7 Hot News
A Karnataka Times Affiliate Kannada News Portal

ವಿನೋದ್ ರಾಜ್ ಅವರು ಮನೆ ಕೆಲಸದವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ? ತಮಿಳುನಾಡಿನಲ್ಲಿ ಇವರ ಹೆಸರಿನಲ್ಲಿ ಇರುವ ಆಸ್ತಿ ಎಷ್ಟು ಕೋಟಿ ನೋಡಿ!!

advertisement

ಕನ್ನಡದ ಹಿರಿಯ ನಟಿ ಲೀಲಾವತಿ ಅಮ್ಮನವರು ವಾಯೋ ಸಹಜ ಕಾಯಿಲೆಯಿಂದ ಅಗಲಿ ಬರೋಬ್ಬರಿ 10 ದಿನಗಳು ಕಳೆದಿದೆ. ಕೇವಲ 86 ವರ್ಷಕ್ಕೆ ನೂರಾರು ಜನರಿಗೆ ಆಸರೆಯಾಗಿದ್ದಂತಹ ಲೀಲಾವತಿ ಅವರನ್ನು ಭಗವಂತ ತನ್ನತ್ತ ಕರೆದುಕೊಂಡು ತುಂಬಲಾರದಂತಹ ನೋವನ್ನು ನೀಡಿ ಹೋಗಿದ್ದಾನೆ. ತನ್ನ ತಾಯಿಯನ್ನು ಸರ್ವಸ್ವವೆಂದು ಪೂಜಿಸುತ್ತಿದ್ದಂತಹ ಮಗ ವಿನೋದ್ ರಾಜ್ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

advertisement

ಹೀಗಿರುವಾಗ ಸಾಮಾಜಿಕ ಜಾಲತಾಣದ ತುಂಬೆಲ್ಲ ಲೀಲಾವತಿಯವರ ಕುಟುಂಬದ ಕುರಿತದ ಸಾಕಷ್ಟು ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನಾವಿವತ್ತು ವಿನೋದ್ ರಾಜ್ ತಮ್ಮ ಹೆಂಡತಿ ಹಾಗೂ ಮಗನ ಹೆಸರಿನಲ್ಲಿ ಮಾಡಿಟ್ಟಿರುವ ಒಟ್ಟು ಆಸ್ತಿ ಎಷ್ಟು? ಅವರು ಗುಟ್ಟಾಗಿ ಮನೆ ಕೆಲಸದಾಕೆಯನ್ನು ಪ್ರೀತಿಸಿ ಮದುವೆಯಾದದ್ದು ಯಾಕೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲಿದ್ದೇವೆ.

advertisement

ಹೌದು ಗೆಳೆಯರೇ ಕಳೆದ ಕೆಲವು ತಿಂಗಳ ಹಿಂದೆ ಡಾ. ರಾಜಕುಮಾರ್ ಅವರ ಕಾಲದ ಪ್ರಸಿದ್ಧ ನಿರ್ದೇಶಕರಾಗಿದ್ದ ಪ್ರಕಾಶ್ ರಾಜ್ ಮೇಹು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೀಲಾವತಿ ಅವರ ಕುಟುಂಬಕ್ಕೆ ಸಂಬಂಧಿಸಿದಂತಹ ಸಾಕಷ್ಟು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಹರಿದಾಡುತ್ತಿದ್ದಂತಹ ಎಲ್ಲಾ ಗಾಸಿಪ್ ಗಳಿಗೂ ಬ್ರೇಕ್ ಹಾಕುವ ಪ್ರಯತ್ನ ಮಾಡಿದರು.

advertisement

advertisement

ಇದರಲ್ಲಿ ಲೀಲಾವತಿ ಅಮ್ಮನವರು ತಮ್ಮ ಮೊದಲ ಚಿತ್ರದ ನಿರ್ದೇಶಕರಾದ ಮಹಾಲಿಂಗ ಭಾಗವತರ್ ಅವರನ್ನು ಮದುವೆಯಾಗಿದ್ದರು ಈ ಇಬ್ಬರು ದಂಪತಿಗಳಿಗೆ ಜನಿಸಿದಂತಹ ಮಗನೇ ವಿನೋದ್ ರಾಜ್. ಅವರಿಗೂ ಡಾ. ರಾಜಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ ಅಲ್ಲದೆ ವಿನೋದ್ ರಾಜ್ 1999ರಲ್ಲಿ ತಮ್ಮ ಮನೆ ಕೆಲಸದ ಮಹಿಳೆ ಆಶಾ ಎಂಬುವರನ್ನು ಪ್ರೀತಿಸಿ ಗುಟ್ಟಾಗಿ ಮದುವೆಯಾಗಿದ್ದರು.

advertisement

ಲೀಲಾವತಿ ಅಮ್ಮನವರೇ ದೇವಸ್ಥಾನ ಒಂದಕ್ಕೆ ಕರೆದುಕೊಂಡು ಹೋಗಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದಾರೆ. ವಿನೋದ್ ರಾಜ್ ಮತ್ತು ಆಶಾ ದಂಪತಿಗಳಿಗೆ 2001ರಲ್ಲಿ ಯುವರಾಜ್ ಎಂಬ ಮಗ ಜನಿಸಿದನು ಎಂಬ ಎಲ್ಲಾ ಸ್ಪೋಟಕ ಸತ್ಯವನ್ನು ಹೊರಗೆಳೆದರು. ಅಲ್ಲಿವರೆಗೂ ಯಾರಿಗೂ ಗೊತ್ತಾಗದ ಹಾಗೆ ಇದ್ದಂತಹ ವಿಚಾರ ಬಟಾ ಬೈಲಾದ ಬೆನ್ನೆಲೆ ವಿನೋದ್ ರಾಜ್ ಮತ್ತು ಲೀಲಾವತಿ ಅಮ್ಮನವರು ತಾವು ಗುಟ್ಟಾಗಿ ಮದುವೆಯಾದದ್ದು ನಿಜ ಎಂಬುದನ್ನು ಒಪ್ಪಿಕೊಂಡು ಅಂತಹ ಘಟನೆ ಸಂಭವಿಸಲು ಕಾರಣವೇನೆಂಬುದನ್ನು ವಿವರಿಸಿದ್ದರು.

advertisement

“ಮೊಮ್ಮಗನ ವಿದ್ಯಾಭ್ಯಾಸದ ಚಿಂತನೆಯಿಂದ ನನ್ನ ತಾಯಿಯವರು ಹೆಂಡತಿ ಮತ್ತು ಮಗನನ್ನು ಚೆನ್ನೈನಲ್ಲಿ ಇರಿಸಿದ್ದರು ಅವರು ನಮ್ಮೊಂದಿಗೆ ಇದ್ದರೆ ಬೇಡದ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುತ್ತಾರೆ, ಎಂಬ ಉದ್ದೇಶ ಅವರದಾಗಿತ್ತು. ನನ್ನ ಮಗ ಇಂಜಿನಿಯರಿಂಗ್ ಮುಗಿಸಿದ್ದಾನೆ ತಿಂಗಳಿಗೆ 50,000 ಸಂಭಾವನೆಯನ್ನು ತರುತ್ತಾನೆ.

advertisement

ಅವನ ಕಾಲಿನ ಮೇಲೆ ನಿಂತುಕೊಳ್ಳುವ ಸಾಮರ್ಥ್ಯ ಅವನಿಗೆ ಇದೆ ಅಷ್ಟೇ ಸಾಕು ನಾನು ಆಗಾಗ ಅವರನ್ನು ನೋಡಿ ಬರಲು ಚೆನ್ನಾಗಿ ಹೋಗುತ್ತಿದೆ” ಎಂದು ವಿನೋದ್ ರಾಜ್ ತಮ್ಮ ಮದುವೆಯಾಗಿರುವಂತಹ ಸತ್ಯವನ್ನು ಒಪ್ಪಿಕೊಂಡರು.ಇನ್ನು ಮೂಲವೊಂದರ ಮಾಹಿತಿಯ ಪ್ರಕಾರ ಲೀಲಾವತಿ ಅಮ್ಮನವರು ಮತ್ತು ವಿನೋದ್ ರಾಜ್ ಅವರು ಸೇರಿ ಚೆನ್ನೈನಲ್ಲಿ ಬರೋಬ್ಬರಿ 10 ಕೋಟಿ ಆಸ್ತಿಯನ್ನು ಯುವರಾಜ್ ಅವರ ಹೆಸರಿನಲ್ಲಿ ಮಾಡಿರುವ ವಿಚಾರ ತಿಳಿದು ಬಂದಿದೆ.

advertisement

Leave A Reply

Your email address will not be published.