Amala Paul : ಸೆಲೆಬ್ರಿಟಿಗಳು ಎಂದ ಮೇಲೆ ಸುದ್ದಿಯಲ್ಲಿರುವುದು ಮಾಮೂಲಿ. ಈ ವಿಚಾರದಲ್ಲಿ ನಟಿ ಅಮಲಾ ಪೌಲ್ ಮುಂಚೂಣಿಯಲ್ಲಿದ್ದಾರೆ. ಹೌದು, ದಕ್ಷಿಣ ಭಾರತದಲ್ಲಿ ನಟಿ ಅಮಲಾ ಪೌಲ್ (Amala Poul) ಅವರಿಗೆ ಸಖತ್ ಬೇಡಿಕೆಯನ್ನು ಹೊಂದಿರುವ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು (Tamil) ಹಾಗೂ ಮಲಯಾಳಂ (Malayalam) ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ.
ಅದಲ್ಲದೇ, ಕಿಚ್ಚ ಸುದೀಪ್ ಜೊತೆ ‘ಹೆಬ್ಬುಲಿ’ (Hebbali) ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದ ಸಿನಿಪ್ರಿಯರಿಗೂ ಪರಿಚಿತರಾಗಿದ್ದಾರೆ. ಈ ಸಿನಿಮಾದ ಬಳಿಕ ಬೇರೆ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ನಟಿ ಅಮಲಾ ಪೌಲ್ ಸದಾ ವಿವಾದದಿಂದಲೇ ಸುದ್ದಿಯಲ್ಲಿರುತವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ನಟಿಯದ್ದು ಬೋಲ್ಡ್ ವ್ಯಕ್ತಿತ್ವದಿಂದಲೇ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗುವುದಿದೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಅಮಲಾ ಪೌಲ್ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ಅವರನ್ನು 45 ಲಕ್ಷಕ್ಕೂ ಅಧಿಕ ಜನರು ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ.
ನಟಿ ಅಮಲಾ ಪೌಲ್ (Amala Paul) ಸಖತ್ ಬೋಲ್ಡ್ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದಲ್ಲದೇ, ನಟಿ ಅಮಲಾ ಪೌಲ್ ಅವರು ದೇಶ-ವಿದೇಶ ಸುತ್ತುತ್ತಾ ಇರುತ್ತಾರೆ. ಇದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಇದೀಗ ಮಣ್ಣಿನಿಂದ ಕ್ಲೇ ಮಾಡೆಲಿಂಗ್ ಮಾಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕನಸುಗಳಿಗೆ ರೂಪ ನೀಡುತ್ತಾ, ಜೇಡಿಮಣ್ಣಿನಲ್ಲಿ ಮಾಡೆಲ್ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.(ಇದನ್ನು ಓದಿ)Video : ಕಡಲ ತೀರದಲ್ಲಿ ಬಿಕಿನಿಯಲ್ಲಿ ಓಡಾಡಿದ ನಟಿ ಅಶ್ವಿನಿ! ಪ್ರವಾಸಿಗರ ಎದೆಬಡಿತ ಹೆಚ್ಚಿಸಿದ ನಟಿ ನೋಡಿ!!
ಇತ್ತೀಚೆಗಷ್ಟೇ ನೈಟ್ ಪಾರ್ಟಿಯಲ್ಲಿ ಅಮಲಾ ಪೌಲ್ ಮೈಚಳಿ ಬಿಟ್ಟು ಕುಣಿದಿದ್ದರು. ಜೈಲರ್ (Jailar) ಸಿನಿಮಾದ ಕಾವಾಲಯ್ಯ ಹಾಡಿದ ಗೆಳತಿಯ ಬರ್ತ್ ಡೇ ಸಂಭ್ರಮದಲ್ಲಿ ನಟಿಯು ಸ್ನೇಹಿತರ ಜೊತೆಗೆ ಡಾನ್ಸ್ ಮಾಡಿದ್ದರು. ಅದಲ್ಲದೇ, ತಮ್ಮ ಇನ್ಸ್ಟಾಗ್ರಾಂನಲ್ಲಿ ಅಮಲಾ ವಿಡಿಯೋ ಹಂಚಿಕೊಂಡಿದ್ದ ನಟಿ, “ನನ್ನ ಆತ್ಮ ಸಂಗಾತಿ, ನನ್ನ ತುಮ್ಮಿನ್‌ಗೆ ಜನ್ಮದಿನದ ಶುಭಾಶಯಗಳು! ನನ್ನ ಪ್ರೀತಿಯ ಬೆಸ್ಟೀ, ಪವಾಡಗಳು ಸಂಭವಿಸುತ್ತವೆ ಎಂಬುದಕ್ಕೆ ನೀನು ನನ್ನ ಜೀವಂತ ಸಾಕ್ಷಿ. ನನ್ನ ಜೀವನದಲ್ಲಿ ನಿನ್ನ ಇರುವಿಕೆ ನನಗೆ ಅಂತ್ಯವಿಲ್ಲದ ಸಂತೋಷ ಭಾವನೆಯನ್ನು ತಂದಿದೆ.
View this post on Instagram
ನಿನಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದರು. ನಟಿಯ ಈ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಟೀಕೆಗಳು ವ್ಯಕ್ತವಾಗಿತ್ತು. ಆದರೆ ನಟಿ ಅಮಲಾ ಪೌಲ್ ಈ ಯಾವುದೇ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ. ಸದ್ಯಕ್ಕೆ ನಟಿ ಅಮಲಾ ಪೌಲ್ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ (Pruthviraj Sukumar) ಅವರ ಆಡಿಜೀವಿಥಂ (Adijivitham) ಸಿನಿಮಾದಲ್ಲಿ ನಟಿಸಿದ್ದಾರೆ. ಬಹುನಿರೀಕ್ಷಿತ ಆಡಿಜೀವಿಥಂ ತೆರೆಗೆ ಬರಲಿದೆ.