ನಟ ರೀಶಬ್ ಶೆಟ್ಟಿ ಅವರ ಸುಂದರವಾದ ಕುಟುಂಬ ಹೇಗಿದೆ ನೋಡಿ! ಮುದ್ದಾದ ಕ್ಷಣಗಳು ಇಲ್ಲಿವೆ ನೋಡಿ!!

advertisement
ಪ್ರತಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುವಂತಹ ರಿಷಬ್ ಶೆಟ್ಟಿ ಮತ್ತು ಕುಟುಂಬ ಈ ಬಾರಿಯ ದೀಪಾವಳಿ ಹಬ್ಬವನ್ನು ಇನ್ನಷ್ಟು ಸಂತಸದಿಂದ ಅದ್ದೂರಿಯಾಗಿ ಆಚರಿಸಿದ್ದು ಅದರ ಕೆಲ ಸುಂದರ ಫೋಟೋಗಳನ್ನು ಪ್ರಗತಿ ಶೆಟ್ಟಿ(Pragathi Shetty) ಮತ್ತು ರಿಷಬ್ ಶೆಟ್ಟಿ(Rishab Shetty) ಇಬ್ಬರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
advertisement
ಯಾವುದೇ ಹಬ್ಬ ಹರಿದಿನಗಳಾದರು ಟ್ರೆಡಿಶನಲ್ ಉಡುಗೆಯನ್ನು ಧರಿಸಿ ಬಹಳ ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಾ ಆಯಾ ಹಬ್ಬಗಳ ಮಹತ್ವ ಎಂತದ್ದು ಎಂಬುದನ್ನು ತಮ್ಮ ಮಕ್ಕಳಿಗೆ ತಿಳಿಸುವಂತಹ ರಿಷಬ್ ಶೆಟ್ಟಿ ಮನೆಯಲ್ಲಿ ಈ ವರ್ಷದ ದೀಪಾವಳಿ ಸಂಭ್ರಮ ಜೋರಾಗಿತ್ತು. ಹೌದು ಸ್ನೇಹಿತರೆ, ಮನೆ ತುಂಬಾ ದೀಪವನ್ನು ಹಚ್ಚಿ ಹೆಂಡತಿ ಮಕ್ಕಳೊಂದಿಗೆ ಸೇರಿ ಪಟಾಕಿ ಹೊಡೆದು ಬೆಳಕಿನ ಹಬ್ಬ ದೀಪಾವಳಿಯನ್ನು ಬಹಳ ಗ್ರಾಂಡ್ ಆಗಿ ಸಂಭ್ರಮಿಸಿದ್ದಾರೆ.
advertisement
ಹೌದು ಗೆಳೆಯರೇ ಪ್ರಗತಿ ಶೆಟ್ಟಿ(Pragathi Shetty) ಅವರು ಹಸಿರು ಹಾಗೂ ಗುಲಾಬಿ ಬಣ್ಣದ ಕಾಂಜಿವರಂ ಸೀರೆಯಲ್ಲಿ ಬಹಳ ಗಾಡ್ಜಿಯಸ್ ಆಗಿ ಕಂಗೊಳಿಸಿದರೆ ರಿಷಭ ಶೆಟ್ಟಿ ಅವರು ಯಥಾಪ್ರಕಾರ ಸಿನಿಮಾ ಕೆಲಸಕ್ಕಾಗಿ ತಮ್ಮ ಗಡ್ಡ ಮೀಸೆಯನ್ನು ಬಿಟ್ಟು ಕೇಸರಿ ಬಿಳಿ ಬಣ್ಣದ ಕುರಿತಾ ಪೈಜಾಮ ಧರಿಸಿ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
advertisement
advertisement

advertisement
ಇನ್ನೂ ತಮ್ಮ ಇಬ್ಬರೂ ಮುದ್ದಿನ ಮಕ್ಕಳಾದ ರಣ್ವಿತ್ ಶೆಟ್ಟಿ(Ranvit Shetty) ಹಾಗೂ ರಾಧ್ಯ ಶೆಟ್ಟಿ(Radhya Shetty) ಯವರಿಗೂ ಕೂಡ ಸಾಂಪ್ರದಾಯಕವಾದ ಹೊಸ ಬಟ್ಟೆಯನ್ನು ಹಾಕಿ ಮಕ್ಕಳ ಪುಟ್ಟ ಕೈಯಲ್ಲಿ ದೀಪಾ ಹಚ್ಚಿಸುತ್ತಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಸದ್ಯ ಈ ಫೋಟೋಗಳನ್ನು ಪ್ರಗತಿ ಶೆಟ್ಟಿಯವರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು “ದೀಪಾವಳಿ ಹಬ್ಬದ ಶುಭಾಶಯಗಳು ಬೆಳಕಿನ ಹಬ್ಬವು ಎಲ್ಲರ ಮನ ಮನೆಗಳಲ್ಲಿ ಸಂತಸವನ್ನು ಮೂಡಿಸಲಿ” ಎಂಬ ಕ್ಯಾಪ್ಶನ್ ಬರೆದಿದ್ದಾರೆ.
advertisement

advertisement
ಕಾಂತಾರಾ(Kantara) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿರುವಂತಹ ರಿಷಬ್ ಶೆಟ್ಟಿಯವರು ಸದ್ಯ ಅದರ ಭಾಗ ಎರಡರ ಮೂಲಕ ಮತ್ತೊಮ್ಮೆ ಆಧ್ಯಾತ್ಮಿಕ ತುಂಬಿರುವಂತಹ ಚಿತ್ರಕಥೆಯೊಂದರ ಮೂಲಕ ನಮ್ಮೆಲ್ಲರನ್ನು ರಂಜಿಸಲು ಸಿದ್ಧರಾಗುತ್ತಿದ್ದಾರೆ. ಸಿನಿಮಾದ ಕುರಿತು ರಿಷಬ್ ಶೆಟ್ಟಿ(Rishab Shetty) ಸಣ್ಣ ಸುಳಿವನ್ನು ಬಿಟ್ಟು ಕೊಟ್ಟಿಲ್ಲ, ಹೀಗಾಗಿ ಅಭಿಮಾನಿಗಳೆಲ್ಲರೂ ಕಾಂತರಾ ಭಾಗ ಎರಡು ಯಾವಾಗ ಬರುತ್ತದೆ? ಎಂಬ ಪ್ರಶ್ನೆಯನ್ನು ರಿಷಬ್ ಶೆಟ್ಟಿ ಅವರಿಗೆ ಮೇಲಿಂದ ಮೇಲೆ ಕೇಳುತ್ತಲೇ ಇದ್ದಾರೆ.
advertisement