7 Hot News
A Karnataka Times Affiliate Kannada News Portal

DBoss : ಪತ್ನಿಯ ಬರ್ತಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಿದ ನಟ ಡಿ ಬಾಸ್ ದರ್ಶನ್! ಪತಿಯನ್ನು ಮುದ್ದಾಡಿದ ಪತ್ನಿ ವಿಜಯಲಕ್ಷ್ಮಿ, ಸುಂದರ ಕ್ಷಣಗಳು ನೋಡಿ!!

advertisement

DBoss : ಕನ್ನಡ ಸಿನಿಮಾ ರಂಗದ ಆದರ್ಶ ದಂಪತಿಗಳಲ್ಲಿ ಒಬ್ಬರಾಗಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಮತ್ತು ವಿಜಯಲಕ್ಷ್ಮಿ (Vijayalakshmi) ಅವರು ತಮ್ಮ ನಡುವೆ ಬೆಳದಿದ್ದಂತಹ ಮನಸ್ತಾಪ ಎಂಬ ಅಡ್ಡಗೋಡೆಯನ್ನು ಮುರಿದು ಮತ್ತೆ ಒಂದಾಗಿ ಸುಖವಾಗಿ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ.

advertisement

ಪ್ರತಿ ಹೆಜ್ಜೆಯಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ ಬಿಡುವಿನ ಸಮಯದಲ್ಲಿ ಪ್ರವಾಸ ಹಾಗೂ ಮುಂತಾದ ಸುಂದರ ತಾಣಗಳಿಗೆ ತೆರಳಿ ಸಮಯ ಕಳೆಯುತ್ತಿರುತ್ತಾರೆ. ದರ್ಶನ್ ಅವರು ತಮ್ಮ ಪತ್ನಿಯೊಂದಿಗೆ ವಿದೇಶ ಪ್ರವಾಸಕ್ಕೆ ಹಾರಿ ಅಲ್ಲಿನ ಕೆಲ ಅತಿ ಸುಂದರ ಹಾಗೂ ರಮಣೀಯ ತಾಣಗಳನ್ನು ಕಣ್ತುಂಬಿಕೊಂಡು ರಜೆ ದಿನವನ್ನು ಎಂಜಾಯ್ ಮಾಡಿದ್ದರು.

advertisement

ಅಲ್ಲಿಂದ ವಾಪಸ್ ಆದ ಬಳಿಕ ದರ್ಶನ್ ಅವರು ತಮ್ಮ ಪ್ರೀತಿಯ ಪತ್ನಿ ವಿಜಯ್ ಲಕ್ಷ್ಮಿ ಅವರ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಸೆಲೆಬ್ರೇಟ್(Grand Birthday Celebration) ಮಾಡಿರುವಂತಹ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಕೆಲ ದಿನಗಳ ಇಂಡಸ್ಟ್ರಿ ವಿಜಯಲಕ್ಷ್ಮಿ ಅವರು ತಮ್ಮ ಅದ್ದೂರಿ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ರೆಸಾರ್ಟ್ ಒಂದರಲ್ಲಿ ಆಚರಿಸಿಕೊಂಡಿದ್ದಾರೆ.

advertisement

ಖಾಸಗಿ ರೆಸಾರ್ಟ್ ಒಂದರಲ್ಲಿ ಬಹಳ ಸುಂದರವಾಗಿ ಕ್ಯಾಂಡಲ್ ಲೈಟ್(Candle Light) ಹಾಗೂ ಗಾಜಿನ ವಸ್ತುಗಳಿಂದ ಡೆಕೋರೇಷನ್ ಮಾಡಿಸಿ ಗುಲಾಬಿ ಬಣ್ಣದ ಬೃಹತ್ ಆದ ಕೇಕನ್ನು ಇರಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ತಮ್ಮ ಪತ್ನಿಗೆ ಸರ್ಪ್ರೈಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪತ್ನಿಯ ಕೈಹಿಡಿದು ಕೇಕ್ ಕಟ್ ಮಾಡಿ ಪ್ರೀತಿಯಿಂದ ಅದನ್ನು ವಿಜಯಲಕ್ಷ್ಮಿ ಅವರಿಗೆ ತಿನ್ನಿಸುವುದರ ಜೊತೆಗೆ ಹಗ್ ಮಾಡಿಕೊಂಡು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

advertisement

advertisement

Challenging Star Darshan With Wife
Challenging Star Darshan With Wife

advertisement

ವಿಜಯಲಕ್ಷ್ಮಿ ಅವರ ಬರ್ತಡೆ ಸಮಾರಂಭಕ್ಕೆ ರಾಧಾ ರಮಣ ಹಾಗೂ ಮೀರಾ ಮಾಧವ ಧಾರಾವಾಹಿಯಲ್ಲಿ ಅಭಿನಯಿಸಿದಂತಹ ನಟಿ ಕಾವ್ಯ ಗೌಡ(Kavya Gowda), ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ್ಪ ದಂಪತಿಗಳು ಹಾಗು ಮುಂತಾದ ಆತ್ಮೀಯ ಗೆಳೆಯರು ಭಾಗಿಯಾಗಿ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ.

advertisement

Challenging Star Darshan With Wife
Challenging Star Darshan With Wife

advertisement

ಈ ಎಲ್ಲಾ ಅತಿ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, (DBoss) ಅಭಿಮಾನಿಗಳ ವತಿಯಿಂದಲೂ ವಿಜಯಲಕ್ಷ್ಮಿ ಅವರ ಬರ್ತಡೆಗೆ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ. ಇನ್ನು ಹುಟ್ಟು ಹಬ್ಬದ ದಿನ ಬಹಳ ದುಬಾರಿಯಾದ ಕಂದು ಬಣ್ಣದ ಉಡುಪನ್ನು ವಿಜಯಲಕ್ಷ್ಮಿ ಧರಿಸಿದ್ದು,‌ ಇವರ ಅದ್ಭುತ ಫ್ಯಾಶನ್ ಸೆನ್ಸ್ ಹೆಂಗೆಳೆಯರು ಫಿದಾ ಆಗಿ ಹೋಗಿದ್ದಾರೆ.

advertisement

Leave A Reply

Your email address will not be published.