7 Hot News
A Karnataka Times Affiliate Kannada News Portal

ಸೃಜನ್ ಲೋಕೇಶ್ ಅವರ ಮುದ್ದಿನ ಮಡದಿ ಮತ್ತು ಮಗನ ಜೊತೆ ಸುಂದರ ಫೋಟೋಗಳು! ಮುದ್ದಾದ ಕ್ಷಣಗಳು ಇಲ್ಲಿವೆ ನೋಡಿ!!

advertisement

ಕನ್ನಡ ಸಿನಿಮಾ ರಂಗದ ಮೇರು ನಟ ನಿರೂಪಕ ಹಾಗೂ ನಿರ್ಮಾಪಕ ಸೃಜನ್ ಲೋಕೇಶ್(Srujan Lokesh) ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಸದ್ದು ಮಾಡುತ್ತಲೇ ಇರುತ್ತಾರೆ. ಹೌದು ಗೆಳೆಯರೇ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವಾಗಿರುವಂತಹ ಸೃಜನ್ ಲೋಕೇಶ್(Srujan Lokesh) ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಪರ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಸದ್ದು ಮಾಡುತ್ತಲೇ ಇರುತ್ತಾರೆ.

advertisement

ಸೃಜನ್ ಲೋಕೇಶ್ ಅವರ ಸುಂದರ ಫ್ಯಾಮಿಲಿ ಫೋಟೋ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಮುದ್ದಾದ ಜೋಡಿಯನ್ನು ಕಂಡು ಮನಸೋತು ಹೋಗಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಟ ಸೃಜನ್ ಲೋಕೇಶ್ ಅವರು ತಮ್ಮ ತಂದೆ ಆಗು ತಾಯಿ ಸಹಾಯದಿಂದಾಗಿ ವೀರಪ್ಪನ್ ಎಂಬ ಸಿನಿಮಾದ ಮೂಲಕ ಅತಿ ಚಿಕ್ಕ ವಯಸ್ಸಿಗೆ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು.

advertisement

ಅವರ ತಂದೆ ಲೋಕೇಶ್ ಹಾಗೂ ತಾಯಿ ಗಿರಿಜಾ ಲೋಕೇಶ್ ಇಬ್ಬರಿಗೂ ಸೃಜನ್ ಲೋಕೇಶ್ ಅವರು ತಮ್ಮಂತೆ ಕಲಾವಿದನಾಗಬೇಕೆಂಬ ಮಹಾದಾಸೆ ಇತ್ತಂತೆ. ಹೀಗಾಗಿ ಬಾಲ ನಟನಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಸೃಜನ್ ಲೋಕೇಶ್ ಅನಂತರ ತಮ್ಮದೇ ಆದ ಸಿನಿಮಾಗಳ ಮೂಲಕ ನಾಯಕ ನಟನಾಗಿ ಹಾಗೂ ಸಹ ನಟನಾಗಿ ಅಭಿನಯಿಸುತ್ತಾ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದರು.

advertisement

advertisement

advertisement

ಇನ್ನೂ ಸಿನಿಮಾ ರಂಗದಲ್ಲಿ ಸಕ್ರಿಯ ರಾಗಿರುವಾಗಲೇ ನಟಿ ವಿಜಯಲಕ್ಷ್ಮಿ ಅವರನ್ನು ಮಾಡಿಕೊಂಡಿದಂತಹ ಸೃಜನ್ ಲೋಕೇಶ್ ಅವರ ಪ್ರೀತಿ ಮದುವೆ ಹಂತಕ್ಕೆ ಬಂದಾಗ ಮುರಿದು ಬೀಳುತ್ತದೆ. ಈ ನೋವಿನಿಂದ ಹೊರಬಂದು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದಂತಹ ಸೃಜನ್ ಲೋಕೇಶ್ ಅವರಿಗೆ ಗ್ರೀಷ್ಮ ಎಂಬ ರಂಗಭೂಮಿ ಕಲಾವಿದೆಯನ್ನು ಮದುವೆ ಮಾಡಬೇಕೆಂಬ ಆಸೆ ಅವರ ಪೋಷಕರದಾಗಿರುತ್ತದೆ. ಅದರಂತೆ 2010ರಲ್ಲಿ ಸೃಜನ್ ಮತ್ತು ಗ್ರೀಷ್ಮ(Shrujan and Greeshma) ಜೋಡಿಗಳು ಬಹಳ ಅದ್ದೂರಿಯಾಗಿ ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

advertisement

ಬರೋಬ್ಬರಿ ಹದಿನಾಲ್ಕು ವರ್ಷಗಳವರೆಗೂ ಯಾವುದೆ ಸಣ್ಣ ಮನಸ್ತಾಪ ಜಗಳಗಳು ಇಲ್ಲದ ಬಹಳ ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನು ನಡೆಸಿಕೊಂಡು ಬರುತ್ತಿರುವ ಸೃಜನ್ ಲೋಕೇಶ್(Srujan Lokesh) ದಂಪತಿಗಳಿಗೆ ಸುಕೃತ್ ಮತ್ತು ಶ್ರೇಷ್ಠ ಲೋಕೇಶ್(Shresta lokesh) ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಆಗಾಗ ಹೆಂಡತಿ ಹಾಗೂ ಮಕ್ಕಳ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲಾಗುತ್ತಿರುತ್ತಾರೆ.

advertisement

Leave A Reply

Your email address will not be published.