7 Hot News
A Karnataka Times Affiliate Kannada News Portal

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸತ್ಯ ಧಾರವಾಹಿಯ ಅಮುಲ್ ಬೇಬಿ, ಫೋಟೋ ಶೇರ್ ಮಾಡಿ ಸಿಹಿ ಸುದ್ದಿ ಹಂಚಿಕೊಂಡ ಸಾಗರ್ ಬಿಳಿ ಗೌಡ!

advertisement

ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಗುಡ್ ನ್ಯೂಸ್ ಗಳು ಹರಿದಾಡುತ್ತಿದೆ. ಕೆಲವರು ದಾಂಪತ್ಯ ಜೀವನದ ಕೊಂಡಿ ಬೆಸೆದುಕೊಂಡು ಮದುವೆ ಶುಭ ಶುದ್ದಿಯನ್ನು ಹಂಚಿಕೊಂಡರೆ ಇನ್ನಷ್ಟು ಸೆಲೆಬ್ರಿಟಿಗಳು ತಮ್ಮ ಬೇಬಿ ಬಂಪ್(Baby bump) ಫೋಟೋಶೂಟ್ ಗಳ ಮೂಲಕ ಮಗುವಿನ ನಿರೀಕ್ಷೆಯಲ್ಲಿರುವ ಖುಷಿ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ.

advertisement

ವರ್ಷದ ಆರಂಭದಲ್ಲಿ ನಟಿ ಅತಿಥಿ ಪ್ರಭುದೇವ ಅವರು ತಾಯಿಯಾಗುತ್ತಿರುವಂತಹ ಖುಷಿ ವಿಚಾರದ ಮೂಲಕ ಎಲ್ಲರ ಸಂತಸವನ್ನು ಹೆಚ್ಚಿಸಿದರು, ಅದರಂತೆ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಸ್ಯ ಸೀರಿಯಲ್ ನ ಅಮೂಲ್ ಬೇಬಿ(Amul baby) ಎಂದೆ ಕರೆಯಲ್ಪಡುವ ಕಾರ್ತಿಕ್ ಪಾತ್ರದಾರಿ ಸಾಗರ್ ಬಿಳಿ ಗೌಡ (Sagar Biligowda) ಅವರು ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

advertisement

ಕಳೆದ ವರ್ಷವಷ್ಟೇ ಸಾಗರ್ ಬಿಳಿ ಗೌಡ ಅವರು ತಮ್ಮ ಬಹುಕಾಲದ ಗೆಳತಿ ಸಿರಿ ರಾಜು ಅವರೊಂದಿಗೆ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಎಲ್ಲೆಡೆ ಬಾರಿ ಸುದ್ದಿಗೊಳಗಾಗಿದ್ದರು. ಇವರ ಮದುವೆಯ ಮುದ್ದಾದ ಫೋಟೋಗಳು ನೆಟ್ಟಿಗರನ್ನು ಆಕರ್ಷಿಸಿದ್ದು, ಅದರಿಂದ ತಮ್ಮ ಬೇಬಿ ಬಂಪ್(Baby bump) ಫೋಟೋಶೂಟ್ಗಳನ್ನು ಹಂಚಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಖುಷಿಯನ್ನು ದಂಪತಿಗಳು ಹಂಚಿಕೊಂಡಿದ್ದಾರೆ.

advertisement

advertisement

ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿವೈರಲ್ ಆಗುತ್ತಿದ್ದು ನೆಟ್ಟಿಗರು ಸಾಗರ್ ಬಿಳಿ ಗೌಡ (Sagar Biligowda) ದಂಪತಿಗಳಿಗೆ ಶುಭ ಕೋರಿದ್ದಾರೆ. ಸಾಗರ ಬಿಳಿ ಗೌಡ ಕಪ್ಪು ಮತ್ತು ಬಿಳಿ ಬಣ್ಣದ ಶರ್ಟ್ ಮತ್ತು ಟೋನ್ ಜೀನ್ಸ್ ಧರಿಸಿ ತಮ್ಮ ಹೆಂಡತಿಯೊಂದಿಗೆ ಬಹಳ ಮೋಹಕವಾಗಿ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಸಿರಿ ರಾಜು ಬೂದು ಬಣ್ಣದ ಬಾಡಿಕಾನ್ ಉಡುಪಿನಲ್ಲಿ (grey bodycon dress) ಬಹಳ ಮುದ್ದಾಗಿ ಕಾಣಿಸುತ್ತಿದ್ದು, ಇವರ ಮುಖದ ಮೇಲಿರುವಂತಹ ಕಾಂತಿಯನ್ನು ಗಮನಿಸಿದಂತಹ ಅಭಿಮಾನಿಗಳು ಯಾವ ಮಗು ಜನಿಸಬಹುದು ಎಂಬ ಲೆಕ್ಕಾಚಾರವನ್ನು ಕಮೆಂಟ್ ಬಾಕ್ಸ್ ನಲ್ಲಿ ಜೋರಾಗಿ ಮಾಡುತ್ತಿದ್ದಾರೆ.

advertisement

advertisement

ಹೀಗೆ ತಮ್ಮ ಬೇಬಿ ಬಂಪ್(Baby bump) ಕೆಲ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿರುವ ಸಿರಿ ರಾಜು (Siri Raju) ಪವಾಡಗಳು ಸಹ ಸಮಯ ತೆಗೆದುಕೊಳ್ಳುತ್ತದೆ ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಹಂಚಿಕೊಂಡರೆ ಸಾಗರ್ ಬಿಳಿ ಗೌಡ ತಮ್ಮ ಪತ್ನಿಯ ಹೊಟ್ಟೆಯ ಮೇಲೆ ಕೈ ಇಟ್ಟಿರುವ ಫೋಟೋಗೆ ನಾನು ನಿಮ್ಮನ್ನು ಭೇಟಿ ಮಾಡಲು ಕಾಯುತಿದ್ದೇನೆ, ಎಂಬ ಸುಂದರವಾದ ಕ್ಯಾಪ್ಷನ್ ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

advertisement

Leave A Reply

Your email address will not be published.