7 Hot News
A Karnataka Times Affiliate Kannada News Portal

ಸಾವಿರಾರು ಕೋಟಿ ದಾನ ಮಾಡಿರುವ ಸರಳತೆಯ ಶ್ರೀಮಂತ ರತನ್ ಟಾಟಾ ರವರ ನಂತರ ಅವರ ಎಲ್ಲಾ ಆಸ್ತಿ ಯಾರಿಗೆ ಸೇರಲಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

advertisement

ದೇಶದಾದ್ಯಂತ ಇರುವಂತಹ ಪ್ರತಿಷ್ಠಿತ ಉದ್ಯಮಿಗಳಲ್ಲಿ ಹಿರಿಯ ಉದ್ಯಮಿ ಆದಂತಹ ರತನ್ ಟಾಟಾ(Ratan Tata) ಅವರ ಟಾಟಾ ಗ್ರೂಪ್ಸ್ ಕೂಡ ಒಂದು. ಹಲವು ವರ್ಷಗಳ ಕಾಲ ಅದ್ಭುತ ಕಾರ್ಯಕ್ಷಮತೆ ಶ್ರದ್ಧೆ ಯಿಂದ ಕೆಲಸ ಮಾಡಿ ಟಾಟಾ ಕಂಪನಿ ಎಂಬ ಭದ್ರ ಕೋಟೆಯನ್ನು ರತನ್ ಟಾಟಾರವರು ಕಟ್ಟಿದ್ದಾರೆ ಆದರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ 85 ವರ್ಷ ವಯಸ್ಸಾದರೂ ಕೂಡ ರತನ್ ಟಾಟಾ(Ratan Tata) ಅವರು ಮದುವೆ ಮಾಡಿಕೊಳ್ಳುವಂತಹ ನಿರ್ಧಾರವನ್ನೆ ತೆಗೆದುಕೊಂಡಿಲ್ಲ.

advertisement

ಈ ಹಿಂದೆ ಸಂದರ್ಶನಗಳಲ್ಲಿ ರತನ್ ಟಾಟಾ ಅವರೇ ಹೇಳಿರುವ ಹಾಗೆ ನಾಲ್ಕು ಬಾರಿ ತಮ್ಮ ವೈಯಕ್ತಿಕ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹಿನ್ನಡೆಯಾಗಿದ್ದರಂತೆ. ಹೌದು ಗೆಳೆಯರೇ ನಮ್ಮ ವೃತ್ತಿ ಬದುಕಿನಲ್ಲಿ ಎದುರಾದಂತಹ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ 25 ಲಕ್ಷ ಕೋಟಿ ಬೆಲೆಬಾಳುವಂತಹ ಟಾಟಾ ಸಂಸ್ಥೆಯನ್ನು ನಿರ್ಮಾಣ ಮಾಡಿರುವಂತಹ ಉದ್ಯಮಿ ರತನ್ ಟಾಟಾ ಅವರಿಗೆ ಮದುವೆ ಎಂದರೆ ಭಯವಾಗಿತ್ತಂತೆ.

advertisement

advertisement

ಹೀಗಾಗಿ ರತನ್ ಟಾಟಾ(Ratan Tata) ತಮ್ಮ ಜೀವನಪರ್ಯಂತ ಮದುವೆಯಾಗದೆ ಉಳಿದಿದ್ದಾರೆ. ಇಂತಹ ಇಳಿ ವಯಸ್ಸಿನಲ್ಲಿಯೂ ಕೋಟಿ ಕೋಟಿ ವ್ಯವಹಾರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವಂತಹ ರತನ್ ಟಾಟಾ(Ratan Tata) ಅವರು ತಮ್ಮ ಆದಾಯದಲ್ಲಿ 65% ಆದಾಯವನ್ನು ಬಡವರ ನಿರ್ಗತಿಕರ ಸಹಾಯಕ್ಕೆಂದು ಬಳಸುತ್ತಾ ಸಾಕಷ್ಟು ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

advertisement

ಹೀಗಿರುವಾಗ ಸದ್ಯ ಸಾಮಾಜಿಕ ಜಾಲತಾಣದ ತುಂಬೆಲ್ಲ ಟಾಟಾ ಸಂಸ್ಥೆಯ(Tata Company) ಮುಂದಿನ ಉತ್ತರ ಅಧಿಕಾರಿ ಯಾರಾಗಲಿದ್ದಾರೆ? ಎಂಬ ಚರ್ಚೆ ಬಲು ಜೋರಾಗಿ ಕೇಳಿ ಬರುತ್ತಿದ್ದು ಅವರ ಸಂಪೂರ್ಣ ಆಸ್ತಿಯ ಮಾಲೀಕರು ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಹೌದು ಗೆಳೆಯರೇ ರತನ್ ಟಾಟಾ(Ratan Tata) ಅವರಿಗೆ ನೋಯಲ್ ಟಾಟಾ(Noel Tata) ಎಂಬ ಸಹೋದರನಿದ್ದು ಇವರು ಆಲು ಮೇಸ್ತ್ರಿ ಎಂಬುವರನ್ನು ಮದುವೆಯಾಗಿದ್ದಾರೆ.

advertisement

ದಂಪತಿಗಳಿಗೆ ಲೇಹ ಟಾಟಾ, ನೇವಿಲ್ಲೆ ಟಾಟಾ ಮತ್ತು ಮಾಯಾ ಟಾಟಾ ಎಂಬ ಮೂವರು ಮಕ್ಕಳಿದ್ದು ಎಲ್ಲರೂ ಕೈಗಾರಿಕೋದ್ಯಮ ಹಾಗೂ ಮಾಡ್ರನ್ ಮಾರ್ಕೆಟಿಂಗ್ ಬಿಸಿನೆಸ್(Marketing business) ನಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ. ಈ ದಂಪತಿಗಳ ಕಿರಿಯ ಮಗಳಾಗಿರುವಂತಹ ಮಾಯಾ ಟಾಟಾ (Maya Tata) ಅವರು ಹಲವು ವರ್ಷಗಳಿಂದ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಅದರ ಹಾಗೂ ಹೋಗುಗಳನ್ನು ನೋಡಿಕೊಳ್ಳುತ್ತಿದ್ದು ಇದರ ಜೊತೆಗೆ ಟಾಟಾ ಡಿಜಿಟಲ್ ನಲ್ಲಿಯೂ ತಮ್ಮ ಹೆಚ್ಚಿನ ಗಮನವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರತನ್ ಟಾಟಾ ಅವರ ಸಹೋದರರ ಮಕ್ಕಳಾದ ಲೇಹ ಮಾಯ ಮತ್ತು ನೇವಿಲ್ಲೆ ಟಾಟಾ ಸಂಸ್ಥೆಯ ಉತ್ತರ ಅಧಿಕಾರಿ ಸ್ಥಾನಕ್ಕೆ ಏರಬಹುದು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

advertisement

Leave A Reply

Your email address will not be published.