ಸ್ನೇಹಿತರೆ, ಕಳೆದ ಕೆಲವು ದಿನಗಳ ಹಿಂದೆ 60ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಒಬ್ಬರ ಫೋಟೋ ಬಾರಿ ವೈರಲ್ ಆಗಿ ನಾನಾ ರೀತಿಯ ಚರ್ಚೆಗೂ ಗ್ರಾಸವಾಗಿತ್ತು. ಅದುವೇ ಪಂಚ ಭಾಷೆಯ ಸ್ಟಾರ್ ನಟ ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ ಬರುವ (Roopali Baruva) ಅವರದು. ಹೀಗೆ ಮೊಮ್ಮಕ್ಕಳನ್ನು ಎತ್ತಿ ಆಡಿಸುವ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಎಂಬ ಸಾಕಷ್ಟು ಟೀಕೆಗಳು ಕೇಳಿ ಬಂದರು.
ಯಾವುದಕ್ಕೂ ತಲೆಗೂಡದೆ ಅನ್ಯೂನ್ಯವಾಗಿ ಜೀವನ ನಡೆಸುತ್ತಿರುವ ಈ ಜೋಡಿಗಳು ತಮ್ಮ ಸಂಸಾರದ ಸುಂದರ ನೆನಪುಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿದ್ದಾರೆ. ಹೌದು ಗೆಳೆಯರೇ ನಟ ಆಶಿಶ್ ವಿದ್ಯಾರ್ಥಿಯವರು ತಮ್ಮ ಮೊದಲ ಪತ್ನಿ ರಾಜೋಶಿ ಬರುವಾ(Rajoshi Baruva) ಎಂಬಾಕೆಯೊಂದಿಗೆ ದಂಪತಿಯ ಜೀವನಕ್ಕೆ ಕಾಲಿಟ್ಟರು.
ಈ ದಂಪತಿಗಳಿಗೆ ಅರ್ಥ ವಿದ್ಯಾರ್ಥಿ (Artha Vidyarthi) ಎಂಬ ಮಗನಿದ್ದು ಆತ ಕೂಡ ಸಿನಿಮಾ ರಂಗದಲ್ಲಿ ನಟ ಬರಹಗಾರ ಹಾಗೂ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ವೈಯಕ್ತಿಕ ಮನಸ್ತಾಪಗಳು ಇವರಿಬ್ಬರ ದಾಂಪತ್ಯ ಜೀವನದಲ್ಲಿ ಚಿಗುರೊಡೆದ ಕಾರಣ ಆಶಿಶ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಕೆಲ ಕಾಲ ಒಂಟಿಯಾಗಿ ಜೀವನ ನಡೆಸುತ್ತಿದ್ದರು.
ಅನಂತರ ಕಲ್ಕತ್ತಾದಲ್ಲಿ ರೂಪಾಲಿಯವರ ಪರಿಚಯವಾಗುತ್ತದೆ ಐವತ್ತು ವರ್ಷದ ಉದ್ಯಮಿಯ ಮೇಲೆ ಆಶಿಶ್ ವಿದ್ಯಾರ್ಥಿಗೆ(Ashish vidyarthi) ಪ್ರೀತಿ ಉಂಟಾಗಿ ತಮ್ಮಿಬ್ಬರ ಅದ್ಭುತವಾದ ಸ್ನೇಹ ಸಂಬಂಧವನ್ನು ಪ್ರೀತಿಗೆ ತಿರುಗಿಸೋಣವೇ ಎಂದು ರೂಪಾಲಿಯವರಿಗೆ ಪ್ರೇಮ ನಿವೇದನೆಯನ್ನು ಮಾಡಿದರು.
ರೂಪಾಲಿ ಬರುವ ಕೂಡ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಕಾರಣ ಆಶಿಶ್ ವಿದ್ಯಾರ್ಥಿಯವರು ಹೇಳಿದೊಡನೆ ಒಪ್ಪಿಕೊಂಡು ಮನೆಯವರೆಲ್ಲರ ಒಪ್ಪಿಗೆಯ ನಡುವೆ ಕೊಲ್ಕತ್ತಾದ ರಿಜಿಸ್ಟರ್ ಆಫೀಸ್ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಮದುವೆಯಾದ ನಂತರ ತಮ್ಮ ಎರಡನೇ ಸಾಂತರಿಕ ಜೀವನವನ್ನು ಬಹಳ ಸುಖಕರವಾಗಿ ಕಳೆಯುತ್ತಿರುವ ಆಶಿಶ್ ವಿದ್ಯಾರ್ಥಿ ತಮ್ಮ ಪತ್ನಿಯೊಂದಿಗಿನ ಸಾಲು ಸಾಲು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ(social media) ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಇವರಿಬ್ಬರ ಫೋಟೋಗಳು ನಟ್ಟಿಗರ ಗಮನವನ್ನು ಸೆಳೆಯುತ್ತಿದ್ದು ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಾ ನವ ಜೋಡಿಯನ್ನು ಕೊಂಡಾಡುತ್ತಿದ್ದಾರೆ.