಗಿದ್ದು, ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) , ಲೂಸ್ ಮಾದ ಯೋಗಿ (Lose ಮಾಡಲ್ಲ Yogi), ಧನಂಜಯ್ (Dhananjay) , ನಿರ್ದೇಶಕ ಸಂತೋಷ್ ಆನಂದ್‌ರಾಮ್ (Santhosh Anand Ram), ಯುವ ರಾಜ್‌ಕುಮಾರ್ (Yuva Rajkumar) ಸೇರಿದಂತೆ ಹಲವು ತಾರೆಯರು ಆಗಮಿಸಿದ್ದರು. ಸಂಗೀತ್ ಹಾಗೂ ಮೆಹೆಂದಿ ಕಾರ್ಯಕ್ರಮ (Sangeeth and Mehandi Function) ಕೂಡ ಮಾಡಲಾಗಿತ್ತು.
ಅದಲ್ಲದೇ ನಟಿ ಕಾವ್ಯಾ ಶಾರವರು ಅರಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದರು. ನಟಿಯ ಅರಶಿಣ ಶಾಸ್ತ್ರದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ನಟಿ ಕಾವ್ಯಾ ಹಾಗೂ ವರುಣ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ವರುಣ್ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು,11 ವರ್ಷಗಳ ಹಿಂದೆ ಬ್ಯೂಟಿ ಪೀಜೆಂಟ್ ವೊಂದರಲ್ಲಿ ಪರಿಚಯವಾಗಿತ್ತು.
ಈ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಈ ಸ್ನೇಹವು ಪ್ರೀತಿಗೆ ತಿರುಗಿತ್ತು. ಈ ಪ್ರೀತಿಗೆ ಇಬ್ಬರೂ ಮನೆಯಲ್ಲಿಯು ಮೆಚ್ಚುಗೆ ಸಿಕ್ಕಿತ್ತು. 10 ವರ್ಷಗಳ ಈ ಜೋಡಿಯ ಪ್ರೀತಿಗೆ ಮದುವೆಯ ಮೂಲಕ ಅಧಿಕೃತ ಮುದ್ರೆಗೆ ಒತ್ತಿದ್ದು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಕಾವ್ಯಾ ಶಾ ಅವರ ಹಿನ್ನಲೆಯನ್ನು ನೋಡುವುದಾದರೆ, ‘ಚಿ ಸೌ ಸಾವಿತ್ರಿ’ (Chi Sow Savitri), ‘ಬಂಗಾರ’ (Bangara) ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
View this post on Instagram
ಕನ್ನಡದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ (Mister And Misses Ramachari), ಮುಗಿಲ್ ಪೇಟೆ (Mugilu Pete), ಮೂಕಜ್ಜಿಯ ಕನಸು (Mukajjiya Kanasu) ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾನ್ಸಿಂಗ್ ರಿಯಾಲಿಟಿ ಶೋಗಳಲ್ಲಿ ಕಾವ್ಯಾ ಶಾ ಭಾಗವಹಿಸಿದ್ದು ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ನಟಿ ಕಾವ್ಯಾ ಶಾರವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.