PhotoGrid Site 1671511576997

ಬಸ್ ಓಡಿಸುವ ಶೈಲಿ ನೋಡಿ ಫೀದಾ ಆದ ಯುವತಿ, 54 ವರ್ಷದ ಬಸ್ ಚಾಲಕನನ್ನು ಮದುವೆಯಾದ 24 ವರ್ಷದ ಯುವತಿ! ಶಾಕ್ ಆದ ಆಟೋ, ಲಾರಿ ಚಾಲಕರು ನೋಡಿ!!

ಸುದ್ದಿ

ಪ್ರೀತಿ ಪ್ರೇಮದ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ. ಇಂತಹ ಮಾತನ್ನು ನಾವು ಆಗಾಗ ಕೆಲವರ ಬಾಯಲ್ಲಿ ಕೇಳುತ್ತೇವೆ. ಆದರೆ ಕೆಲವು ಜೋಡಿಗಳು ಅಕ್ಷರಶಃ ಈ ಮಾತನ್ನು ನಿಜವಾಗಿಸುತ್ತಾರೆ. 50 ವರ್ಷದ ಬಸ್ ಚಾಲಕರನ್ನ 24 ವರ್ಷದ ಹುಡುಕಿಗೆ ಒಬ್ಬಳು ಮದುವೆ ಆಗಿರುವ ಘಟನೆ ಈ ಮಾತಿಗೆ ಪುಷ್ಟಿ ನೀಡುತ್ತದೆ. ಬಸ್ ಚಾಲಕನು, ಎಲ್ಲರ ವಿರೋಧದ ನಡುವೆಯೂ 24 ವರ್ಷದ ಹುಡುಗಿಯ ಜೊತೆ ಪ್ರೀತಿಯಲ್ಲಿ ಪ್ರೀತಿ ಇದ್ದಾನೆ ಈ ಪ್ರೇಮ ಕಥೆ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.

24 ವರ್ಷದ ಹುಡುಗಿಯ ಹೆಸರು ಶಹಜಾದಿ. ಹಾಗೂ 50 ವರ್ಷದ ಬಸ್ ಡ್ರೈವರ್ ಹೆಸರು ಸಾಧಿಕ್. ಪಾಕಿಸ್ತಾನದ ಪಂಜಾಬ್ ರಾಜ್ಯದ ಚನ್ನು ನಿಂದ ಲಾಹೋರ್ ಗೆ ದಿನವೂ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಶೇಹಜಾದಿ ಗೆ ಸಾಧಿಕ್ ಮೇಲೆ ಪ್ರೀತಿಯಾಗಿದೆ. ಪಾಕಿಸ್ತಾನದ ಯೂಟ್ಯೂಬ್ ಸೈಯದ್ ಬಸೀತ್ ಅಲಿ ಈ ದಂಪತಿಗಳ ಸಂದರ್ಶನ ಮಾಡಿದ್ದಾರೆ.

ಸದ್ಯ ದಂಪತಿಗಳು ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೆಟ್ರೋ ಹಾಡುಗಳು ನನ್ನನ್ನು ಸಾಧಿಕ್ ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ದು ಎಂದು ಶಹಜಾದಿ ಸಂದರ್ಶನದಲ್ಲಿ ಹೇಳಿದ್ದಾರೆ. ಸಾಧಿಕ್ ಮಾತನಾಡುವ ಶೈಲಿ, ಆತನ ಆಟಿಟ್ಯೂಡ್, ಬಸ್ ಓಡಿಸುವ ರೀತಿ ಇವೆಲ್ಲವನ್ನ ಶಹಜಾದಿ ಮೊದಲು ಪ್ರೀತಿಸಿದಳು.

ಶಹಜಾದಿ ಪ್ರತಿದಿನ ಬಸ್ ನಲ್ಲಿ ಚನ್ನುವಿನಿಂದ ಲಾಹೋರ್ ಗೆ ಪ್ರಯಾಣ ಮಾಡುತ್ತಿದ್ದಳು ಅವಳ ನಿಲ್ದಾಣವೇ ಕೊನೆಯದು. ಸಾಧಿಕ್ ಪ್ರಯಾಣದುದ್ದಕ್ಕೂ ಪ್ರತಿದಿನ ರೆಟ್ರೋ ಹಾಡುಗಳನ್ನು ಹಾಕುತ್ತಿದ್ದರು. ಇದು ಶಹಜಾದಿ ಸಾಧಿಕ್ ಮೇಲೆ ಪ್ರೀತಿ ಉಂಟಾಗಲು ಕಾರಣವಾಗಿದೆ. ತಮ್ಮ ಪ್ರೇಮ ಕಥೆಯ ಬಗ್ಗೆ ಹೇಳಿದ ಶೆಹಜಾದಿ ನಮ್ಮ ಪ್ರೇಮ ಕಥೆಯಲ್ಲಿ ದೊಡ್ಡ ಸವಾಲ್ ಎಂದರೆ ನಾವು ಪರಸ್ಪರ ಪ್ರೀತಿ ನಿವೇದನೆ ಮಾಡಿಕೊಳ್ಳಲು ತಡವರಿಸಿದ್ದು.

ಕೊನೆಗೆ ಒಂದು ದಿನ ಧೈರ್ಯ ಮಾಡಿ ಸಾಧಿಕ್ ಬಳಿ ನನ್ನ ಪ್ರೀತಿ ನಿವೇದನೆ ಮಾಡಿಕೊಂಡೆ. ಆದರೆ ಸಾಧಿಕ್ ಮೊದಲಿಗೆ ಆಕೆಯ ಪ್ರೀತಿಯನ್ನು ವಿರೋಧಿಸುತ್ತಾನೆ. ನಂತರ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂದು ಶೇಹಜಾದಿ ಸಾಧಿಕ್ ಗೆ ಅರ್ಥ ಮಾಡಿಸುತ್ತಾಳೆ. ಇದೀಗ ಇಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಈ ಜೋಡಿ ಆ ಪ್ರೇಮ ಕಥೆ ಸದ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು ಪಾಕಿಸ್ತಾನದಲ್ಲಿ ಈ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.

ಸೈಯದ್ ಬಸೀದ್ ಅಲಿ ಅವರೊಂದಿಗೆನ ಸಂದರ್ಶನವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಸುಮಾರು 13 ಲಕ್ಷಕ್ಕೂ ಹೆಚ್ಚು ಸಲ ವೀಕ್ಷಣೆಯಾಗಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಈ ಪ್ರೇಮಕಥೆಯನ್ನು ಬೆಂಬಲಿಸಿ ಸಾಕಷ್ಟು ಕಮೆಂಟ್ ಮಾಡಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಇದು ನಿಜವಾದ ಪ್ರೀತಿ ಎಂದು ಹೊಗಳಿದ್ದಾರೆ. ಈ ಪ್ರೀತಿಯ ಕಥೆಯ ಕಥೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *