7 Hot News
A Karnataka Times Affiliate Kannada News Portal

ಮಲ್ಲ ಚಿತ್ರವನ್ನು ನಾನು ಯಾವತ್ತೂ ಮರೆಯೋಲ್ಲ ಎಂದ ಪ್ರಿಯಾಂಕ! ಮಲ್ಲ ಚಿತ್ರದ ನೆನೆದು ಹೇಳಿದ್ದೇನು ನೋಡಿ!!

advertisement

ಬೆಂಗಾಲಿ ಬೆಡಗಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರ ವೃತ್ತಿ ಬದುಕಿಗೆ ಮಹತ್ತರವಾದಂತಹ ಬ್ರೇಕ್ ನೀಡಿದಂತಹ ಸಿನಿಮಾ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ಅವರ ಜೊತೆಗಿನ ಮಲ್ಲ. ಎರಡು ದಶಕಗಳ ಹಿಂದೆಯೇ ಪ್ರಿಯಾಂಕಾ ಉಪೇಂದ್ರ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟು 40ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದರೂ ಕೂಡ ಇಂದಿಗೂ ಪ್ರಿಯಾಂಕ ಉಪೇಂದ್ರ ಹಾಗೂ ರವಿಚಂದ್ರನ್(Ravichandran) ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಮಲ್ಲ ಸಿನಿಮಾಗೆ ವಿಶೇಷವಾದ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.

advertisement

ಹೀಗಿರುವಾಗ ಇತ್ತೀಚಿಗಷ್ಟೇ ಪ್ರಿಯಾಂಕ ಸಂದರ್ಶನ ಒಂದರಲ್ಲಿ ಮಾತನಾಡುವಾಗ ರವಿಚಂದ್ರನ್ ಅವರ ಜೊತೆಗೆ ಮಲ್ಲಾ ಸಿನಿಮಾವನ್ನು ಎಂದಿಗೂ ಮರೆಯೋದಕ್ಕೆ ಆಗಲ್ಲ ಎಂಬ ಹೇಳಿಕೆಯನ್ನು ಪ್ರಿಯಾಂಕ ಉಪೇಂದ್ರ ನೀಡಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಅವರು ಕೇವಲ ಕನ್ನಡ ಸಿನಿಮಾಗಳಿಗೆ ಸೀಮಿತವಾಗದೆ ಹಿಂದಿ ತೆಲುಗು ತಮಿಳು ಹಾಗೂ ಒರಿಯ ಭಾಷೆಗಳಲ್ಲೂ ಅಭಿನಯಿಸಿ ಸೈನಿಸಿಕೊಂಡಿದ್ದಾರೆ.

advertisement

ಇಂದಿಗೂ ಕೂಡ ಮಹಿಳಾ ಪ್ರಧಾನ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುವ ಪ್ರಿಯಾಂಕಾ ಉಪೇಂದ್ರ ಅವರು ನನ್ನ ವೃತ್ತಿ ಬದುಕಿನಲ್ಲಿ ಮೂರು ಸಿನಿಮಾಗಳನ್ನು ಎಂದಿಗೂ ಮರೆಯೋದಕ್ಕೆ ಆಗಲ್ಲ. ಮೊದಲನೆಯದಾಗಿ ನನ್ನ ಬಂಗಾಳಿ ಸಿನಿಮಾ ಸಾಥಿ. ಆ ಸಿನಿಮಾದ ಮೂಲಕವೇ ನಾನು ಇಂಡಸ್ಟ್ರಿಗೆ ಪರಿಚಯಗೊಂಡಿದ್ದು, ಇನ್ನೆರಡು ಚಿತ್ರಗಳು ಕನ್ನಡದ್ದು, ಅವುಗಳಲ್ಲಿ ಒಂದು ಎಚ್ ಟು ಓ.

advertisement

advertisement

ಅದು ನನಗೆ ವೈಯಕ್ತಿಕವಾಗಿ ಹೆಚ್ಚು ಆತ್ಮೀಯವಾದ ಸಿನಿಮಾ, ಸುಮಾರು ಒಂದು ವರ್ಷಗಳ ಕಾಲ ಅದರ ಚಿತ್ರೀಕರಣ ನಡೆದಿತ್ತು. ಅದೇ ಚಿತ್ರದ ಮೂಲಕ ನನಗೆ ಉಪೇಂದ್ರ ಅವರು ಆತ್ಮೀಯರಾದರು. ನನಗೆ ಆಗ ಕನ್ನಡ ಸಿನಿಮಾ ರಂಗ ತುಂಬಾನೇ ಹೊಸದು, ಆ ಡ್ರೆಸ್ಸು ಲೊಕೇಶನ್ ಭಾಷೆ ಕಾವೇರಿಯ ಪಾತ್ರ ಎಲ್ಲವೂ ಹೊಸದೆನ್ನುವ ಹಾಗಿತ್ತು. ನನ್ನ ವಯಸ್ಸು ಚಿಕ್ಕದಾಗಿತ್ತು ಹಾಗಾಗಿ ಎಚ್ ಟು ಓ ಸಿನಿಮಾ ನನಗೆ ಭಾವನಾತ್ಮಕವಾಗಿ ಇಷ್ಟ.

advertisement

ಇನ್ನು ಎರಡನೆಯದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಲ್ಲಾ ಸಿನಿಮಾ ಆ ಚಿತ್ರವೇ ಕನ್ನಡದಲ್ಲಿನ ನನ್ನ ವೃತ್ತಿ ಬದುಕಲ್ಲೊಂದು ಮೈಲ್ ಸ್ಟೋನ್. ನೆಗೆಟಿವ್ ಸಾಫ್ಟ್ ಎಲ್ಲಾ ಶೇಡ್ ಪಾತ್ರವನ್ನು ಕೂಡ ಅದರಲ್ಲಿ ಮಾಡಿದ್ದೆ. ಕಲಾವಿದೆಯಾಗಿ ಅಷ್ಟು ಶೇಡ್ಸ್ ಇರುವ ಪಾತ್ರ ಸಿಗುವುದು ಕಷ್ಟ ಒಂದೊಂದು ಸೀನ್ ನಲ್ಲಿ ಒಂದೊಂದು ರೀತಿ ಕಾಣಿಸಬೇಕಿತ್ತು.

advertisement

ನಾನು ಅದಾಗಲೇ 3-4 ವರ್ಷಗಳಿಂದ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದೆ ಆದರೆ ರವಿಚಂದ್ರನ್ ಅವರು ನೀಡಿದ ಪಾತ್ರ ಮಾತ್ರ ವಿಭಿನ್ನವಾಗಿತ್ತು. ರವಿ ಸರ್ರವರ ನಿರ್ದೇಶನದಲ್ಲಿ ನಟಿಸುವುದು ಅಷ್ಟು ಸುಲಭವೇನಲ್ಲ. ನೋಡ್ದೆ ನೋಡ್ದೆ ಹಾಡನ್ನು ತುಂಬಾ ಲೊಕೇಶನ್ಗಳಲ್ಲಿ ಶೂಟಿಂಗ್ ಮಾಡಿದ್ದೇವೆ ಒಂದಷ್ಟು ಸೆಟ್ ಗಳಲ್ಲಿ ಮತ್ತು ಲೊಕೇಶನ್ಗಳಲ್ಲಿ.

advertisement

ಆದರೆ ನನಗೆ ಹಾಕಿದ್ದಂತಹ ಒಡವೆ, ಬಟ್ಟೆ ಸುಮಾರು 25 ಕೆಜಿ ಇತ್ತು ಅದು ಕೂಡ ಕೈಗಳಿಗೆ ಟೈಟಾಗಿ ಚುಚ್ಚಿಕೊಂಡು ರ-ಕ್ತವು ಬಂದಿತ್ತು. ಕೊಚ್ಚಿ ನೀರಲ್ಲಿ ಇಳಿದು ನಡೆಸಿದ ಚಿತ್ರೀಕರಣದಲ್ಲಿ ಹಾಗೆಯೇ ರ-ಕ್ತವನ್ನು ಒಸಿರಿಕೊಂಡು ಚಿತ್ರೀಕರಣವನ್ನು ನಡೆಸಿದ್ದು ಇದೆ. ಆದರೆ ಫೈನಲಿ ಹಾಡಿನ ಜೊತೆಗೆ ಚಿತ್ರವು ಹಿಟ್ ಆಯಿತು ಎಂದು ಪ್ರಿಯಾಂಕ ಉಪೇಂದ್ರ (Priyanka Upendra) ಸಂದರ್ಶನದಲ್ಲಿ ತನ್ನ ನೆಚ್ಚಿನ ಸಿನಿಮಾಗಳ ಗುಣಗಾನ ಮಾಡಿದ್ದಾರೆ.

advertisement

Leave A Reply

Your email address will not be published.