ಅಮೃತವರ್ಷಿಣಿ ಖ್ಯಾತಿಯ ರಜಿನಿ ಅವರ ವರ್ಕೌಟ್ ವಿಡಿಯೋ ನೋಡಿ..!!

मनोरञ्जन

ಸ್ನೇಹಿತರೆ, ಕೆಲವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾದ ಹೊಸತರಲ್ಲಿ ಆರಂಭವಾದ ಧಾರಾವಾಹಿ “ಅಮೃತವರ್ಷಿಣಿ”. ಈ ಧಾರಾವಾಹಿಯಲ್ಲಿ ಹಿರಿಯ ಕಲಾವಿದೆಯಾದ ಹೇಮಚೌಧರಿ ಅವರು ಸಹ ಇದ್ದರು. ಜೊತೆಗೆ ಅಮೃತವರ್ಷಿಣಿ ಸೀರಿಯಲ್ ಮೂಲಕ ಅದೆಷ್ಟೋ ಯುವ ಪ್ರತಿಭೆಗಳ ಪರಿಚಯ ಕನ್ನಡ ಕಿರುತೆರೆಗೆ ಆಯ್ತು. ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿಯಾಗಿ ಅಮೃತ ಪಾತ್ರ ನಿರ್ವಹಿಸಿದ ನಟಿ ರಜಿನಿ ಮುಗ್ಧವಾದ ನಟನೆಯಿಂದ ಕರ್ನಾಟಕದ ಮನೆಮಾತಾಗಿದ್ದರು. ಹೌದು ಅನಕ್ಷರಸ್ಥ ಸೊಸೆ ಅಮೃತಾಗೆ ಅತ್ತೆ ಶಾಕುಂತಲ ವಿದ್ಯೆ ಕಲಿಸಿ ಒಳ್ಳೆಯ ಗೃಹಿಣಿ, ಬುದ್ಧಿವಂತ ಹೆಣ್ಣಾಗಿ ಮಾಡುವ ಕಥೆಯನ್ನು ಈ ಧಾರಾವಾಹಿ ಹೊಂದಿತ್ತು. ಅನೇಕರು ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟು ಪ್ರತಿನಿತ್ಯ ತಪ್ಪದೆ ನೋಡುತ್ತಿದ್ದರು.

ಬರೋಬ್ಬರಿ ಆರು ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿದ್ದು, ಮೊದಲ ಅಡಿಷನಲ್ಲಿ ಧಾರಾವಾಹಿಯ ಲೀಡ್ ರೋಲ್ಗೆ ನಟಿ ರಜಿನಿ ಆಯ್ಕೆಯಾದರು. ಈ ಸೀರಿಯಲ್ನಲ್ಲಿ ತುಂಬಾ ತಾಳ್ಮೆ ಹೊಂದಿದ ಪಾತ್ರ ಎಂದರೆ ಅದು ಅಮೃತ ಪಾತ್ರವಾಗಿತ್ತು, ಎಷ್ಟೋ ಜನ ಪ್ರೇಕ್ಷಕರು ಇದ್ದರೆ ಅಮೃತ ರೀತಿ ಇರಬೇಕು ಎಂದುಕೊಳ್ಳುವಂತೆ ನಟಿ ರಜಿನಿ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಹೀಗೆ ಅಮೃತವರ್ಷಿಣಿ ಧಾರಾವಾಹಿ ಮುಗಿದ ನಂತರ ಬೇರೆ ಧಾರಾವಾಹಿಗಳ ಕೆಲಸದಲ್ಲಿ ಬಿಜಿಯಾಗಿದ್ದ ನಟಿ ರಜನಿಯವರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಕ್ಕತ್ ಆಕ್ಟಿವಾಗಿರುತ್ತಾರೆ. ಇಂತಹ ಅದ್ಭುತ ನಟಿ ಹುಟ್ಟಿದ್ದು ತುಮಕೂರಿನಲ್ಲಾದರೂ ವಾಸಿಸುತ್ತಿರುವುದು ಬೆಂಗಳೂರಿನಲ್ಲಿ.

ಅಮೃತವರ್ಷಿಣಿ ಧಾರಾವಾಹಿಯ ನಂತರ ಅಷ್ಟು ಒಳ್ಳೆಯ ಪಾತ್ರಗಳು ಸಿಗದ ಕಾರಣ ಒಳ್ಳೆಯ ಅವಕಾಶಕ್ಕೆ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಹಲವರು ಈಕೆಯ ಮೂಗು ತುಂಬ ದೊಡ್ಡದಾಗಿದೆ ಎಂದು ಹೇಳಿದ ಕಾರಣಕ್ಕೆ ಈಕೆ ತನ್ನ ಮೂಗಿನ ಸರ್ಜರಿಯನ್ನು ಕೂಡ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾ ಫೈನ್ ಆಗಿರುವ ರಂಜಿನಿ ತಮ್ಮ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೆ ಫಿಟ್ನೆಸ್ ಟಿಪ್ಸ್ಗಳನ್ನು ನೀಡುತ್ತಿದ್ದಾರೆ, ಆ ವಿಡಿಯೋವನ್ನು ಒಮ್ಮೆ ನೀವು ನೋಡಿ ಆನಂದಿಸಿ. ನಟಿ ರಜನಿಯವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *