ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ದಂಪತಿಗಳು, ಹಬ್ಬದ ದಿನವೇ ಕನ್ನಡ ಜನತೆಗೆ ಗುಡ್ ನ್ಯೂಸ್ ನೋಡಿ!!

ನಟ ಧ್ರುವ ಸರ್ಜಾ (Actor Dhruva Sarja) ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಆಕ್ಷನ್ ಪ್ರಿನ್ಸ್ ವೈಯುಕ್ತಿಕ ಜೀವನದ ಬಗೆಗೆ ಕೂಡ ಅಪ್ಡೇಟ್ ನೀಡುತ್ತಿರುತ್ತಾರೆ. ಸದ್ಯಕ್ಕೆ ನಟ ಧ್ರುವ ಸರ್ಜಾರವರು ಮಾರ್ಟಿನ್ (Martin) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಧ್ರುವ ಸರ್ಜಾರವರ ಮನೆಯಲ್ಲಿ ಸಂಭ್ರಮವೊಂದು ಮನೆ ಮಾಡಿದೆ. ನಟ ಧ್ರುವ ಸರ್ಜಾ ದಂಪತಿಗಳು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟ ಧ್ರುವ ಸರ್ಜಾ ಕುಟುಂಬ (Dhruva Sarja Family) ಕ್ಕೆ ಮತ್ತೊಂದು ಮಗುವಿನ ಆಗಮನವಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಈ ವಿಚಾರವನ್ನು ನಟ ಧ್ರುವ ಸರ್ಜಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಯಲ್ಲಿ ಶೇರ್ ಮಾಡಿಕೊಂಡಿದ್ದು, ಫ್ಯಾನ್ಸ್ ಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸೆಪ್ಟೆಂಬರ್ನಲ್ಲಿ ಸರ್ಜಾ ಕುಟುಂಬಕ್ಕೆ (Sarja Family) ಹೊಸ ಸದಸ್ಯನ ಆಗಮನ ಆಗಲಿದೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ.

ನಟ ಧ್ರುವ ಸರ್ಜಾರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗ್ರಾಫಿಕ್ಸ್ ವಿಡಿಯೋ (Grapic Video) ವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ಎಲ್ಲರಿಗೂ ಒಂದು ಸರ್ಪ್ರೈಸ್ ಇದೆ ಎನ್ನುವುದನ್ನು ಕಾಣಬಹುದು. ವಿಡಿಯೋ ಕೊನೆಯಲ್ಲಿ ಧ್ರುವ ಮಗಳನ್ನು ಎತ್ತಿಕೊಂಡಿದ್ದು, ಪ್ರೇರಣಾ ಪ್ರೆಗ್ನೆಂಟ್ ಎನ್ನುವ ವಿಚಾರವು ರಿವೀಲ್ ಆಗಿದೆ. ಮುಂದಿನ ಸೆಪ್ಟೆಂಬರ್ (September) ನಲ್ಲಿ ಮಗು ಜನಿಸಲಿದೆ ಎಂದು ಧ್ರುವ ತಿಳಿಸಿದ್ದಾರೆ. ಈ ವಿಚಾರವನ್ನು ನಟ ಧ್ರುವ ಸರ್ಜಾ ರಿವೀಲ್ ಮಾಡುತ್ತಿದ್ದಂತೆ ನಟನಿಗೆ ಎಲ್ಲರೂ ಶುಭಾಶಯಗಳು ಹರಿದು ಬರುತ್ತಿದೆ.

ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರು ಪ್ರೀತಿಸಿ ಮದುವೆಯಾದವರು. ಸುಖವಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳು ಕಳೆದ ವರ್ಷ ಗುಡ್ ನ್ಯೂಸ್ ನೀಡಿದ್ದರು. ಕಳೆದ ವರ್ಷ ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ (Prerana Sarja) ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕ್ಷನ್‌ ಪ್ರಿನ್ಸ್‌ಗೆ ಮಗಳು ಜನಿಸಿದ್ದಾಳೆ ಎಂದು ಫ್ಯಾನ್ಸ್ ಖುಷಿ ಪಟ್ಟಿದ್ದರು. ಆದಾದ ಬಳಿಕ ಧ್ರುವ ಸರ್ಜಾ ಮೊದಲ ಬಾರಿಗೆ ಮಗಳ ಮುಖವನ್ನು ಸೋಶಿಯಲ್‌ ಮೀಡಿಯಾ (Social Media) ಮೂಲಕ ರಿವೀಲ್‌ ಮಾಡಿದ್ದು, ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು.

 

View this post on Instagram

 

A post shared by Dhruva Sarja (@dhruva_sarjaa)

ನಟ ಧ್ರುವ ಸರ್ಜಾ, “ಸ್ನೇಹಿತರು, ಕುಟುಂಬಸ್ಥರಿಗೆ ನಮಸ್ಕಾರ. ನನ್ನ ಹೆಸರಿನ್ನೂ ಇಡಬೇಕಿದೆ. ನನಗೀಗ 7 ತಿಂಗಳ ವಯಸ್ಸು. ಈಗ ನಾನು ಬೆಳೆಯುತ್ತಿರುವ ಜರ್ನಿಯನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ. ನನಗೆ ಒಂದು ತಿಂಗಳು ವಯಸ್ಸು ಇದ್ದಾಗ ತೆಗೆದ ಫೋಟೋಗಳನ್ನು ಶೇರ್‌ ಮಾಡಲು ಇಷ್ಟಪಡ್ತಿದ್ದೇನೆ. ಭವಿಷ್ಯದಲ್ಲಿ ನನ್ನ ಇನ್ನಷ್ಟು ಫೋಟೋಗಳನ್ನು ಶೇರ್‌ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಜೈ ಹನುಮಾನ್” ಎಂದು ಬರೆದುಕೊಂಡಿದ್ದರು

Public News

Leave a Reply

Your email address will not be published. Required fields are marked *