ಸ್ನೇಹಿತರೆ, ನಟಿ ಆಶಿಕಾ ರಂಗನಾಥ್ ಕೇವಲ ಬೆರಳಾಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು ಕೂಡ ತಮ್ಮದೇ ಆದ ವಿಶೇಷ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟಿ. ಹೌದು ಗೆಳೆಯರೇ ತಮ್ಮ ಅಮೋಘ ಸೌಂದರ್ಯ ಹಾಗೂ ಬಳಕುವಂತಹ ಮೈಮಾಟವನ್ನು ಹೊಂದಿರುವ ಆಶಿಕ ರಂಗನಾಥ್ ಸದ್ಯ ಕನ್ನಡ ಸಿನಿಮಾ ರಂಗದಿಂದ ತೆಲುಗಿಗೆ ಹಾರಿದ್ದು, ಇಶಿಕ ಎಂಬ ಪಾತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅವರೊಂದಿಗೆ ಆಮಿಗೋ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಸಿನಿಮಾದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ಸಿನಿಮಾ ತೆರೆ ಕಾಣುವ ಎಲ್ಲಾ ಸಾಧ್ಯತೆಗಳು ಇವೆ. ಇನ್ನು ಕನ್ನಡದಲ್ಲಿ ‘ಘತಾ ವೈಭವ’ ಎಂಬ ಸಿನಿಮಾದ ನಾಯಕ ನಟಿಯಾಗಿ ಆಶಿಕ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದು, ಸಿಂಪಲ್ ಸೂರಿ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವಂತಹ ಈ ಸಿನಿಮಾ ಇದೇ ಸೆಪ್ಟೆಂಬರ್ 16ರಂದು ತೆರೆ ಕಾಣಲಿರುವ ಮಾಹಿತಿ ಅವರ ಬಿದ್ದಿದೆ.
ಹೀಗೆ ಒಂದರ ಮೇಲೆ ಒಂದರಂತೆ ಸಾಕಷ್ಟು ಸಿನಿಮಾಗಳ ಆಫರ್ ಅನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಆಶಿಕಾ ರಂಗನಾಥ್ ಸಿನಿಮಾಗಳಿಗೆ ಬೇಕಾದ ಹಾಗೆ ತಮ್ಮ ದೇಹವನ್ನು ದಂಡಿಸುವ ಸಲುವಾಗಿ ಪ್ರತಿದಿನ ತಪ್ಪದೆ ಡಯಟ್ಟನ್ನು ಅನುಸರಿಸುತ್ತಾ ಜಿಮ್ನಲ್ಲಿ ವರ್ಕೌಟ್ ಕೂಡ ಮಾಡುತ್ತಾರೆ. ಹೌದು ಗೆಳೆಯರೇ ತಮ್ಮ ತಂಗಿ ಅನುಷಾ ರಂಗನಾಥ್ ಅವರೊಂದಿಗೆ ಜಿಮ್ಗೆ ಹೋಗುವ ಆಶಿಕಾ ರಂಗನಾಥ್ ಕೇವಲ ಒಂಬತ್ತು ನಿಮಿಷಗಳ ಕಾಲ ರೋವಿಂಗ್ ಅಂಡ್ ಬಾಲ್ ಶಾರ್ಟ್ಸ್ ಮಾಡಿ ಕೆಳಗೆ ಬಿದ್ದಿದ್ದಾರೆ.
View this post on Instagram
ಜಿಮ್ ನ ನೆಲದ ಮೇಲೆ ಆಶಿಕ ಮಲಗಿ ವಿಶ್ರಾಂತಿ ಪಡೆಯುವಾಗ ಅವರ ತಂಗಿ ತಮಾಷೆ ಮಾಡುವ ಸಲುವಾಗಿ ಈ ವಿಡಿಯೋವನ್ನು ಮಾಡಿದ್ದು, ಇದನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡು ವರ್ಕೌಟ್ ಮಾಡುವಾಗ ನನ್ನ ಎಕ್ಸ್ಪ್ರೆಶನ್ ಹೇಗಿರುತ್ತದೆ ಎಂಬುದನ್ನು ನೀವೇ ನೋಡಿ ಎಂದು ಬರೆದುಕೊಂಡಿದ್ದಾರೆ. ಅದರಂತೀಗ ಈ ವಿಡಿಯೋ ಸದ್ಯ ಆಶಿಕಾ ರಂಗನಾಥ್ ಅವರ ಫ್ಯಾನ್ ಪೇಜ್ ಗಳಲ್ಲೆಲ್ಲ ಹರಿದಾಡುತ್ತಿದ್ದು, ಇದನ್ನು ಕಂಡಂತಹ ಫ್ಯಾನ್ಸ್ ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುವ ಮೂಲಕ ಆಶಿಕ ರಂಗನಾಥ್ ಅವರ ಕಾಲೆಳೆದಿದ್ದಾರೆ.