7 Hot News
A Karnataka Times Affiliate Kannada News Portal

ರಾಗಿಣಿ ಪ್ರಜ್ವಲ್ ಅವರ ಸಹೋದರಿ ಕನ್ನಿಕ ಚಂದ್ರನವರ ಅದ್ದೂರಿ ನಿಶ್ಚಿತಾರ್ಥದ ಸುಂದರ ಫೋಟೋಗಳು ಇಲ್ಲಿವೆ ನೋಡಿ!!

advertisement

ಸದ್ಯ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಒಂದಾದ ಮೇಲೆ ಮತ್ತೊಂದಂತೆ ಶುಭಕಾರ್ಯಗಳು ಜರುಗುತ್ತಲೇ ಇದೆ. ಕೆಲವರು ಶ್ರೀಮಂತ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡರೆ ಮತ್ತು ಹಲವರು ಮದುವೆ ನಿಶ್ಚಿತಾರ್ಥದ ಸುಂದರ ಫೋಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅದರಂತೆ ಪ್ರಜ್ವಲ್ ದೇವರಾಜ್(Prajwal Devraj) ಅವರ ಮನೆಯಲ್ಲಿಯೂ ಮದುವೆ ಸುದ್ದಿ ಹರಿದಾಡುತ್ತಿದ್ದು ರಾಗಿಣಿ ಚಂದ್ರನ್(Ragini Chandran) ಅವರ ಸಹೋದರಿ ಕನ್ನಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರ ಹಾಕಿದ್ದಾರ.

advertisement

ತಮ್ಮ ಬಹುಕಾಲದ ಗೆಳೆಯನ್ನು ಪ್ರೀತಿಸಿ ಅವರೊಂದಿಗೆ ಮದುವೆಗಳು ಸಜ್ಜಾಗಿರುವ ಕನ್ನಿಕಾ ಚಂದ್ರನವರ ಲವ್ ಸ್ಟೋರಿಗೆ ಮನೆಯವರಿಂದ ಗ್ರೀನ್ ಸಿಗ್ನಲ್ ದೊರೆತ ನಂತರ ಬಹಳ ಸಿಂಪಲ್ಲಾಗಿ ಮನೆಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಖುಷಿ ವಿಚಾರವನ್ನು ಬಯಲು ಮಾಡಿದ್ದಾರೆ. ಸದಾ ತಮ್ಮ ಸಹೋದರಿ ರಾಗಿಣಿ ಚಂದ್ರನವರೊಂದಿಗೆ ರೀಲ್ಸ್ ವಿಡಿಯೋಗಳು ಹಾಗೂ ಫೋಟೋಗಳನ್ನು ಮಾಡುತ್ತಾ ನೆಟ್ಟಿಗರ ಗಮನ ಸೆಳೆದಿದಂತಹ ಕನ್ನಿಕಾ ಚಂದ್ರನವರು ಸುದರ್ಶನ್ ಜೈನ್(Sudarshan Jain) ಎಂಬ ತಮ್ಮ ಕಾಲೇಜು ದಿನಗಳ ಗೆಳೆಯನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದು.

advertisement

ಮನೆಯಲ್ಲಿ ಬಹಳ ಸರಳವಾಗಿ ನಿಶ್ಚಿತಾರ್ಥದ ಕಾರ್ಯಕ್ರಮವು ಜರುಗಿದೆ. ಈ ವಿಶೇಷ ಸಂದರ್ಭಕ್ಕೆ ಡೈನಮಿಕ್ ಹೀರೋ ದೇವರಾಜ್ ದಂಪತಿಗಳು ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ ಚಂದ್ರನ್ ಕೂಡ ಭಾಗಿಯಾಗಿದ್ದು, ಈ ಶುಭ ಕಾರ್ಯಕ್ರಮದಲ್ಲಿ ದೇವರಾಜ್ ಕುಟುಂಬಸ್ಥರು ಟ್ರೆಡಿಶನಲ್ ಉಡುಪಿನಲ್ಲಿ ಗಮನ ಸೆಳೆದಿದ್ದಾರೆ. ಹೌದು ಗೆಳೆಯರೇ ರಾಗಿಣಿ ಚಂದ್ರನ್(Ragini Chandran) ತಮ್ಮ ಗೋಲ್ಡನ್ ಬಣ್ಣದ ರೇಷ್ಮೆ ಸೀರೆ ಉಟ್ಟು ಹಣೆ ತುಂಬಾ ಬಿಂದಿ ಹಾಗೂ ಮೂಡಿ ತುಂಬಾ ಹೂವನ್ನು ಮುಡಿದುಕೊಂಡು ಬಹಳ ಮೋಹಕವಾಗಿ ಕಾಣಿಸಿಕೊಂಡರೆ.

advertisement

advertisement

ಪ್ರಜ್ವಲ್ ದೇವರಾಜ್ ಅವರು ಬಹಳ ಸಿಂಪಲ್ ಆದ ಕಪ್ಪು ಬಣ್ಣದ ಶಾರ್ಟ್ ಪ್ಯಾಂಟ್ ನಲ್ಲಿ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಮೊನ್ನೆಯಷ್ಟೇ ನಿಶ್ಚಿತಾರ್ಥ ಮುಗಿದಿರುವ ರಾಗಿಣಿ ಚಂದ್ರನ್ ಅವರ ಮನೆಯಲ್ಲಿ ಮದುವೆಯ ಭರ್ಜರಿ ತಯಾರಿಯೂ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನಡೆಯಲಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದ ಮೂಲಕ ರಾಗಿಣಿ ಚಂದ್ರನ್(Ragini Chandran) ಮತ್ತು ಕನ್ನಿಕ ಚಂದ್ರನ್(Kannika Chandran) ಸಹೋದರಿಯರು ಸುಂದರ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರನ್ನು ರಂಜಿಸುತ್ತಿದ್ದಾರೆ.

advertisement

advertisement

ತಮ್ಮ ಸಹೋದರಿಯಂತೆ ಡ್ಯಾನ್ಸರ್, ಕೊರಿಯೋಗ್ರಾಫರ್ ಹಾಗೂ ಫಿಟ್ನೆಸ್ ಟ್ರೈನರ್ ಆಗಿರುವಂತಹ ಕನಿಕ ಚಂದ್ರನ್ ರಾಗಿಣಿ ಅವರೊಂದಿಗೆ ಸೇರಿ ಯು ರಿದಮಿಕ್ಸ್ ಎಂಬ ಫಿಟ್ನೆಸ್ ಅಕಾಡೆಮಿ ಒಂದನ್ನು ನಡೆಸುತ್ತಿದ್ದು ಇದರ ಜೊತೆ ಜೊತೆಗೆ ಇವೆಂಟ್ ಮ್ಯಾನೇಜರ್ ಕೆಲಸದಲ್ಲಿ ಪಡಿಕೊಂಡಿದ್ದಾರೆ.

advertisement

Leave A Reply

Your email address will not be published.