ಸ್ನೇಹಿತರೆ, ರಕ್ಷಿತ್ ಶೆಟ್ಟಿ ಅಭಿನಯದ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸುವ ಮೂಲಕ ಸಿಂಪಲ್ ನಟಿಯಂದೇ ಸ್ಯಾಂಡಲ್ ವುಡ್ನಲ್ಲಿ ಪ್ರಖ್ಯಾತಿ ಪಡೆದಿರುವಂತಹ ಶ್ವೇತ ಶ್ರೀವಾತ್ಸವ ಅವರು ಸಿನಿಮಗಳಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವಂತಹ ನಟಿ ಎಂಬ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ.
ಹೌದು ಗೆಳೆಯರೇ ತಮ್ಮ ಮಗಳಾದ ಅಸ್ಮಿತ ಅವರೊಂದಿಗೆ ಸೇರಿ ಬಹಳನೇ ಮುದ್ದಾದ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಡನೆ ಒಳ್ಳೆಯ ಒಡನಾಟ ಬೆಳೆಸಿಕೊಂಡಿರುವಂತಹ ಶ್ವೇತ ಶ್ರೀವಾತ್ಸವರವರು ಒಂದಲ್ಲ ಒಂದು ವಿಶೇಷ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ನಲ್ಲಿ ಇರುತ್ತಾರೆ.
ಇದೀಗ ಹಿಂದಿ ಹಾಡೊಂದಕ್ಕೆ ಬಹಳ ಬೋಲ್ಡ್ ಆಗಿ ತಮ್ಮ ಸೊಂಟ ಬೆಳಕಿಸುವ ಮೂಲಕ ತಮ್ಮ ಡ್ಯಾನ್ಸಿಂಗ್ ಕಲಿಯನ್ನು ಅನಾವರಣ ಗೊಳಿಸಿರುವ ಈ ವಿಡಿಯೋಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬರುತ್ತಿದೆ. ಆತ್ಮಸಾಕ್ಷಿ, ಆ ದಿನಗಳು, ಫೇರ್ ಅಂಡ್ ಲವ್ಲಿ, ಸಿಂಪಲ್ಲಾಗಿ ಒಂದು ಲವ್ ಸ್ಟೋರಿ, ಕಿರುಗೂರಿನ ಗಯ್ಯಾಳಿಗಳು ಹಾಗೂ ಈಗಿನ ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ನಟನಾ ಚಾಪನ್ನು ಕನ್ನಡಿಗರಿಗೆ ತೋರ್ಪಡಿಸಿದ್ದಾರೆ.
ಇನ್ನೂ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬೆರಳಿಕೆಯಷ್ಟು ಸಿನಿಮಾಗಳನ್ನು ಮಾಡಿ ಗುರುತಿಸಿಕೊಂಡಿರುವ ಶ್ವೇತ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ನಂತಹ ಜಾಲಗಳಲ್ಲಿ ತಮ್ಮ ದೈನಂದಿನ ಅಪ್ಡೇಟ್ಗಳನ್ನು ನೀಡುತ್ತಿರುತ್ತಾರೆ.
View this post on Instagram
ಅಷ್ಟೇ ಅಲ್ಲದೆ ರೀಲ್ಸ್ ವಿಡಿಯೋಗಳ ಮೂಲಕ ಟ್ರೆಂಡ್ ಸೃಷ್ಟಿ ಮಾಡುವ ಈ ನಟಿ ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ಸ್ ಧರಿಸಿ ಹಿಂದಿ ಹಾಡೊಂದಕ್ಕೆ ಬಹಳ ಬೋಲ್ಡ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಒಂದು ವಿಡಿಯೋಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದ್ದು, ನಟಿ ಶ್ವೇತಾ ಅವರನ್ನು ಬೇರೆಯದ್ದೆ ಅವತಾರದಲ್ಲಿ ಕಂಡಂತಹ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.