ಸ್ಪಂದನ ಅವರ ಪುತ್ರನ ಕೈ ಹಿಡಿದು ಅಕ್ಕರೆಯಿಂದ ಊಟ ಮಾಡಿಸಿದ ನಟ ಶ್ರೀಮುರುಳಿ ಪತ್ನಿ! ಭೇಷ್ ಎಂದ ಜನತೆ!!

ಸ್ನೇಹಿತರೆ, ಕನ್ನಡ ಚಿತ್ರರಂಗಕ್ಕೆ ಅದ್ಯಾರ ಕೆಟ್ಟ ಕಣ್ಣು ತಗುಲಿದೆಯೋ ಗೊತ್ತಿಲ್ಲ. ಒಬ್ಬರಾದ ನಂತರ ಮತ್ತೋರ್ವ ನಟ-ನಟಿಯರು ಅತಿ ಚಿಕ್ಕ ವಯಸ್ಸಿಗೆ ತಮ್ಮ ದೈಹಿಕ ಸಮಸ್ಯೆಗಳಿಂದಾಗಿ ನಮ್ಮೆಲ್ಲರಿಂದಗಲಿ ಇಹಲೋಕ ತ್ಯಜಿಸುತ್ತಾ ಅರಗಿಸಿಕೊಳ್ಳಲಾಗದಂತಹ ನೋವನ್ನು ತಂದುಡ್ಡುತ್ತಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಂತಹ ರಾಜ್ ಕುಟುಂಬಕ್ಕೆ ಮತ್ತೊಂದು ಆಘಾತದ ಸುದ್ದಿ ಕಣ್ಣೀರಿನ ಛಾಯೆಯನ್ನು ಮೂಡಿಸಿತ್ತು.

ಬಹಳ ಲವಲವಿಕೆಯಿಂದ ಸ್ನೇಹಿತರೊಂದಿಗೆ ಮಾನ್ಸೂನ್ ರಜೆಯನ್ನು ಎಂಜಾಯ್ ಮಾಡುವ ಸಲುವಾಗಿ ಥೈಲ್ಯಾಂಡ್ ಟ್ರಿಪ್ಗೆ ಹೋಗಿದ್ದಂತಹ ನಗುವಿನ ರಾಜಕುಮಾರಿ ಸ್ಪಂದನ ಮರಳಿ ಬಂದದ್ದು, ಎಲ್ಲರಲ್ಲೂ ಕಣ್ಣೀರನ್ನು ತರಿಸುವ ಮೂಲಕ. ಹೌದು ಗೆಳೆಯರೇ ಬ್ಯಾಂಕಾಕ್ನಲ್ಲಿ ಶಾಪಿಂಗ್ ಮುಗಿಸಿ ರೂಮಿಗೆ ಹೋಗಿ ರೆಸ್ಟ್ ಮಾಡುವ ಸಲುವಾಗಿ ಮಲಗಿದ್ದಂತಹ ಸ್ಪಂದನ ವಿಜಯ್ ರಾಘವೇಂದ್ರ(Spandana Vijay raghavendra) ಮತ್ತೆ ಮೇಲ್ಹೇಳಲೇ ಇಲ್ಲ.

ಹೌದು ಗೆಳೆಯರೇ ಬಿಪಿ ಹೊರತಾಗಿ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ ಎಲ್ಲರೊಂದಿಗೆ ಬಹಳ ಲವಲವಿಕೆಯಿಂದ ಮಾತನಾಡಿಕೊಂಡು ತಮ್ಮ ಗಂಡನ ಪ್ರತಿ ಸಿನಿಮಾಗಳು ಸಪೋರ್ಟ್ ಮಾಡುತ್ತಾ ಸಾಕಷ್ಟು ಕಾರ್ಯಕ್ರಮಗಳಲ್ಲಿ ತಮ್ಮ ಪತಿಯೊಂದಿಗೆ ಕಾರ್ಯಕ್ರಮಗಳಲ್ಲಿಯೂ ಬಹಳ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಂತಹ ಚಿನ್ನಾರಿ ಮುತ್ತಣ್ಣ ಪ್ರೀತಿಯ ಅಚ್ಚು ಬಾರದ ಲೋಕಕ್ಕೆ ತ್ಯಜಿಸಿ ವಾರಗಳೇ ಉರುಳುತ್ತಿವೆ. ಆದರೂ ಕೂಡ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಅವರ ಕುಟುಂಬ ಈ ಒಂದು ನೋವನ್ನು ಮರೆಯಲಾಗಲಿ ಅಥವಾ ಅದರಿಂದ ಹೊರಬರಲಾಗಲಿ ಸಾಧ್ಯವೇ ಆಗುತ್ತಿಲ್ಲ.

ಪ್ರತಿಯೊಂದು ವಿಡಿಯೋದಲ್ಲಿಯೋ ವಿಜಯ್ ರಾಘವೇಂದ್ರ ತಮ್ಮ ಪ್ರೀತಿಯ ಪತ್ನಿಯನ್ನು ನೆನೆದು ಕಣ್ಣೀರು ಹಾಕುತ್ತಿರುವುದನ್ನು ಕಂಡರೆ ಪ್ರತಿಯೊಬ್ಬರಿಗೂ ಮನ ಕಲಕುತ್ತಿದೆ. ಹೀಗಿರುವಾಗ ಅತಿ ಸಣ್ಣ ವಯಸ್ಸಿಗೆ ಪ್ರೀತಿಯ ಅಮ್ಮನನ್ನು ಕಳೆದುಕೊಂಡಂತಹ ಮಗ ಶೌರ್ಯನ (Shourya) ಮನಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಯೋಚಿಸಿ.

 

View this post on Instagram

 

A post shared by Namma Kfi (@namma_kfi)

ಮೊನ್ನೆಯಷ್ಟೇ ಮಲ್ಲೇಶ್ವರಂನ ಸ್ಪಂದನ ಅವರ ತಂದೆ ಬಿಕೆ ಶಿವರಾಂ (BK Shivram) ಅವರ ಮನೆಯಲ್ಲಿ ಶಾಂತಿ ಹೋಮವನ್ನು ನೆರವೇರಿಸಲಾಗಿತ್ತು. ಈ ಸಂದರ್ಭದಲ್ಲಿ ಬಂದಂತಹ ಕುಟುಂಬಸ್ಥರಿಗೆ ಸ್ನೇಹಿತರಿಗೆ ಹಾಗೂ ಇನ್ನಿತರ ಸೆಲೆಬ್ರಿಟಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಮ್ಮನ ಅಗಲಿಕೆಯ ಪ್ರಸಾದವನ್ನು ಸವಿಯುತ್ತ ವಿಜಯ್ ರಾಘವೇಂದ್ರ ಅವರ ಮಗ ಶೌರ್ಯ ಶ್ರೀಮುರುಳಿ ಅವರ ಪತ್ನಿಯೊಂದಿಗೆ ಕುಳಿತಿದ್ದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ಲಾಗುತ್ತದೆ.

Public News

Leave a Reply

Your email address will not be published. Required fields are marked *