ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Ponaccha) ಮತ್ತು ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ (Bhuvan Ponanna) ನಿನ್ನೆ ( ಆಗಸ್ಟ್ 24) ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಜೊತೆಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಇಂದು 12 ವರ್ಷಗಳ ಪ್ರೀತಿಗೆ ಇದೀಗ ಮದುವೆಯ ಮುದ್ರೆ ಒತ್ತಿದ್ದು, ಈ ಮದುವೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಎಸ್ ಬೊಮ್ಮಾಯಿ, ನಟ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ ಈ ಜೋಡಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅದಲ್ಲದೇ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿ ಹರ್ಷಿಕಾ ಪೂಣಚ್ಚರವರಿಗೆ ದುಬಾರಿ ಬೆಲೆಯ ನೆಕ್ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹರ್ಷಿಕಾ ಹಾಗೂ ಭುವನ್ ಅವರ ಮದುವೆಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ (Golden Star Ganesh Couples) ಗಳು ಆಗಮಿಸಿ ಶುಭ ಹಾರೈಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದ ಹರ್ಷಿಕಾ ಹಾಗೂ ಭುವನ್ ಮದುವೆಯ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದಾರೆ.
ಮದುವೆಯ ಬಳಿಕ ಮಾತನಾಡಿದ ಹರ್ಷಿಕಾ (Harshika), ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನು ಭುವನ್ ನಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಗೆಳೆಯನನ್ನೇ ಮದುವೆಯಾಗಿದ್ದು ತುಂಬಾ ಖುಷಿ ಕೊಟ್ಟಿದೆ. ಇನ್ಮೇಲೆ ನಾನು ಅವರ ಕುಟುಂಬದಲ್ಲಿ ಒಬ್ಬಳು. ಒಳ್ಳೆಯ ಅತ್ತೆ, ಮಾವ ಸಿಕ್ಕಿದ್ದಾರೆ. ಈಗ ಭುವನ್ ನನ್ನ ಪ್ರೊಡ್ಯೂಸರ್ ಮಾಡಿದ್ದಾರೆ. ಸದ್ಯ ಆ ಕೆಲಸ ನಿರ್ವಹಿಸುತ್ತೇನೆ. ಸಿನಿಮಾ ರಂಗವನ್ನು ಖಂಡಿತ ಬಿಡಲ್ಲ. ಅದರ ಜೊತೆಗೆ ನಮ್ಮ ಸಮಾಜಮುಖಿ ಕೆಲಸಗಳು ನಿಲ್ಲಲ್ಲ ಪ್ರತಿ ತಂದೆಗೂ ಒಂದು ಆಸೆ ಇರುತ್ತೆ. ನಮ್ಮ ತಂದೆಗೂ ಆಸೆ ಇತ್ತು. ನಮ್ಮ ತಂದೆಯನ್ನು ಈ ಸಂದರ್ಭದಲ್ಲಿ ತುಂಬಾ ಮಿಸ್ ಮಾಡಿಕೊಳಗಳುತ್ತೇನೆ ಎಂದಿದ್ದಾರೆ.
ಈ ವೇಳೆಯಲ್ಲಿ ಭುವನ್ ಪೊನ್ನಣ್ಣ ಮಾತನಾಡಿ, “ನಾವು ಕರೆದ ಪ್ರತಿಯೊಬ್ಬರು ಮದುವೆಗೆ ಬಂದಿದ್ರು ಎಂದಿದ್ದಾರೆ. ನಾವು ಇಲ್ಲಿವರೆಗೂ ಏನೆಲ್ಲಾ ಕೆಲಸ ಮಾಡಿಕೊಂಡು ಬಂದಿದ್ದೇವೋ ಅದನ್ನೆಲ್ಲ ಮುಂದುವರೆಸುತ್ತೇವೆ. ಕೊಡಗಿನಲ್ಲಿ ಮದುವೆ ಅನ್ನೋದು ತುಂಬಾ ಡಿಫ್ರೆಂಟ್ ಆಗಿರುತ್ತೆ ಅಂತ ಎಲ್ಲರೂ ಬಂದ್ರು. ಯಡಿಯೂರಪ್ಪ ಸರ್, ನಿರಾಣಿ ಸರ್ ಬಂದಿದ್ದು ತುಂಬಾ ಖುಷಿ ಆಯ್ತು” ಎಂದಿದ್ದಾರೆ.