7 Hot News
A Karnataka Times Affiliate Kannada News Portal

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹಾಗೂ ಸಹೋದರ ರಕ್ಷಿತ್ ಶಿವರಾಂ ಅವರ ಬಾಂಧವ್ಯ ಹೇಗಿತ್ತು ಗೊತ್ತಾ? ಫೋಟೋಗಳು ವೈರಲ್!!

advertisement

ಸ್ಯಾಂಡಲ್‌ವುಡ್‌ ‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಪ್ರವಾಸಕ್ಕೆಂದು ಬ್ಯಾಂಕಾಕ್‌ (Bankak) ಗೆ ತೆರಳಿದ್ದರು. ಅಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇದೀಗ ಕುಟುಂಬವು ಸ್ಪಂದನಾನವರನ್ನು ಕಳೆದುಕೊಂಡು ದುಃಖದಲ್ಲಿದೆ. ಅದರಲ್ಲೂ ನಟ ವಿಜಯ್ ರಾಘವೇಂದ್ರರವರು ತನ್ನ ಮುದ್ದಿನ ಮಡದಿ ಸ್ಪಂದನಾ ಇಲ್ಲವಾಗಿ ಒಬಂಟಿ ಭಾವ ಅವರನ್ನು ಕಾಡುತ್ತಿದೆ.

advertisement

ಅಂದಹಾಗೆ, ಸ್ಪಂದನಾ ಇಲ್ಲವಾದ ಬಳಿಕ ಅವರ ಒಂದಷ್ಟು ಹಳೆಯ ಫೋಟೊಗಳು ಹಾಗೂ ಬಾಲ್ಯದ ನೆನಪುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಫೋಟೋವನ್ನು ನೋಡುತ್ತಿದ್ದಂತೆ ಅಭಿಮಾನಿಗಳು ತೀರಾ ಭಾವುಕರಾಗಿದ್ದಾರೆ. ಅದಲ್ಲದೇ, ಸ್ಪಂದನಾನವರು ಅಣ್ಣನ ಜೊತೆಗೆ ಇರುವ ಫೋಟೋವೊಂದು ವೈರಲ್ ಆಗಿದೆ. ಈ ವಫೋಟೋವು ಸ್ಪಂದನಾ ಹಾಗೂ ರಕ್ಷಿತ್ ಶಿವರಾಂ (Rakshit Shivaram) ನಡುವಿನ ಬಾಂಧವ್ಯವನ್ನು ಸಾರುತ್ತಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಸ್ಪಂದನಾ ದೈಹಿಕವಾಗಿ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

advertisement

ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯ ‘ನಮ್ ಕಥೆ ನಿಮ್ ಜೊತೆ’ (Nam Kathe Nim Jothe)ಸಂದರ್ಶನದಲ್ಲಿ ಸ್ಪಂದನಾ ಅವರ ಬಾಲ್ಯದ ದಿನಗಳ ಬಗ್ಗೆ ಅಣ್ಣ ರಕ್ಷಿತ್‌ ಮಾತನಾಡಿದ್ದರು. ಈ ವೇಳೆಯಲ್ಲಿ ಮಾತನಾಡಿದ್ದದ್ದ ರಕ್ಷಿತ್ ಶಿವರಾಂ, ” ಅಪ್ಪ ಶಿಸ್ತಿನ ವ್ಯಕ್ತಿಯಾದರೂ ಸ್ಪಂದನಾ ಜತೆ ಅಷ್ಟೇನೂ ಸ್ಟ್ರಿಕ್ಟ್ ಆಗಿ ಇರುತ್ತಿರಲಿಲ್ಲ. ಸ್ಪಂದನಾ ಚಿಕ್ಕಂದಿನಲ್ಲಿ ಬಹಳ ಸೈಲೆಂಟ್ ಆಗಿ ಇರುತ್ತಿದ್ದರು.

advertisement

advertisement

advertisement

ಏನೇ ಇದ್ದರೂ ಸಂಜೆ ತಂದೆ ಮನೆಗೆ ಬಂದಮೇಲೆ ಹೇಳುತ್ತಿದ್ದರು. ಅದಕ್ಕೇ ಅವಳನ್ನು ಚಾಡಿಬುರುಕಿ ಎಂದು ಕರೆಯುತ್ತಿದ್ದದ್ದು. . ಚಿಕ್ಕವಳಿದ್ದಾಗ ಅತೀ ಕಡಿಮೆ ಬಟ್ಟೆ ಹಾಕುತ್ತಿದ್ದಳು. ಅದಕ್ಕೆ ಅಪ್ಪ ಪ್ರೀತಿಯಿಂದ ʻಮೋಗ್ಲಿʼ ಎಂದು ಕರೆಯುತ್ತಿದ್ದರು” ಎಂದು ಹೇಳಿಕೊಂಡಿದ್ದರು. ಅದಲ್ಲದೇ, ಕೋಪ ಬಂದಾಗ ಯಾರು ಏನೇ ಮಾಡಿದರೂ ತಕ್ಷಣ ಯಾರ ಬಳಿಯಾದರೂ ಸ್ಪಂದನಾ ಪ್ರತಿಕ್ರಿಯಿಸಿಬಿಡುತ್ತಿದ್ದಳು.

advertisement

advertisement

ಚಿತ್ರರಂಗದ ವ್ಯಕ್ತಿಗೆ ಸ್ಪಂದನಾರನ್ನು ಮದುವೆ ಮಾಡಿಕೊಡಬೇಕು ಎಂದಾಗ ಮನೆಯವರು ಬಹಳ ಯೋಚನೆ ಮಾಡಿದ್ದೆವು. ಎಲ್ಲರೂ ಇಷ್ಟಪಡುವಂತಹ ಸಜ್ಜನ, ಸರಳ ವ್ಯಕ್ತಿ ನನ್ನ ಭಾವನಾಗಿ ಬಂದಿದ್ದು ನಮ್ಮ ಅದೃಷ್ಟ” ಎಂದಿದ್ದರು. ಆದಾದ ಬಳಿಕ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್‌ ರಾಘವೇಂದ್ರ (Vijay Raghavendra) ರವರು ಸ್ಪಂದನಾ ಜೋಡಿ 16 ವರ್ಷ ಯಶಸ್ವಿ ಜೀವನ ಸಾಗಿಸಿದ್ದರು. ಶೌರ್ಯ (Shourya) ಎಂಬ ಮಗ ಇದ್ದಾನೆ. ಸುಖವಾಗಿ ಸಂಸಾರ ಮಾಡಬೇಕಾಗಿದ್ದ ಈ ಜೋಡಿಯ ಬಾಳಲ್ಲಿ ವಿಧಿಯು ಸ್ಪಂದನಾಳನ್ನು ಕಿತ್ತುಕೊಂಡದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

advertisement

Leave A Reply

Your email address will not be published.