ಸ್ನೇಹಿತರೆ, ದಿನೇ ದಿನೇ ಸೋಶಿಯಲ್ ಮೀಡಿಯಾ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವಾಗ ನಟಿಗರನ್ನು ಆಕರ್ಷಿಸಲು ಒಂದಲ್ಲ ಒಂದು ವಿಶೇಷ ವಿಡಿಯೋಗಳನ್ನು ಮಾಡಿ ಅದನ್ನು ತಮ್ಮ ತಮ್ಮ ಇನ್ಸ್ಟಾಗ್ರಾಮ್(Instagram) ಹಾಗೂ ಫೇಸ್ಬುಕ್ (Facebook) ನಂತಹ ಖಾತೆಗಳಲ್ಲಿ ಹರಿಬಿಡುವುದು ಬಹಳ ಸಹಜ ಪ್ರಕ್ರಿಯೆ ಆಗಿಬಿಟ್ಟಿದೆ.
ಹೀಗೆ ಪ್ರತಿದಿನ ಎದ್ದ ಕೂಡಲೇ ಸೋಶಿಯಲ್ ಮೀಡಿಯಾ (Social media) ಸ್ಕ್ರೋಲ್ ಮಾಡುತ್ತಾ ಕುಳಿಯುವವರಿಗೆ ಒಂದಲ್ಲ ಒಂದು ಮಸ್ತ್ ಮನೋರಂಜನೆ ನೀಡುವಂತಹ ವಿಡಿಯೋಗಳು ಕಾಣುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಯುವತಿ ಒಬ್ಬಳು ಇದ್ದಕ್ಕಿದ್ದ ಹಾಗೆ ತನ್ನ ಮನಸ್ಸಿನಲ್ಲಿರುವಂತಹ ನಾನ ಭಾವನೆಗಳನ್ನು ನೆನೆದು ಕಣ್ಣೀರು ಹಾಕುವಂತಹ ವಿಡಿಯೋ ಬಾರಿ ವೈರಲಾಗುತ್ತಿದ್ದು.
ಇದನ್ನು ಕಂಡಂತಹ ನೆಟ್ಟಿಗರು ಭಾವಕರಾಗಿದ್ದಾರೆ. ಹೌದು ಗೆಳೆಯರೇ, ವಿಡಿಯೋ ನೋಡಿದವರಿಗೆ ಹುಡುಗಿ ಪ್ರೀತಿಯಲ್ಲಿ ಸೋತು ಖಿನ್ನತೆಗೆ ಜಾರಿದ ಹಾಗೆ ಕಾಣುತ್ತದೆ. ವ್ಯಕ್ತಿ ಒಬ್ಬರು ಆಕೆಯ ಮನಸ್ಸಿನಲ್ಲಿ ಇರುವಂತಹ ಅಗಾಧವಾದ ಭಾವನೆ ಹಾಗು ನೋವನ್ನು ಹೊರ ಹಾಕುವ ಪ್ರಯತ್ನ ಮಾಡಿದ್ದಾರೆ. ತಮ್ಮ ವಿಶೇಷವಾದ ತಂತ್ರವನ್ನು ಉಪಯೋಗಿಸಿ ಆಕೆ ಮನಸ್ಸಿನಲ್ಲಿ ಏನಿದೆ? ಎಂಬುದನ್ನೆಲ್ಲಾ ಹೇಳುತ್ತಾ ಅದನ್ನು ಬಿಕ್ಕಿ ಅಳುವ ಮೂಲಕ ಹೊರಹಾಕಿಬಿಡು ಎಂದು ತಮ್ಮ ಮಂತ್ರದ ಮೂಲಕ ತಿಳಿಸಿದ್ದಾರೆ.
ಅದರಂತೆ ಹುಡುಗಿ ತನ್ನ ಹೃದಯದಲ್ಲಿ ತುಂಬಿರುವಂತಹ ಭಾರಿ ನೋವನ್ನು ನೆನೆದು ಕಣ್ಣೀರು ಹಾಕುತ್ತಾ ಅದನ್ನು ಹೊರಹಾಕುವ ಪ್ರಯತ್ನ ಮಾಡಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೋಬಿತ (Nobita) ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಎಂದಿಗೂ ಪರಸ್ಪರರ ಹೃದಯವನ್ನು ಮುರಿಯಬೇಡಿ ಎಂಬ ಬೇಸರದ ಕ್ಯಾಪ್ಷನ್(Sad caption) ಬರೆದು, ವಿಡಿಯೋ ಶೇರ್ ಮಾಡಿದ್ದಾರೆ.
View this post on Instagram
ಈ ರೀಲ್ಸ್ ವೈರಲ್ ಆಗುತ್ತಾ ಇದ್ದಹಾಗೆ ಇದನ್ನು ಕಂಡಂತಹ ನಟ್ಟಿಗರು ತಮ್ಮ ಜೀವನದಲ್ಲಿ ಉಂಟಾದ ಕಹಿ ಅನುಭವಗಳನ್ನು / ಬ್ರೇಕ್ ಅಪ್ ಸ್ಟೋರಿಗಳನ್ನು ಕಮೆಂಟ್ ಮೂಲಕ ಹಾಕುತ್ತಾ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಹಲವರು ಹುಡುಗಿಯರಿಗೆ ಸಮಾಧಾನ ಮಾಡುವ ಪ್ರಯತ್ನಕ್ಕೂ ಮುಂದಾಗಿದ್ದಾರೆ.