ಸ್ನೇಹಿತರೆ, ಕನ್ನಡ ಚಿತ್ರರಂಗದ ಯಶಸ್ವಿ ನಟ ಹಾಗೂ ರಾಜಕಾರಣಿಯಾಗಿ ಎಲ್ಲ ಕ್ಷೇತ್ರದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ನಿಖಿಲ್ ಕುಮಾರಸ್ವಾಮಿ ಇಂದು ತಮ್ಮ ಹೊಸ ಸಿನಿಮಾದ ಕುರಿತು ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದು. ಚಿತ್ರಕ್ಕೆ ಹೊಸ ನಾಯಕಿಯನ್ನು ಆಯ್ಕೆ ಮಾಡಿ ಆಕೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಹೌದು ಗೆಳೆಯರೇ ಜಾಗ್ವಾರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದಂತಹ ನಿಖಿಲ್ ಕುಮಾರಸ್ವಾಮಿಯವರು ಆನಂತರ ರಾಜಕೀಯ ರಂಗದಲ್ಲಿಯೂ ಸಕ್ರಿಯರಾಗಿ ತಮ್ಮ ತಂದೆ ಹಾಗೂ ತಾತನಂತೆ ಪ್ರಬಲ ರಾಜಕಾರಣಿಯಾಗಿ ಗುರುತಿಸಿಕೊಂಡು ಹಲವು ಬಾರಿ ತಮ್ಮ ಕ್ಷೇತ್ರದಿಂದ ಗೆದ್ದು ಬೀಗಿದವರು ಹೀಗೆ ರಾಜಕೀಯದ ಜೊತೆ ಜೊತೆಗೆ.
ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಬದುಕಿನ ಗಮನಹರಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಮತ್ತು ರೈಡರ್ ಚಿತ್ರಗಳ ನಂತರ ಯಾವುದೇ ಸಿನಿಮಾದ ಕುರಿತು ಅಪ್ಡೇಟ್ ನೀಡಿರಲಿಲ್ಲ. ಅಭಿಮಾನಿಗಳು ಪ್ರತಿ ಬಾರಿ ನಿಖಿಲ್ ಅವರನ್ನು ಕೇಳ ತೊಡಗಿದ್ದರು. ಇದೀಗ ಮುಂದಿನ ಸಿನಿಮಾದಲ್ಲಿ ಅಭಿನಯಿಸಲಿರುವ ನಾಯಕಿ ಯಾರೆಂಬುದನ್ನು ರಿವಿಲ್ ಮಾಡಿದ್ದಾರೆ.
ಹೌದು ಗೆಳೆಯರೇ ನಟ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಬಾಲಿವುಡ್ ನಟಿ ಯುಕ್ತಿ ತೇರಜ್ ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆ ದಕ್ಷಿಣ ಭಾರತದ ರಂಗಬಲಿ ಎಂಬ ಸಿನಿಮಾದಲ್ಲಿ ನಾಗ ಶೌರ್ಯ ಅವರೊಂದಿಗೆ ಅಭಿನಯಿಸಿದ್ದರು ಇದು ಇವರ ಎರಡನೇ ದಕ್ಷಿಣ ಭಾರತದ ೨ನೇ ಸಿನಿಮಾವಾಗಿದ್ದು ಟಾಲಿವುಡ್ ಅಂಗಳದಲ್ಲಿ ತಮ್ಮ ಮೊದಲ ಚಿತ್ರದ ಮೂಲಕವೇ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದ ಯುಕ್ತಿ ಇದೀಗ ಕನ್ನಡ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ.
ಮೂಲತಃ ಹರಿಯಾಣದವರಾದ ಇವರು ಕಾಮರ್ಸ್ನಲ್ಲಿ ಪದವಿ ಪಡೆದು ಆನಂತರ ಫ್ಯಾಶನ್ ಜಗತ್ತಿನತ್ತ ತಮ್ಮ ಒಲವನ್ನು ತೋರಿ ಸಾಕಷ್ಟು ಮಾಡಲಿಂಗ್ ಶೋ ಗಳಲ್ಲಿಯೂ ಸ್ಪರ್ಧಿಸಿ ಕಿರೀಟಗಳನ್ನು ತಮ್ಮ ಮೂಡಿಗೆರೆಸಿಕೊಂಡಂತಹ ಅಪ್ರತಿಮ ಸೌಂದರ್ಯವಂತೆ. ಸದ್ಯ ನಿಖಿಲ್ ಕುಮಾರಸ್ವಾಮಿ ಅವರ ನಾಲ್ಕನೇ ಸಿನಿಮಾದ ಮೂಲಕ ಕನ್ನಡಿಗರನ್ನು ರಂಜಿಸಲು ಸಜ್ಜಾಗುತ್ತಿರುವ ಯುಕ್ತಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಹಿಂದಿನವರೆಗೂ ರಿವಿಲ್ ಮಾಡಿಲ್ಲ.