ಸುಮಲತಾ ಹುಟ್ಟು ಹಬ್ಬದಂದು ಒಂದಾದ ಸ್ಯಾಂಡಲ್ ವುಡ್ ದಿಗ್ಗಜರು ದಚ್ಚು-ಕಿಚ್ಚ! ಸ್ಯಾಂಡಲ್ ವುಡ್ ನಲ್ಲಿ ನಡುಕ ಶುರು!!

ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಷ್ (Sumalatha Ambarish) ಅವರು ಇಂದು (ಆಗಸ್ಟ್ 27) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಂಬಿ ಮಡದಿ ಸುಮಲತಾರವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿದ್ದುದ್ದು, ಅಪಾರ ಸಂಖ್ಯೆ ಯಲ್ಲಿ ಸ್ನೇಹಿತ ಬಳಗ ಹಾಗೂ ಫ್ಯಾನ್ಸ್ ಗಳನ್ನು ಹೊಂದಿದ್ದಾರೆ.

ಖಾಸಗಿ ಹೋಟೆಲ್ (Private Hotel) ನಲ್ಲಿ ಸುಮಲತಾ ಬರ್ತ್ ಡೇ ಸೆಲಬ್ರೇಷನ್ ಮಾಡಿಕೊಂಡಿದ್ದಾರೆ. ಬರ್ತ್ ಡೇ ಪಾರ್ಟಿಗೆ ದರ್ಶನ್ (Darshan), ಸುದೀಪ್ (Sudeep), ರಿಷಬ್ ಶೆಟ್ಟಿ (Rishab Shetty), ರಕ್ಷಿತ್ ಶೆಟ್ಟಿ (Rakshith Shetty), ಗುರುಕಿರಣ್ (Gurukiran) ಸೇರಿದಂತೆ ಹಲವರನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ಆದರಂತೆ ಚಂದನವನದ ನಟ ನಟಿಯರು, ನಿರ್ದೇಶಕರು ಸೇರಿದಂತೆ ಆಪ್ತರು ಭಾಗಿಯಾಗಿದ್ದರು.

ಅದರಲ್ಲಿ ಸಂಸದೆ ಸುಮಲತಾರ ಹುಟ್ಟುಹಬ್ಬದಲ್ಲಿ ಕಿಚ್ಚ ಸುದೀಪ್ (Kiccha Sudeep) ಹಾಗೂ ದರ್ಶನ್ (Darshan) ಅವರು ಮುಖಾಮುಖಿಯಾಗಿದ್ದು ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ. ಸುಮಲತಾ ಅಂಬರೀಷ್ ಅವರ ಬರ್ತ್ಡೇ ಡೇ (Birth Day) ನೆಪದಲ್ಲಿ ಈ ಕುಚಿಕು ಗೆಳೆಯರನ್ನು ಒಂದು ಮಾಡುವ ಪ್ರಯತ್ನವನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Producer Rockline Venkatesh) ಮಾಡಿದ್ದರು.

ನಟಿ ಸುಮಲತಾ ಅಂಬರೀಶ್ಗೆ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ನಟ, ನಿರ್ದೇಶಕ ರಿಷಬ್ ಶೆಟ್ಟಿ , ರಕ್ಷಿತ್ ಶೆಟ್ಟಿ, ಗುರುಕಿರಣ್ ಸೇರಿದಂತೆ ಅನೇಕ ಕಲಾವಿದರಿಂದ ಶುಭಾಶಯ ತಿಳಿಸಿ ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದರು. ನಟಿ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ನಟ ಕಮ್ ಸಂಗೀತ ನಿರ್ದೇಶಕ ಗುರುಕಿರಣ್ (Gurukiran)ರವರು ಸುಮಲತಾ ರವರ ಫೋಟೋ ಹಂಚಿಕೊಂಡ ಅವರು ಶುಭಾಶಯಗಳನ್ನು ಕೋರಿದ್ದಾರೆ.

ನಟಿ ಸುಮಲತಾ ಅಂಬರೀಷ್ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದವರು. ಕನ್ನಡ (Kannada), ಮಲಯಾಲಂ (Malayalam), ತೆಲುಗು (Telug), ತಮಿಳು (Tamil) ಮತ್ತು ಹಿಂದಿ (Hindi) ಸಿನಿಮಾಗಳಲ್ಲಿ ಅವರು ಅಭಿನಯಿಸಿ ಸೈ ಎನಿಸಿಕೊಂಡರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಸುಮಲತಾ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

Public News

Leave a Reply

Your email address will not be published. Required fields are marked *