ದಾವಣಗೆರೆಯ 3 ವರ್ಷದ ಬಾಲಕ ಮಾಡಿರುವ ಸಾಧನೆ ಬಗ್ಗೆ ತಿಳಿದರೆ ಹೆಮ್ಮೆ ಎನಿಸುತ್ತದೆ. ನೋಡಿ ವಿಡಿಯೋ.!

समाचार

ಸ್ನೇಹಿತರೆ, ಮೂರುವರ್ಷ ಎರಡು ತಿಂಗಳ ಬಾಲಕ ಯಾವುದೇ ಪ್ರಶ್ನೆ ಕೇಳಿದರು ಪಟಪಟ ಎಂದು ಉತ್ತರ ಹೇಳುತ್ತಾ ಎಲ್ಲರ ಗಮನ ಸೆಳೆದಿರುವಂತಹ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಹೌದು ಮೂಲತಃ ದಾವಣಗೆರೆಯವರಾದ ಅರಸು ಎಂಬ ಪುಟ್ಟ ಬಾಲಕ ಶಿವಕುಮಾರ ಎಂಬ ಬಡಾವಣೆಯಲ್ಲಿ ನಲೆಸಿದ್ದು, ಯಾವುದೇ ವಿಷಯದಲ್ಲಿ ಎಂತಹದೇ ಪ್ರಶ್ನೆ ಕೇಳಿದರು ಕೂಡ ಪಟಪಟ ಅಂತ ಉತ್ತರ ಕೊಡುವ ಈ ಜ್ಞಾನ ಭಂಡಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿವಿಲ್ ಇಂಜಿನಿಯರ್ ಪ್ರದೀಪ್ ಹಾಗೂ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಮತ ದಂಪತಿಯ ಪುತ್ರ ಅರಸು, ಸಾವಿರಾರು ಸಾಮಾನ್ಯ ಜ್ಞಾನದ ಪ್ರಶ್ನೆಗಳು ಹಾಗೂ ಭಾರತದ ನಕ್ಷೆ ಹೀಗೆ ಹಲವಾರು ಸಾಮಾನ್ಯ ವಿಷಯಗಳ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ ಸರಿಯಾದ ಉತ್ತರ ನೀಡುವ ಜಾಣ್ಮೆ ಹೊಂದಿದ್ದಾನೆ, ಅಲ್ಲದೆ ಅರಳು ಹುರಿದಂತೆ ಮಾತನಾಡುತ್ತಾನೆ. ಮೊದಮೊದಲು ಯಾರಾದರೂ ಮನೆಗೆ ಬಂದರೆ ಕಲಿತಂತಹ ರೈಮ್ಸ ಪದ್ಯಗಳನ್ನೆಲ್ಲವನ್ನು ನೆನಪಿಟ್ಟುಕೊಂಡು ಹೇಳುತ್ತಿದ್ದ.

ಇದನ್ನು ಗಮನಿಸಿದಂತಹ ಪೋಷಕರು ಆತನಿಗೆ ತರಬೇತಿ ನೀಡುತ್ತಾ ಹೋದರು. ಎರಡು ವರ್ಷದವನಿದ್ದಾಗ ಅರಸುವಿನ ಜ್ಞಾನದ ಬಗ್ಗೆ ಅಚ್ಚರಿ ಒಳಗಾಗದ ಪ್ರದೀಪ್ ಹಾಗೂ ಮಮತಾ ದಂಪತಿ ಭಾರತ ನಕ್ಷೆ ತೋರಿಸಿದರೆ ಯಾವುದೇ ರಾಜ್ಯದ ಹೆಸರನ್ನು ಕೇಳಿದರೆ ಥಟ್ಟಂತ ಗುರುತಿಸುತ್ತಾನೆ, ಆದ್ದರಿಂದ ಆತನಿಗೆ ಪ್ರತಿಯೊಂದು ವಿಷಯದ ಬಗ್ಗೆಯೂ ಹೇಳಿಕೊಟ್ಟಿದ್ದಾರೆ. ಪ್ರಶಸ್ತಿ- ಪುರಸ್ಕೃತರ ಹೆಸರು ಹಾಗೂ ಭಾವ ಚಿತ್ರವನ್ನು ಗುರುತಿಸುತ್ತಾನೆ. ಕಾಳಿಂಗ ಸರ್ಪ ಎಲ್ಲಿ ಜಾಸ್ತಿ ಇರುವ ರಾಜ್ಯ, ರಾಜಕೀಯ ನಾಯಕರು, ವಚನಗಳು ಈತನ ನಾಲಿಗೆಯಲ್ಲಿ ಸುಲಲಿತವಾಗಿ ಹರಿದಾಡುತ್ತವೆ.

ಬುಕ್ ಇಂಡಿಯಾ ಪ್ರಚಂಡ ಬಾಲಕರ ವಿಭಾಗ ಸ್ಪರ್ಧೆಯಲ್ಲಿ ಅರಸು ಗೆದ್ದಿದ್ದು, ಗಿನ್ನಿಸ್ ದಾಖಲೆಗೆ ಅರ್ಹತೆ ಪಡೆದಿದ್ದಾನೆ. ಕ’ರೋನ ಹಿನ್ನೆಲೆಯಲ್ಲಿ ಝೂಂ ಆಪ್ನಲ್ಲಿ ಸ್ಪರ್ಧೆ ನಡೆಸಲಾಗಿದ್ದು, ಅಲ್ಲಿಯೂ ಕೂಡ ಜಯಭೇರಿ ಬಾರಿಸಿದ್ದಾನೆ. ಈ ಮೂಲಕ ಅತಿ ಬುದ್ಧಿವಂತಿಕೆ ಇರುವ ಮಕ್ಕಳಲ್ಲಿ ಅರಸು ಕೂಡ ಒಬ್ಬನಾಗಿದ್ದು, ಗಿನ್ನಿಸ್ ರೆಕಾರ್ಡ್ ಆಯ್ಕೆ ಪ್ರಕ್ರಿಯೆಗೆ ಸೆಲೆಕ್ಟ್ ಆಗಿದ್ದಾನೆ. ನಾಲ್ಕನೇ ವರ್ಷಕ್ಕೆ ಅರಸು ಗಿನ್ನಿಸ್ ಸ್ಪರ್ಧೆ ಮಾಡಲಿದ್ದಾನೆ ಎನ್ನುತ್ತಾರೆ ಪ್ರದೀಪ್ ಹಾಗೂ ಮಮತ ದಂಪತಿಗಳು. ಹೀಗೆ ದೊಡ್ಡವರು ಹೇಳಿದಂತಹ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುವ ಈ ಪುಟ್ಟ ಕಂದ ಗಿಲ್ಲಿಸ್ನಲ್ಲಿಯೂ ಕೂಡ ದಾಖಲೆ ಮಾಡಲಿ ಎಂದು ಹಾರೈಸೋಣ. ಈ ಜ್ಞಾನಭಂಡಾರದ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *