7 Hot News
A Karnataka Times Affiliate Kannada News Portal

ನೆನಪಿದ್ದಾರಾ ನಟಿ ಚಾರುಲತಾ? 90ರ ದಶಕದಲ್ಲಿ ಪಡ್ಡೆ ಹುಡುಗರನ್ನು ಟಾಕಾಯಿಸಿದ ಈ ನಟಿಗೆ ಏನಾಗಿದೆ ಗೊತ್ತಾ? ಅಯ್ಯೋ ಪಾಪ!

advertisement

1997ರಲ್ಲಿ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಕನ್ನಡ ತೆಲುಗು ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರಗಳಲ್ಲಿ ಬಹು ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿದಂತಹ ನಟಿ ಚಾರುಲತಾ ಕಾಲಕ್ರಮಣ ಸಿನಿಮ ರಂಗದಿಂದ ದೂರವಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಕ್ರಿಯರಾದರು. ಸದ್ಯ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳ ಜೊತೆಗೆ ಒಡನಾಟದಲ್ಲಿ ಇರುವಂತಹ ಈ ನಟಿ ಆಶ್ಚರ್ಯಕರ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ.

advertisement

ಹಾಗಾದ್ರೆ ನಟಿ ಚಾರುಲತಾ(Charulatha) ಈಗ ಹೇಗಿದ್ದಾರೆ ಎಲ್ಲಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮೂಲತಃ ಪಂಜಾಬಿಯವರಾದ ಚಾರುಲತಾ(Charulatha) ಅವರು ವಿ ಮನೋಹರ್ ನಿರ್ದೇಶನದಲ್ಲಿ ಮೂಡಿ ಬಂದ ಓ ಮಲ್ಲಿಗೆ(O mallige) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

advertisement

advertisement

ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಆರಂಭಿಕ ದಿನಗಳಲ್ಲಿ ವ್ಯಾಪಕ ಬೇಡಿಕೆ ಹಾಗೂ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ಚಾರುಲತಾ ಮತ್ತೆಂದು ಹಿಂದಿರುಗಿ ನೋಡದಂತಹ ಯಶಸ್ಸನ್ನು ಗಳಿಸುತ್ತಾರೆ. ಮೂರ್ನಾಲ್ಕು ವರ್ಷಗಳ ಕಾಲ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡು ಯಶಸ್ವಿ ಚಿತ್ರಗಳನ್ನು ನೀಡುತ್ತಿದ್ದಂತಹ ಚಾರುಲತಾ ಅವರು ವರ್ಷಕ್ಕೆ ಕನಿಷ್ಠ 8 ರಿಂದ 10 ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದವರು. ಇನ್ನು ಎರಡು ಸಾವಿರನೇ ಇಸವಿಯಲ್ಲಿ ತಮಿಳು ಹಾಗು ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡಿದ ಚಾರುಲತ ಅವರಿಗೆ ವ್ಯಾಪಕ ಅವಕಾಶಗಳು ಸಿಗುತ್ತಾ ಹೋಗುತ್ತದೆ.

advertisement

ಆದರೆ ಮದುವೆಯಾದ ಬಳಿಕ ಸಿನಿಮ ರಂಗದಿಂದ ದೂರ ಉಳಿದ ಈ ನಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಕ್ರವರ್ತಿ(Chakravarthy) ಸಿನಿಮಾದಲ್ಲಿ ಸಹನಟಿಯಾಗಿ ಅಭಿನಯಿಸುವ ಮೂಲಕ 2017ರಲ್ಲಿ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರು. ಆದರೆ ಹೇಳಿಕೊಳ್ಳುವಂತಹ ಅವಕಾಶ ಸಿಗದ ಕಾರಣ ಬೆಳ್ಳಿ ಪರದೆಯ ಮೇಲೆ ಕಾಣೆಯಾಗಿರುವ ಚಾರುಲತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್ ಆಗಿದ್ದು.

advertisement

ಹಳೆಯ ಹಾಡುಗಳಿಗೆ ಲಿಪ್ಸಿಂಕ್ ಮಾಡುತ್ತಾ ಸುಂದರ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ವೈರಲಾಗುತ್ತಿರುತ್ತಾರೆ. ಅಮೆರಿಕ ಮತ್ತು ದೆಹಲಿಯಲ್ಲಿ ತಮ್ಮ ಬಿಸಿನೆಸ್ ಉದ್ಯಮವನ್ನು ನೋಡಿಕೊಳ್ಳುವುದರ ಜೊತೆಗೆ ನಟನೆ ಮೇಲಿರುವಂತಹ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಶಸ್ವಿ ಪಾತ್ರಗಳ ಮೂಲಕ ಮತ್ತೆ ನಮ್ಮೆಲ್ಲರನ್ನು ರಂಜಿಸಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.