7 Hot News
A Karnataka Times Affiliate Kannada News Portal

765 ರನ್ ಜೊತೆಗೆ ಒಂದು ವಿಕೆಟ್ ಕೂಡಾ ಪಡೆದು, ವಿರಾಟ್ ಕೊಹ್ಲಿ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ!!

advertisement

ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಒಂದಾದ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ (Narendra Modi stadium, Ahmedabad) ನಲ್ಲಿ ನಡೆದಂತಹ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಕಪ್(India versus Australia World Cup) ಪ್ರತಿ ಹಂತದಲ್ಲಿಯೂ ರೋಚಕ ತಿರುವುಗಳನ್ನು ತೆಗೆದುಕೊಳ್ಳುತ್ತಾ ಸಾಗಿತ್ತು. ಕಾಂಗರುಗಳನ್ನು ತಡೆಯಲು ಭಾರತ ತಂಡದ ಆಟಗಾರರ ಸತತ ಪ್ರಯತ್ನ ಕೂಡ ಇತ್ತು. ಅದೃಷ್ಟ ಹಾಗೂ ಅದ್ಭುತ ಆಟದ ವೈಕರಿ ಅವರ ಪರವಾಗಿ ಇದ್ದ ಕಾರಣ 2023 ವರ್ಲ್ಡ್ ಕಪ್ ಟ್ರೋಫಿ ಅನ್ನು ಆಸ್ಟ್ರೇಲಿಯನ್ನರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

advertisement

ಹೌದು ಗೆಳೆಯರೇ ಭಾರತ ತಂಡದ ಬ್ಯಾಟಿಂಗ್ ಲೈನ್ ಅಪ್ ಆರಂಭದಲ್ಲಿಯೇ ಹುರುಳಿ ಹೋಗಿದ್ದು ಅಭಿಮಾನಿಗಳ ಮನಸ್ಸಿನಲ್ಲಿ ಕೊಂಚ ಆಘಾತವನ್ನು ಉಂಟುಮಾಡಿತ್ತು ಅನಂತರ ಬಂದಂತಹ ಕೆಎಲ್ ರಾಹುಲ್(KL Rahul) ಅವರು ಸ್ವಲ್ಪ ಹಂತದವರೆಗೂ ಔಟ್ ಆಗದೆ ಪರಿಸ್ಥಿತಿಯನ್ನು ನಿಭಾಯಿಸುವ ಕೆಲಸ ಮಾಡಿ 66 ರನ್ಗಳನ್ನು ಗಳಿಸಿಕೊಂಡರು. ಹೀಗೆ ಕೆ ಎಲ್ ರಾಹುಲ್ ಅವರ ನಂತರ ಎಲ್ಲಾ ವಿಕೆಟ್ಗಳು ಒಂದೊಂದಾಗಿ ಉರುಳಿ ಕೊನೆಯ ಬಾಲ್ನಲ್ಲಿ ಆಲ್ ಔಟ್ ಆಗುವ ಮೂಲಕ ಟೀಮ್ ಇಂಡಿಯಾ 241 ರ ಚೇಸ್ಸನ್ನು ಆಸ್ಟ್ರೇಲಿಯನ್ನರಿಗೆ ನೀಡಿತ್ತು.

advertisement

ಆರಂಭಿಕ ಹಂತದಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಬೂಮ್ರ ಮತ್ತು ಮೊಹಮ್ಮದ್ ಶಮಿ ಕಾಂಗರುಗಳನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದರು ಆದರೆ ಮೂರು ವಿಕೆಟ್ ಬಿದ್ದ ನಂತರ ಹಲವು ಓವರ್ ಗಳ ಬಳಿಕ ಯಾರ ವಿಕೆಟ್ಗಳನ್ನು ತೆಗೆದುಕೊಳ್ಳಲು ಭಾರತದ ಬೌಲರ್ಸ್ ಗಳಿಂದ ಸಾಧ್ಯವಾಗಲಿಲ್ಲ‌. ಹೀಗೆ ಆಸ್ಟ್ರೇಲಿಯಾ 43 ಓವರ್ ಗಳಲ್ಲಿ 241 ರನ್ಗಳನ್ನು ಕಲೆ ಹಾಕುವ ಮೂಲಕ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಹಠದಲ್ಲಿ ಇದ್ದಂತಹ ಟೀಮ್ ಇಂಡಿಯಾದ ಕನಸನ್ನು ನುಚ್ಚುನೂರು ಮಾಡಿತು.

advertisement

advertisement

ಆದರೆ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಟ್ರೋಫಿಯನ್ನು ಮುಡಿಗೆರಿಸಿಕೊಂಡು ಗೆದ್ದು ಬೀದಿದರು. ಹೀಗೆ ಪಂದ್ಯದ ಬಳಿಕ 2023 ರಲ್ಲಿ ಅದ್ಭುತ ಆಟ ಪ್ರದರ್ಶನ ತೋರಿದಂತಹ ಆಟಗಾರರಿಗೆ ಶ್ಲಾಘಿಸಿ ವಿಶೇಷವಾದ ಬಹುಮಾನವನ್ನು ನೀಡಲಾಯಿತು. ಆ ಸಂದರ್ಭದಲ್ಲಿ ಕಿಂಗ್ ಕೊಹ್ಲಿ ಪ್ಲೇಯರ್ ಆಫ್ ದ ಟೂರ್ನಮೆಂಟ್(Player Of The Tournament) ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.

advertisement

ಹೌದು ಗೆಳೆಯರೇ ಐಸಿಸಿ ಮೆನ್ಸ್ ಕ್ರಿಕೆಟ್ ನಲ್ಲಿ ರನ್ ಮಿಷನ್ ಎಂದೇ ಹೆಸರುವಾಸಿಯಾಗಿರುವಂತಹ ಕಿಂಗ್ ಕೊಹ್ಲಿ ಅವರು ಸರಾಸರಿ 765 ರನ್ಗಳನ್ನು ಕಲೆ ಹಾಕುವುದರ ಜೊತೆಗೆ ಬೌಲಿಂಗ್ ನಲ್ಲಿಯೂ ತಮ್ಮ ಅದ್ಭುತ ಪ್ರದರ್ಶನ ತೋರುತ್ತ ಒಂದು ವಿಕೆಟ್ ಅನ್ನು ಕಬಳಿಸಿಕೊಂಡಿದ್ದು, ಟೂರ್ನಿಯಲ್ಲಿನ ಇವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ವಿರಾಟ್ ಕೊಹ್ಲಿ(Virat Kohli) ಅವರಿಗೆ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

advertisement

ಈ ಭಾರಿಯ ವರ್ಲ್ಡ್ ಕಪ್ನಲ್ಲಿ ಅದ್ಭುತ ಫಾಮ್ ನಲ್ಲಿ ಇದ್ದಂತಹ ವಿರಾಟ್ ಕೊಹ್ಲಿ ಅವರು ನೆನ್ನೆಯ ಫೈನಲ್ ಪಂದ್ಯದಲ್ಲಿಯೂ ಬರೋಬ್ಬರಿ 54 ರನ್ಗಳನ್ನು ಕಲೆ ಹಾಕಿದರು. CWC 23ರ 11 ಪಂದ್ಯಗಳಲ್ಲಿ ವಿರಾಟ್ ಬರೋಬ್ಬರಿ ಆರು 50 ಗಳು ಹಾಗೂ ಮೂರು ಶತಕಗಳನ್ನು ಸಿಡಿಸುವ ಮೂಲಕ ಈ ಬಾರಿಯ ಟೂರ್ನಮೆಂಟಲ್ಲಿ ಅತಿ ಹೆಚ್ಚು ರನ್ಗಳನ್ನು ಕಲೆ ಹಾಕಿರುವಂತಹ ಆಟಗಾರರಾಗಿ ಹೊರಹೊಮ್ಮಿದ್ದಾರೆ.

advertisement

Leave A Reply

Your email address will not be published.