7 Hot News
A Karnataka Times Affiliate Kannada News Portal

ಮಗಳೊಂದಿಗೆ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ ಕೆ ಜಿ ಎಫ್ ನಟಿ ರವಿನ ತಂಡನ್! ಭಕ್ತಿಯಲ್ಲಿ ಮಿಂದೆದ್ದ ಕ್ಷಣಗಳು ಹೇಗಿತ್ತು ನೋಡಿ!!

advertisement

ಬಾಲಿವುಡ್ ಸಿನಿಮಾ ರಂಗದಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡು ಪೀಕ್ನಲ್ಲಿ ಇದ್ದಂತಹ ರವೀನ ತಂಡನ್ (Raveena Tandon) ಸದ್ಯ ಪೋಷಕ ಪಾತ್ರಗಳಿಗೆ ಸೀಮಿತವಾಗಿದ್ದು, ಅವರ ಮಗಳಾದ ರಾಶ್ಯಾ ತಡಾನಿ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಲು ಸಜ್ಜಾಗುತ್ತಿದ್ದಾರೆ ಹೌದು ಗೆಳೆಯರೇ ಬಾಲಿವುಡ್ನ ಬಿಗ್ ಬ್ಯಾನರ್ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿರುವ ರಾಶಾ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದು ಇದರ ಬೆನ್ನಲ್ಲೇ ತಮ್ಮ ತಾಯಿಯೊಂದಿಗೆ ಪವಿತ್ರವಾದ ಶಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

advertisement

ಈ ಫೋಟೋಗಳನ್ನು ನಟಿ ರವೀನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗಿದ್ದು ಅಮ್ಮ ಮಗಳಿಬ್ಬರಿಗೂ ದೇವರ ಮೇಲಿರುವ ಭಕ್ತಿ ಗೌರವಕ್ಕೆ ಅಭಿಮಾನಿಗಳು ಮನಸ್ಸೋತು ಹೋಗಿದ್ದಾರೆ. ಹೌದು ಗೆಳೆಯರೇ ಗುಜರಾತ್ (Gujurat) ನಲ್ಲಿ ಇರುವಂತಹ ಸೋಮನಾಥದ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ರವೀನಾ ತಮ್ಮ ಪುತ್ರಿಯೊಂದಿಗೆ ಭೇಟಿ ನೀಡಿದ್ದು,

advertisement

ದೇವಸ್ಥಾನಕ್ಕೆ ಬಂದಂತಹ ಸಮಯದಲ್ಲಿ ಅಮ್ಮ ಮಗಳಿಬ್ಬರು ಬಹಳ ಸಾಂಪ್ರದಾಯಕವಾದ ಉಡುಗೆಯನ್ನು ತೊಟ್ಟು ಹಣೆ ತುಂಬಾ ದೇವರ ತಿಲಕವನ್ನು ಇಟ್ಟುಕೊಂಡು ಬಹಳ ಶ್ರದ್ದೆ ಭಕ್ತಿಯಿಂದ ಅಲ್ಲಿನ ಪೂಜಾ ಕೈಂಕಾಲಗಳಲ್ಲಿ ಭಾಗಿಯಾಗುವುದರ ಜೊತೆಗೆ ಲಿಂಗಕ್ಕೆ ಅಭಿಷೇಕ ಮಾಡಿ ನಮಸ್ಕರಿಸಿದ್ದಾರೆ.

advertisement

advertisement

advertisement

ಇನ್ನು ವಿಶೇಷವಾಗಿ ರವೀನಾ ತಂಡನ್ರವರು ತಮ್ಮ ಕೊರಳಿಗೆ ರುದ್ರಾಕ್ಷಿಯ ಮಣೆಯನ್ನು ಧರಿಸಿದ್ದು ಇದು ಅವರು ಶಿವನನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಎತ್ತಿ ತೋರುತ್ತದೆ. ಪೂಜೆಯಲ್ಲಿ ಭಾಗಿಯಾದ ಸಮಯದಲ್ಲಿ ರವೀನಾ ತಂಡನ್ ಹಾಗೂ ಪುತ್ರಿ ರಾಶಾ(Raveena Tandan and Rasha) ಇಬ್ಬರು ಹರಹರ ಮಹದೇವ್ ಎಂದು ಶಿವನ ನಾಮಸ್ಮರಣೆ ಮಾಡುತ್ತಾ ಭಕ್ತಿ ಪ್ರಧಾನವಾಗಿ ಪೂಜಾ ಕೈಂಕರ್ಯನ್ನು ನೆರವೇರಿಸಿದ್ದಾರೆ.

advertisement

advertisement

ಎಲ್ಲಾ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹರ ಹರ ಮಹದೇವ್(Har Har Mahadev) ಎಂಬ ಶೀರ್ಷಿಕೆ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಕೆಲ ವೈಯಕ್ತಿಕ ಕಾರಣದಿಂದಾಗಿ ಕೇದಾರನಾಥದಿಂದ ರಾಮೇಶ್ವರದವರೆಗೂ ಇರುವಂತಹ 12 ಪವಿತ್ರ ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಹೋಗುವಂತಹ ಹರಕೆಯನ್ನು ಹೊಂದಿದ್ದರು. ಅದರಂತೆ ಕಳೆದ ತಿಂಗಳು ತಮಿಳುನಾಡಿನ ರಾಮೇಶ್ವರಂ ನಲ್ಲಿ ತಮ್ಮ ಮಗಳೊಂದಿಗೆ ಕಾಣಿಸಿಕೊಂಡಿದ್ದ ರವೀನಾ ಮೊನ್ನೆ ಗುಜರಾತ್ ನಲ್ಲಿ ಇರುವಂತಹ ಪವಿತ್ರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

advertisement

Leave A Reply

Your email address will not be published.