7 Hot News
A Karnataka Times Affiliate Kannada News Portal

ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ನಟ ಶರಣ್ ಕುಟುಂಬ! ಸುಂದರ ಕ್ಷಣಗಳ ಫೋಟೋಸ್ ಇಲ್ಲಿವೆ!!

advertisement

ಕನ್ನಡ ಸಿನಿಮಾ ರಂಗದ ಸ್ಟಾರ್ ನಟ ನಟಿಯರು ಆಗಾಗ ಗುಡಿ ಗೋಪುರಗಳಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಸದ್ದು ಮಾಡುತ್ತಿರುತ್ತಾರೆ. ತಮ್ಮ ಬಿಡುವಿನ ಸಮಯದಲ್ಲಿ ದೈವಾನುಗ್ರಹ ಪಡೆಯುವಂತಹ ಕಲಾವಿದರು ತಮ್ಮ ಕುಟುಂಬ ಸಮೇತರಾಗಿ ಹೋಗಿ ದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಸ್ಯಾಂಡಲ್ವುಡ್ನ ಹಾಸ್ಯ ನಟ ಶರಣ್ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಹೆಂಡತಿ ಮಕ್ಕಳೊಂದಿಗೆ ಮೈಸೂರಿನ ಬೆಟ್ಟದ ತಪ್ಪಲಿನಲ್ಲಿ ಇರುವಂತಹ ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನಕ್ಕೆ(Sri Chamundeshwari Temple) ತೆರಳಿದ್ದು.

advertisement

ದೇವಿಯ ಅನುಗ್ರಹವನ್ನು ಪಡೆದುಕೊಂಡು ಬಂದಿದ್ದಾರೆ. ಈ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟ ಶರಣ್(Actor Sharan) ಅವರು ಪೋಸ್ಟ್ ಮಾಡಿದ್ದು ಫೋಟೋ ಬಾರಿ ವೈರಲ್ಲಾಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ. ಶರಣ್ರವರ ತಂದೆ ತಾಯಿ ಕೃಷ್ಣ ರಾಧೆ ರುಕ್ಮಿಣಿಯರು ರಂಗಭೂಮಿ ಕಲಾವಿದರಾಗಿ ಸಿನಿಮಾರಂಗದ ನಂಟನ್ನು ಹೊಂದಿದ್ದ ಕಾರಣ ಶರಣ್ ಮತ್ತು ಶೃತಿ ಕೂಡ ಬಣ್ಣದ ಬದುಕಿನಲ್ಲಿ ಸಕ್ರಿಯರಾಗುತ್ತಾರೆ.

advertisement

ಹೌದು ಗೆಳೆಯರೇ ಅತಿ ಚಿಕ್ಕ ವಯಸ್ಸಿಗೆ ತಮ್ಮ ನಟನೆಯ ಪಯಣವನ್ನು ಪ್ರಾರಂಭ ಮಾಡಿದ ಶ್ರುತಿ ಮತ್ತು ಶರಣ್ ಇಂದಿಗೂ ಕೂಡ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತಿದ್ದು, ಇವರ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಪ್ರೀತಿ. ಎಂತಹ ಪಾತ್ರ ನೀಡಿದರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತ ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ.

advertisement

advertisement

advertisement

ನಟನೆ ಎಂಬುದು ಶೃತಿ ಮತ್ತು ಶರಣರ ಜನರೇಶನ್ಗೆ ಸೀಮಿತವಾಗದೆ ಅವರ ಮೂರನೇ ತಲೆಮಾರು ಕೂಡ ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿದ್ದು ಈಗಾಗಲೇ ನಟ ಶರಣ್ ಅವರ ಪುತ್ರ ಗುರು ಶಿಷ್ಯರು(Guru shisyaru) ಸಿನಿಮಾದ ಮೂಲಕ ಅದಾಗಲೇ ಕನ್ನಡ ಚಲನಚಿತ್ರ ರಂಗವನ್ನು ಪ್ರವೇಶ ಮಾಡಿದ್ದು, ಇದೀಗ ಶರಣರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಪುತ್ರಿ ನಾಯಕ ನಟಿಯಾಗಿ ಬಣ್ಣದ ಬದುಕಿಗೆ ಪಾದರ್ಪಣೆ ಮಾಡಲಿದ್ದಾರೆ.

advertisement

advertisement

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದು ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ರೆ ಗೆಡಿಸಿರುವ ಕೀರ್ತಿ ಕೃಷ್ಣ ನಟನಾ ಲೋಕಕ್ಕೆ ಪಾದರ್ಪಣೆ ಮಾಡಲಿರುವ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ಪುಟದಲ್ಲಿರುವ ಸುಂದರ ಫೋಟೋಗಳ ಮೂಲಕ ನೀವು ಕೂಡ ಶರಣ, ಪತ್ನಿ ಪಲ್ಲವಿ ಶರಣ್(Pallavi Sharan) ಮತ್ತು ಮಗ ಹೃದಯ್ ಶರಣ್(Hruday Sharan) ಹಾಗೂ ಮಗಳ ಸುಂದರ ಫ್ಯಾಮಿಲಿ ಫೋಟೋಗಳನ್ನು ಕಂಡುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.