Ramya Krishnan : ನಟಿ ರಮ್ಯಾ ಕೃಷ್ಣನ್ (Ramya Krishan) 90ರ ದಶಕದ ಟಾಪ್ ಹೀರೋಯಿನ್ಗಳಲ್ಲಿ ಒಬ್ಬರಾಗಿದ್ದರು. ತನ್ನ ಬ್ಯೂಟಿ ಹಾಗೂ ಅಭಿನಯದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ನಟಿ ಇವತ್ತಿಗೂ ಕೂಡ ಅಷ್ಟೇ ಬೇಡಿಕೆಯನ್ನು ಹೊಂದಿದ್ದಾರೆ. ಸಿನಿ ಕೆರಿಯರ್ನ ಸೆಕೆಂಡ್ ಇನ್ನಿಂಗ್ಸ್ನಲ್ಲೂ ನಟಿ ರಮ್ಯಾ ಕೃಷ್ಣನ್ ಸಖತ್ ಸೌಂಡ್ ಮಾಡುತ್ತಿದ್ದಾರೆಡುತ್ತಿದ್ದಾರೆ. ಒಂದು ಕಾಲದಲ್ಲಿ ಹೀರೋಯಿನ್ (Heroin) ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಇದೀಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟಿ ಆಗೊಮ್ಮೆ ಹೀಗೊಮ್ಮೆ ಸುದ್ದಿಯಲ್ಲಿರುತ್ತಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಪ್ಡೇಟ್ ನೀಡುತ್ತಿರುತ್ತಾರೆ. ಇದೀಗ ವಿಮಾನದಲ್ಲಿ ಕುಳಿತು ಸೆಲ್ಫಿ ಕ್ಲಿಕಿಸಿಕೊಂಡಿರುವ ನಟಿ ರಮ್ಯಾ ಕೃಷ್ಣನ್ ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆ (Instagram Account) ಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋದಲ್ಲಿ ನಟಿ ರಮ್ಯಾ ಕೃಷ್ಣನ್ ಸ್ಟೈಲಿಶ್ ಲುಕ್ (Stylish Look) ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿಕೊಂಡು ಹೊಸದೊಂದು ಆರಂಭ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು ಫ್ಯಾನ್ಸ್ ಮೆಚ್ಚಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಬಹುಭಾಷಾ ನಟಿಯಾಗಿ ತೆಲುಗು (Telugu), ಕನ್ನಡ (Kannada), ತಮಿಳು (Tamil), ಮಲಯಾಳಂ (Malayalam) ಮತ್ತು ಹಿಂದಿ (Hindi) ಭಾಷೆಗಳಲ್ಲಿ ನಟನೆಯ ಮೂಲಕವೇ ಸೈ ಎನಿಸಿಕೊಂಡವರು. ರಮ್ಯಾಕೃಷ್ಣ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣನ್ ಸುಮಾರು 28 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಇವರು ವಿಭಿನ್ನ ಹಾಗೂ ಮಹತ್ವದ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆಯಷ್ಟೇ ಬಾಹುಬಲಿ (Bahubali) ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ‘ರಾಜಮಾತೆ’ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಈ ಸಿನಿಮಾದ ಬಳಿಕ ನಟಿ ರಮ್ಯಾ ಕೃಷ್ಣನ್ ಅವರ ಹೆಚ್ಚಿನ ಬೇಡಿಕೆಯು ಹೆಚ್ಚಾಯಿತು. ಇತ್ತೀಚೆಗಷ್ಟೇ ತೆರೆ ಕಂಡ ಸೂಪರ್ ಸ್ಟಾರ್ ರಜನಿಕಾಂತ್ (Super Star Rajanikanth) ಅಭಿನಯದ ಜೈಲರ್ (Jailar) ಚಿತ್ರದಲ್ಲಿ ರಜನಿ ಪತ್ನಿಯಾಗಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಪಡೆಯಪ್ಪ ಚಿತ್ರದಲ್ಲಿ ಜೊತೆ ತೆರೆ ಹಂಚಿಕೊಂಡಿದ್ದ ಇವರಿಬ್ಬರೂ ಇದೀಗ ಜೈಲರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.
ಇದೀಗ ಜೈಲರ್ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿವೆ. ಜೈಲರ್‌ನಲ್ಲಿ ರಜನಿಕಾಂತ್ ಪತ್ನಿಯಾಗಿ ನಟಿಸಲು ರಮ್ಯಾ ಕೃಷ್ಣನ್ 80 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಒಂದು ಕಾಲದ ಎವರ್ ಗ್ರೀನ್ ನಟಿ ರಮ್ಯಾ ಕೃಷ್ಣನ್ ಇದೀಗ ಸಂಭಾವನೆ ಹಾಗೂ ಬೇಡಿಕೆ ಎರಡು ಕೂಡ ಹೆಚ್ಚಾಗಿವೆ. ನಟಿ ರಮ್ಯಾ ಕೃಷ್ಣನ್ ಅವರಿಗೆ ಅವಕಾಶಗಳು ಬರುತ್ತಿದ್ದು ಕೈ ತುಂಬಾ ಪ್ರಾಜೆಕ್ಟ್ ಗಳನ್ನು ಹಿಡಿದು ಬ್ಯುಸಿಯಾಗಿದ್ದಾರೆ.