ಮುದ್ದಿನ ಬೆಕ್ಕಿನ ಮರಿಯನ್ನು ಮುದ್ದಿಸುತ್ತಿರುವ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಅನ್ವಿತಾ ಸಾಗರ್! ಮುದ್ದಾದ ಫೋಟೋಗಳು ಇಲ್ಲಿವೆ ನೋಡಿ!!

ಕನ್ನಡ ಕಿರುತೆರೆಲೋಕದಲ್ಲಿ ಸಾಕಷ್ಟು ಧಾರಾವಾಹಿಗಳು ಪ್ರಸಾರ ಕಂಡು ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದೆ. ಅಂತಹ ಧಾರಾವಾಹಿಯ ಪೈಕಿ ಗಟ್ಟಿಮೇಳ ಕೂಡ ಒಂದು. ಈ ಗಟ್ಟಿಮೇಳ ಧಾರಾವಾಹಿ(Gattimela Serial) ಆದ್ಯಾ ಪಾತ್ರ ನಿರ್ವಹಿಸುತ್ತಿರುವ ಅನ್ವಿತಾ ಸಾಗರ್ (Anvitha Sagar) ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಈ ಧಾರಾವಾಹಿಯ ನಾಯಕ ವೇದಾಂತ್ ತಂಗಿ ಆದ್ಯಾ (Adya) ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಅನ್ವಿತಾ ಸಾಗರ್ ಅವರು ಆಗಾಗ ಫೋಟೋ ಹಾಗೂ ವಿಡಿಯೋಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಆದರೆ ಮುದ್ದಾದ ಬೆಕ್ಕಿನ ಮರಿಯನ್ನು ಕೈಯಲ್ಲಿ ಇಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಕೈಯಲ್ಲಿಡಿದು ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋಗೆ ಇಪ್ಪತ್ತಾರು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ. ನಟಿಯ ಪ್ರಾಣಿ ಪ್ರೀತಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ಅನ್ವಿತಾ ಸಾಗರ್ ಅವರ ಹಿನ್ನೆಲೆಯನ್ನು ಗಮನಿಸುವುದಾದರೆ, ಅನ್ವಿತಾ ಸಾಗರ್ (ಪಾರ್ವತಿ)ರವರು ಕರಾವಳಿಯವರು. ಮಂಗಳೂರಿನವರಾದ ಇವರು ಟ್ಯಾಂಲೆಟ್ ಹುಡುಗಿ (Multi Talented Girl) ಯಾಗಿದ್ದಾರೆ. ಹೀಗಾಗಿ ನಟನೆಯಲ್ಲಿ ಅವಕಾಶ ಗಿಟ್ಟಿಸಿಕೊಂಡು ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡುವ ಮೊದಲು ಮಾಡೆಲ್ (Model) ಆಗಿ ಗುರುತಿಸಿಕೊಂಡಿದ್ದರು. ಲೋಕಲ್ ಟಿವಿ ಚಾನೆಲ್ (Local Tv Chanel) ಗಳಲ್ಲಿ ಆಕಂರಿಂಗ್ ಮಾಡುತ್ತಿದ್ದರು. ಸ್ನಾತ್ತಕೋತ್ತರ ಪದವಿ ಪಡೆಯುತ್ತಿದ್ದ ವೇಳೆಯಲ್ಲಿ ಅನ್ವಿತಾರವರು ನಮ್ಮ ಟಿ.ವಿ ಚಾನಲ್ ನಲ್ಲಿ ನಿರೂ ಪಣೆ ಮಾಡುತ್ತಾ ಸಕ್ರಿಯರಾಗಿದ್ದರು.

ಆದರೆ, 2015 ರಲ್ಲಿ ಇವರು ರಂಜಿತ್ ಬಜ್ಪೆ (Ranjith Bajpe) ನಿರ್ದೇಶನದ ದಂಡ್ (Dand) ಸಿನಿಮಾದ ಮೂಲಕ ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟರು. ಆ ಬಳಿಕ ನಟಿ ಅನ್ವಿತಾ ಸಾಗರ್ ಅವರಿಗೆ ಅವಕಾಶಗಳು ಬಂದವು. ಹೀಗಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡ ಇವರು ತುಳು ಮತ್ತು ಕನ್ನಡ ಸಿನಿಮಾದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ನಟಿಗೆ ಎಲ್ಲಿಲ್ಲದ ಬೇಡಿಕೆಯಿದೆ.

Public News

Leave a Reply

Your email address will not be published. Required fields are marked *