ರಾಮಾಚಾರಿ ಜೋಡಿಯ ಗಣೇಶ ಪೂಜೆ ಹೇಗಿತ್ತು ನೋಡಿ! ಸುಂದರ ಕ್ಷಣಗಳು!!

ಸ್ನೇಹಿತರೆ, ಕಳೆದ ವರ್ಷದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವಂತಹ ರಾಮಾಚಾರಿ(Ramachari) ಧಾರವಾಹಿ ಟಿ ಆರ್ ಪಿ ರೇಟಿಂಗ್ ನಲ್ಲಿ ಉತ್ತಮ ಸ್ಥಾನದಲ್ಲಿದ್ದು, ಈ ಧಾರಾವಾಹಿಯಲ್ಲಿ ಅಭಿನಯಿಸುವಂತಹ ಪ್ರತಿಯೊಬ್ಬ ಕಲಾವಿದರು ಕೂಡ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಹೌದು ಗೆಳೆಯರೇ ದುರಂಕಾರಿ ಹೆಣ್ಣುಮಗಳ ಪಾತ್ರದಲ್ಲಿ ಅಭಿನಯಿಸುತ್ತ ತನ್ನ ಮಾಡ್ರನ್ ಲುಕ್ನಿಂದಲೇ ಆರಂಭಿಕ ದಿನಗಳಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಿದಂತಹ ಚಾರು(Charu) ಇದೀಗ ರಾಮಚಾರಿಯ ಕೈ ಹಿಡಿದು ಸೀರೆಯಲ್ಲಿ ಕಂಗೊಳಿಸುತ್ತಾ ತನ್ನ ಸೌಮ್ಯ ಸ್ವಭಾವದಿಂದ ಕನ್ನಡಿಗರ ಮನೆಮಗಳಾಗಿಯೇ ಹೋಗಿದ್ದಾರೆ. ಹೌದು ಸ್ನೇಹಿತರೆ, ಸೀರಿಯಲ್ ನಲ್ಲಿ ಅಭಿನಯಿಸಲು ಪ್ರಾರಂಭಿಸಿದ ಆರಂಭಿಕ ದಿನಗಳಲ್ಲಿ ಚಾರು ಪಾತ್ರಧಾರಿ ಮೌನ ಗುಡ್ಡೆಮನೆ(Mouna Guddemane) ಕೇವಲ ನೆಗೆಟಿವ್ ಕಾಮೆಂಟ್ಗಳಲ್ಲಿ ಹೆಚ್ಚಾಗಿ ಸ್ವೀಕರಿಸಿದರು.

ಅಂತಹ ಪಾತ್ರ ಇವರದಾಗಿತ್ತು ಆದರೆ ಈಗ ಚಾರು ಅಂದ್ರೆ ಅವಳೇನ ಎನ್ನುವಷ್ಟರ ಮಟ್ಟಕ್ಕೆ ಇವರ ಕ್ಯಾರೆಕ್ಟರ್ ಬದಲಾಗಿದ್ದು ರಾಮಾಚಾರಿ ಯನ್ನು ಮದುವೆಯಾದ ಮೇಲೆ ಇವರ ಸೌಮ್ಯ ಸ್ವಭಾವ ನಡೆ ಕೀಟಲೆ ಹಾಗೂ ಗಂಡನನ್ನು ಸದಾ ಕಾಲ ಸಮಸ್ಯೆಗೆ ಸಿಲುಕಿಸುವಂತಹ ಸ್ವಭಾವ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಮೌನ ಗುಡ್ಡೆಮನೆ(Mouna Guddemane) ಯವರನ್ನು ನೋಡುವ ಸಲುವಾಗಿಯೇ ಅದೆಷ್ಟೋ ಜನ ರಾಮಚಾರಿ ಸೀರಿಯಲ್ ಅನ್ನು ವೀಕ್ಷಿಸುವ ಉದಾಹರಣೆಗಳಿವೆ.

ಈ ಧಾರವಾಹಿಯಲ್ಲಿ ನೆನ್ನೆ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಲಾಗಿದ್ದು, ಪರಿಸರಸ್ನೇಹಿ ಗಣಪನನ್ನು ಮನೆಗೆ ಬರಮಾಡಿಕೊಂಡು ಕುಟುಂಬಸ್ಥರೆಲ್ಲರೂ ಸೇರಿ ಪೂಜೆ ಮಾಡಿ ಸಿಹಿ ತಿಂಡಿಯನ್ನು ಸವಿದು ಹಬ್ಬ ಆಚರಿಸಿರುವ ಎಪಿಸೋಡ್ ಪ್ರಸಾರವಾಗಿದೆ. ಅದರ ಕೆಲ ಫೋಟೋಗಳನ್ನು ನಟಿ ಮೌನ ಗುಡ್ಡೆ ಮನೆ ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂಬ ಕ್ಯಾಪ್ಶನ್ ಬರೆದು ಫೋಟೋ ಶೇರ್ ಮಾಡಿದ್ದಾರೆ.

ಯಥಾಪ್ರಕಾರ ರಾಮಾಚಾರಿ ಪಂಚೆ ಹಾಗೂ ಶಲ್ಯ ಕಟ್ಟಿ ಫೋಟೋಗೆ ಪೋಸ್ ನೀಡಿದ್ದರೆ ಇತ್ತ ಕಿರುತೆರೆ ಪ್ರೇಕ್ಷಕರ ಹಾರ್ಟ್ ಫೇವರೆಟ್ ನಟಿ ಚಾರು ಅಳಿಯಾಸ್ ಮೌನ ಗುಡ್ಡೆಮನೆ(Mouna Guddemane) ಹಳದಿ ಬಣ್ಣದ ಸೀರೆಯುಟ್ಟು ಬಹಳ ಅಮೋಘವಾಗಿ ಕಾಣಿಸಿಕೊಂಡಿದ್ದಾರೆ.

Public News

Leave a Reply

Your email address will not be published. Required fields are marked *