7 Hot News
A Karnataka Times Affiliate Kannada News Portal

ಬರೋಬ್ಬರಿ 50 ವರ್ಷಗಳಿಂದ ಎತ್ತಿದ ಕೈಯನ್ನು ಒಮ್ಮೆಯೂ ಕೆಳಗೆ ಇಳಿಸಿಲ್ಲ ಈ ಸಾಧು! ಯಾರೂ ಗೊತ್ತಾ ಈ ಸಾಧು ಗೊತ್ತಾದ್ರೆ ಮೈ ನಡುಗುತ್ತದೆ ನೋಡಿ!!

advertisement

ಪ್ರಪಂಚದ ಕೆಲ ಪವಿತ್ರ ಮೂಲೆ ಮೂಲೆಗಳಲ್ಲಿಯೂ ಸಾಧುಸಂತರನ್ನು ಕಾಣಬಹುದು, ತಮ್ಮ ಜೀವಮಾನದ ಪೂರ್ತಿ ತಪಸ್ಸು ಮಾಡುತ್ತಾ ಭಗವಂತನನ್ನು ಮೆಚ್ಚಿಸಲು ಕೇವಲ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಾವುದರ ಮೇಲು ಆಸೆ ಆಕಾಂಕ್ಷೆಗಳು ಇಟ್ಟುಕೊಳ್ಳದೆ ಅಂಗೈಯಗಲ ಬಟ್ಟೆಯಿಂದ ತಮ್ಮ ಮೈಮುಚ್ಚಿಕೊಂಡು ದೇವರ ಧ್ಯಾನದಲ್ಲಿ ಮುಳುಗಿರುವಂತಹ ಇಂತಹ ಯೋಗಿಗಳ ಸಾಕಷ್ಟು ಮಾಹಿತಿಯನ್ನು ನಾವು ಕೇಳ್ಪಟ್ಟಿರುತ್ತೇವೆ.

advertisement

ಆದರೆ ನಾವಿವತ್ತು ಓರ್ವ ಅಪರೂಪದಲ್ಲಿಯೇ ಅಪರೂಪ ಸಾಧು ಸಂತಾನ (Saint) ಕುರಿತು ಪರಿಚಯ ಮಾಡ ಹೊರಟಿದ್ದೇವೆ, ಹೌದು ಗೆಳೆಯರೇ ಸುಮಾರು 50 ವರ್ಷಗಳಿಂದ ಈತ ತನ್ನ ಬಲಗೈಯನ್ನು ಮೇಲೆತ್ತು ಹಿಡಿದು ತಪಸ್ಸು ಮಾಡುತ್ತಿದ್ದಾರೆ. ಅಷ್ಟಕ್ಕೂ ಈತ ಯಾರು? ಹೀಗೆ ಒಂದು ಕೈಯನ್ನು ಮೇಲೆತ್ತಿ ನಿಲ್ಲಲು ಕಾರಣವಾದರೂ ಏನು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

advertisement

ನಮ್ಮ ನಿಮ್ಮಂತ ಸಾಮಾನ್ಯ ಜನರಿಗೆ ಕೇವಲ 5 ರಿಂದ 10 ನಿಮಿಷ ಕೈಯನ್ನು ಗಾಳಿಗೆ ಮೇಲೆ ಹಿಡಿದರೆ ಕೈ ನೋವು ಶುರುವಾಗುತ್ತದೆ ಮಾದರಿತ 50 ವರ್ಷಗಳಿಂದ ಈ ರೀತಿ ಮಾಡುತ್ತಿದ್ದು ವೈಜ್ಞಾನಿಕ ಲೋಕಕ್ಕೆ (Scientific world) ಸವಾಲನ್ನು ಎಸದಿದೆ. ಈತನ ಕುರಿತಾದ ಸಾಕಷ್ಟು ಮಾಹಿತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿತ್ತು. ಕಳೆದ ಕೆಲವು ದಿನಗಳ ಹಿಂದೆ ಐತಿಹಾಸಿಕ ವೇದಿಕ್ (Ithihasika Vedic) ಎನ್ನುವ ಟ್ವಿಟರ್ ಖಾತೆಯಲ್ಲಿ ಈ ಸಾಧು ಸಂತನಾದ ಅಮರ್ ಭಾರತಿಯ (Amar Bharati) ಕುರಿದಾದಂತಹ ವಿಚಾರವನ್ನು ಹಂಚಿಕೊಳ್ಳಲಾಗಿದ್ದು ಈ ಮಾಹಿತಿಯನ್ನು ತಿಳಿದ ನಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.

advertisement

ಅಮರ್ ಭಾರತಿಯು 1973ರಲ್ಲಿ ಭಗವಾನ್ ಶಿವಶಂಕರ ಬೋಲೆನಾಥ(Shivashankara Bholenath)ನಿಗೆ ವಿಶೇಷವಾದ ತಪಸ್ಸನ್ನು ಮಾಡುವ ಸಲುವಾಗಿ ಒಂದು ಕೈಯನ್ನು ಮೇಲೆತ್ತಿ ಹಿಡಿಯುತ್ತೇನೆ ಒಂದು ಪ್ರತಿಜ್ಞೆ ಮಾಡಿದರು ಅದರಂತೆ ಅಂದಿನಿಂದ ಇಂದಿನವರೆಗೂ ತಮ್ಮ ಕೈಯನ್ನು ಗಾಳಿಯಲ್ಲಿ ಹಿಡಿದುಕೊಂಡೆ ಜೀವನ ಮಾಡುತ್ತಿದ್ದಾರೆ.

advertisement

ಹೀಗೆ ಹಲವು ವರ್ಷಗಳಿಂದ ಅವರ ಕೈಯನ್ನು ಮೇಲೆತ್ತಿರುವ ಕಾರಣ ಅದರ ಸ್ಥಿತಿಯು ಗಣನೀಯವಾಗಿ ಹದಗೆಟ್ಟಿದ್ದು, ಕೈಗಳ ಮೂಳೆಗಳು ಹಾಗೂ ಬೆರಳುಗಳು ತನ್ನ ಸ್ವಾಧೀನವನ್ನು ಕಳೆದುಕೊಂಡಂತಿದೆ. ಇನ್ನೂ ಕೈಗಳ ಉಗುರುಗಳನ್ನು ಮಾತ್ರ ಇಂದಿನವರೆಗೂ ಕತ್ತರಿಸದ ಕಾರಣ ಅವು ಕೋಲುಗಳ ರೀತಿ ಉದ್ದನೇ ಬೆಳೆದುಕೊಂಡು ಬಹಳ ಗಟ್ಟಿಯಾಗಿಬಿಟ್ಟಿದೆ.

advertisement

Leave A Reply

Your email address will not be published.