7 Hot News
A Karnataka Times Affiliate Kannada News Portal

ನಟಿ ಆಶೀಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಅವರ ಮದುವೆ ಸಂಭ್ರಮ, ಮುದ್ದಾದ ಗೊಂಬೆಯ ಅರಿಶಿಣ ಶಾಸ್ತ್ರದ ಫೋಟೋಸ್ ಇಲ್ಲಿದೆ ನೋಡಿ!!

advertisement

ಕನ್ನಡ ಸಿನಿಮಾ ಇಂಡಸ್ಟ್ರಿಯ ಮಿಲ್ಕಿ ಬ್ಯೂಟಿಯಂದೇ ಕರಿಯಲ್ಪಡುವ ಆಶಿಕಾ ರಂಗನಾಥ್ (Ashika Ranganath) ಅವರ ಸಹೋದರಿ ಅನುಷಾ ರಂಗನಾಥ್(Anusha Ranganath) ಅವರು ನಿನ್ನೆ ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದೆ. ಗೋಕುಲದಲ್ಲಿ ಸೀತೆ ಎಂಬ ಧಾರಾವಾಹಿಯ ಮೂಲಕ ತಮ್ಮ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದಂತಹ ಅನುಷಾ ರಂಗನಾಥ್ ಅವರು ಪ್ರಸಿದ್ಧಿ ಸಿನಿಮಾಗಳಲ್ಲಿಯೂ ಅಭಿನಯಿಸಿ ಮನೆಮಾತಾದರು.

advertisement

ಇಷ್ಟೇ ಅಲ್ಲದೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಮೂಲಕ ಬೆಳ್ಳಿತೆರೆಯಲ್ಲೂ ಸದ್ದು ಮಾಡಿದಂತಹ ಅನುಷಾ ರಂಗನಾಥ್(Anusha Ranganath) ನಟಿಯಾಗಿ ಮಾತ್ರವಲ್ಲದೆ ಇಂಟೀರಿಯರ್ ಡಿಸೈನರ್ ಆಗಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇದೀಗ ತಮ್ಮ ವೃತ್ತಿ ಬದುಕಿನಿಂದ ಕೊಂಚ ಬ್ರೇಕ್ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ರೆಸಾರ್ಟ್ ಒಂದರಲ್ಲಿ ತಮ್ಮ ಸಹೋದರಿ ಆಶಿಕ ರಂಗನಾಥ ನಟಿ ಸಿರಿ ಪ್ರಹ್ಲಾದ, ಸುಶ್ಮಿತಾ ಗೌಡ, ತೇಜಸ್ವಿನಿ, ಅನುಷಾ ರಂಗನಾಥ್ ಅವರಿಗೆ ಬ್ರೈಡಲ್ ಪಾರ್ಟಿ ನೀಡಿದ್ದಾರೆ.

advertisement

advertisement

advertisement

ಅದರ ಕೆಲ ಸುಂದರ ಫೋಟೋಗಳನ್ನು ನಟಿ ಅನುಷಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಹೊಸ ಬದುಕಿಗೆ ಕಾಲಿಡುತ್ತಿರುವಂತಹ ಸಂತಸದ ಸುದ್ದಿಯನ್ನು ಹಂಚಿಕೊಂಡರು. ಅದರಂತೆ ಮೊನ್ನೆ ಅರಿಶಿಣ ಶಾಸ್ತ್ರದ ಕೆಲ ಸುಂದರ ಫೋಟೋಗಳನ್ನು ತಮ್ಮ instagram ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದ ಅನುಷಾ ಕುಟುಂಬಸ್ಥರು ಸ್ನೇಹಿತರು ಹಾಗೂ ಕೆಲ ಸಿನಿಮಾ ರಂಗದ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ತಮ್ಮ ಬಹುಕಾಲದ ಗೆಳೆಯನೊಂದಿಗೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ(Married life) ಕಾಲಿಟ್ಟಿದ್ದಾರೆ.

advertisement

advertisement

ಇವರ ವಿಶೇಷ ಮದುವೆ ಕಾರ್ಯಕ್ರಮಕ್ಕೆ ಎಲ್ಲರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು ಹಲವರು ಅನುಷಾ ರಂಗನಾಥ್ ಮತ್ತು ಆಕೆಯ ಪತಿಯ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಹಾರೈಸುತ್ತಿದ್ದಾರೆ. ಇನ್ನೂ ಆಶಿಕಾ ರಂಗನಾಥ್(Ashika Ranganath) ತಮ್ಮ ಗೆಳತಿಯರ ಬಳಗದೊಂದಿಗೆ ಅನುಷಾ ರಂಗನಾಥ್ ಅವರ ನೆಚ್ಚಿನ ಹಾಡುಗಳಿಗೆ ಕುಣಿದು ಕುಪ್ಪಳಿಸುವ ಮೂಲಕ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.

advertisement

Leave A Reply

Your email address will not be published.