7 Hot News
A Karnataka Times Affiliate Kannada News Portal

ಸಂಗೀತಾ ಎಸೆದ ಸವಾಲು, ನುಣ್ಣಗೆ ತಲೆ ಬೋಳಿಸಿಕೊಂಡು ಕ್ಲೀನ್ ಕೃಷ್ಣಪ್ಪ ಆದ ಕಾರ್ತಿಕ್! ಗಡ ಗಡನೇ ನಡುಗಿದ ತನಿಶಾ!!

advertisement

ಕನ್ನಡದ ಬಿಗ್ ಬಾಸ್ ಸೀಸನ್ ೧ರ ಕಾರ್ಯಕ್ರಮವು ಪ್ರಸಾರವಾಗಿ ಒಂದೂವರೆ ತಿಂಗಳುಗಳು ಕಳೆಯುತ್ತಾ ಬಂದಿದೆ. ಜನರಿಗೆ ವಿಭಿನ್ನ ರೀತಿಯಲ್ಲಿ ಎಂಟರ್ಟೈನ್ಮೆಂಟ್ ನೀಡಲು ವಿಶೇಷವಾದ ಟಾಸ್ಕ್ಗಳನ್ನು ಆಯೋಜಿಸುತ್ತಾ ಸ್ಪರ್ಧಿಗಳಿಗೆ ನೀಡುತ್ತಿರುವಂತಹ ಬಿಗ್ ಬಾಸ್ (Big Boss) ಈ ವಾರ ಎರಡು ತಂಡವನ್ನಾಗಿ ಮಾಡಿ ಒಂದು ತಂಡಕ್ಕೆ ಸ್ನೇಹಿತ್ ಹಾಗೂ ಮತ್ತೊಂದು ತಂಡಕ್ಕೆ ವಿನಯ್ ಗೌಡ ಅವರನ್ನು ನಾಯಕರನ್ನಾಗಿ ನೇಮಿಸಿರುತ್ತಾರೆ, ಆ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಎದುರಾಳಿ ತಂಡಕ್ಕೆ ಸವಾಲ್ ಒಂದನ್ನು ಎಸೆಯುವಂತಹ ಟಾಸ್ಕ ನೀಡುತ್ತಾರೆ.

advertisement

ಆ ವೇಳೆ ಸಂಗೀತ ಅವರು ವೇದಿಕೆಯ ಮೇಲೆ ಬಂದು ಕಾರ್ತಿಕ್ ಮತ್ತು ತುಕಾಲಿಗೆ ತಲೆ ಬೋಳಿಸಿಕೊಳ್ಳುವಂತಹ ಸವಾಲನ್ನು ಹಾಕಿದರು. ಇಂದಿನ ಎಪಿಸೋಡ್ ನಲ್ಲಿ ಈ ಟಾಸ್ಕ್ನ ಕೆಲ ಘಟನೆಗಳು ಪ್ರಸಾರವಾಗಲಿದ್ದು, ಬಿಗ್ ಬಾಸ್ ಅದಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ (colours kannda channel) ಮತ್ತು ತಮ್ಮ ಅಫಿಶಿಯಲ್ ಸೋಶಿಯಲ್ ಮೀಡಿಯಾ ವೆಬ್ ಪೇಜ್ಗಳಲ್ಲಿ ಇದರ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ.

advertisement

ವಿಡಿಯೋ ವೈರಲ್ ಆದ ಬೆನ್ನಲ್ಲೇ ನಟಿ ಸಂಗೀತ ಶೃಂಗೇರಿ(Sangeetha Sringeri) ಅವರ ಈ ನಡಿಗೆ ಎಲ್ಲೆಡೆಯಿಂದ ತೀವ್ರವಾದ ವಿರೋಧ ವ್ಯಕ್ತವಾಗುತ್ತಿದೆ. ಬಿಗ್ ಬಾಸ್ ಪ್ರಾರಂಭವದಂತಹ ಮೊದಲ ದಿನದಿಂದ ಹಿಡಿದು ಕಳೆದ ವಾರದವರೆಗೂ ಆತ್ಮೀಯ ಸ್ನೇಹಿತರಾಗಿ ಇದ್ದಂತಹ ಕಾರ್ತಿಕ್ ಮತ್ತು ಸಂಗೀತ ಕೆಲ ಕಾರಣಾಂತರಗಳಿಂದ ಆಗಾಗ ಕಿತ್ತಾಡಿಕೊಂಡು ಮತ್ತೆ ಸರಿಯಾಗುತ್ತಿದ್ದರು. ಕಳೆದ ಕೆಲ ದಿನಗಳಿಂದ ಸಂಗೀತ ಅವರ ವರ್ತನೆಯಲ್ಲಿ ತೀರಾ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದು.

advertisement

advertisement

ತನಿಷಾ ಹಾಗೂ ಕಾರ್ತಿಕ್ ಅವರನ್ನು ತೊರೆದು ತಮ್ಮದೇ ಆದ ತಂಡವನ್ನು ಕಟ್ಟಿ ತಮ್ಮ ಸ್ನೇಹಿತರ ವಿರುದ್ಧವೇ ಸಂಗೀತ ಕತ್ತಿಮಸೆಯಲು ಪ್ರಾರಂಭ ಮಾಡಿದ್ದಾರೆ. ಅಲ್ಲದೆ ಸೂಪರ್ ಸಂಡೆ ವಿತ್ ಸುದೀಪ ಪ್ರೋಗ್ರಾಮ್ ನಲ್ಲಿಯೂ ನಟ ಸುದೀಪ್ (Sudeep) ಅವರು ಹೇಳಿದ ಮಾತನ್ನು ಒಪ್ಪಿಕೊಳ್ಳದೆ ತನ್ನ ಮಾತೆ ಸರಿ ತನ್ನ ನಿರ್ಧಾರವೇ ಸರಿ ಎಂದು ವಾದ ಮಾಡುತ್ತ ಒಂದೇ ದಿನ ತಮ್ಮ ಇಮೇಜ್ ಅನ್ನು ಡ್ಯಾಮೇಜ್ ಮಾಡಿಕೊಂಡಂತಹ ಸಂಗೀತ ಅವರು ಇದೀಗ ಇಂಥ ಕೃತ್ಯನ್ನು ಕಾರ್ತಿಕ್ ವಿರುದ್ಧ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

advertisement

ವಿನಯ್ ಗೌಡ ಅವರ ಟೀಮ್ ಸೇರಿಕೊಂಡಿರುವಂತಹ ಸಂಗೀತ ಬಿಗ್ ಬಾಸ್ ನೀಡಿದ ಟಾಸ್ಕ್ ನ ಅನ್ವಯ ಕಾರ್ತಿಕ್ ಮತ್ತು ತುಕಾಲಿ ಸಂತೋಷ ಅವರಿಗೆ ತಲೆ ಶೇವ್ ಮಾಡಿಕೊಳ್ಳಿ ಎಂಬ ಸವಾಲು ನೀಡಿದರು. ಹೀಗೆ ಸಂಗೀತ ನೀಡಿದ ಸವಾಲನ್ನು ಸ್ವೀಕರಿಸಿದ ಕಾರ್ತಿಕ್ ಮತ್ತು ಸಂತೋಷ್ ತಮ್ಮ ತಲೆ ಕೂದಲನ್ನು ಶೇವ್ ಮಾಡಿಕೊಂಡಿದ್ದಾರೆ.

advertisement

ಇಷ್ಟು ದಿನ ಎಲ್ಲೆಡೆ ನನ್ನ ಬೆಸ್ಟ್ ಫ್ರೆಂಡ್ ನನ್ನ ಸ್ನೇಹಿತ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕಾರ್ತಿಕ್ ಅವರ ವಿರುದ್ಧ ಸಂಗೀತ ಈ ರೀತಿ ನಡೆದುಕೊಳ್ಳುತ್ತಿರುವುದು ಅಭಿಮಾನಿಗಳ ಮನಸ್ಸಿಗೆ ಬೇಸರವನ್ನು ಉಂಟುಮಾಡಿದೆ. ಹೀಗೆ ಸಂಗೀತ ನೀಡಿದಂತಹ ಸವಾಲನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಕ್ರೀಡಾತ್ಮಕವಾಗಿ ಸ್ವೀಕರಿಸಿದಂತಹ ಕಾರ್ತಿಕ್ (Karthik) ತಲೆ ಕೂದಲು ತಾನೆ ಬೋಳಿಸಿದರೆ ಮತ್ತೆ ಬರುತ್ತದೆ ಎಂದು ತಮ್ಮ ತಂಡದ ಗೆಲುವಿಗಾಗಿ ಹಾಗೂ ಪಾಯಿಂಟ್ಸ್ ಅನ್ನು ಗಳಿಸಬೇಕೆಂಬ ಹಠದಿಂದ ತಮ್ಮ ತಲೆ ಕೂದಲನ್ನು ತೆಗೆಸಿಕೊಂಡಿದ್ದಾರೆ.

advertisement

Leave A Reply

Your email address will not be published.