ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಹುಟ್ಟುಹಬ್ಬದ ಸಂಭ್ರಮ, ವಿಶೇಷವಾಗಿ ವಿಶ್ ಮಾಡಿದ ನಟಿ ಅನುಪಮಾ ಗೌಡ, ಫೋಟೋಸ್ ಇಲ್ಲಿವೆ!!

ಕಿರುತೆರೆಯಲ್ಲಿ ಗೊಂಬೆ ಎಂದರೆ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ (Neha Gowda). ಈ ಧಾರಾವಾಹಿಯಲ್ಲಿ ತಮ್ಮ ಅದ್ಭುತ ನಟನೆಯಿಂದಲೇ ಎಲ್ಲರ ಗಮನ ಸೆಳೆದಿದ್ದರು. ಇತ್ತೀಚೆಗಷ್ಟೇ ಸ್ಟಾರ್ ಸುವರ್ಣದಲ್ಲಿ ನಮ್ಮ ಲಚ್ಚಿ (Namma Lacchi) ಧಾರಾವಾಹಿ ನಟಿ ನೇಹಾ ಗೌಡ ಗಿರಿಜಾ (Girija) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಪಾತ್ರವು ಮುಗಿದಿದ್ದು, ಆಗಾಗ ಟ್ರಿಪ್ ಎಂದು ಸುದ್ದಿಯಲ್ಲಿರುವ ನಟಿಯು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. 

ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಅವರಿಗೆ ಇಂದು ಹುಟ್ಟುಹಬ್ಬದ (Birth Day) ಸಂಭ್ರಮ. ನಟಿಯ ಹುಟ್ಟುಹಬ್ಬಕ್ಕೆ ಕಿರುತೆರೆ ನಟಿ ಕಮ್ ನಿರೂಪಕಿ ಅನುಪಮಾ ಗೌಡ ವಿಶೇಷವಾಗಿ ವಿಶ್ ಮಾಡಿದ್ದಾರೆ. ಹೌದು, ನೇಹಾ ಗೌಡ (Neha Gowda) ಹಾಗೂ ಅನುಪಮಾ ಗೌಡ (Anupama Gowda) ಬಹಳ ಕಾಲದಿಂದ ಸ್ನೇಹಿತರು. ಈಗಾಗಲೇ ಸಾಕಷ್ಟು ವೇದಿಕೆಗಳು, ಬಿಗ್ ಬಾಸ್ ಶೋನಲ್ಲಿಯೂ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡಿದ್ದರು.

ಆದರೆ ಇದೀಗ ನಟಿ ನೇಹಾ ಗೌಡರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿ ಅನುಪಮಾ ಗೌಡರವರು ವಿಶೇಷವಾಗಿ ಪೋಸ್ಟ್ ಮಾಡಿಕೊಂಡಿದ್ದಾರೆ. ನೇಹಾ ಗೌಡರವರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿ ಅನುಪಮಾ ಗೌಡ, “ನೀನು ಯಾವಾಗಲೂ ನನ್ನ ಸಂತೋಷದ ಭಾಗವಾಗಿದ್ದಿಯಾ. ನಾನು ದುಃಖಿತರಾದಾಗ ನೀನು ನನ್ನೊಂದಿಗೆ ನಿಂತಿದ್ದೀಯಾ. ನಿನ್ನ ದಯೆ, ತಮಾಷೆ, ಹುಚ್ಚು ಹಾಗೂ ಎಲ್ಲಾದಕ್ಕೂ ಮುಖ್ಯ ವಾಗಿ ಸುಂದರ ಆತ್ಮವಾಗಿದ್ದೀಯ. ಈ ಸ್ನೇಹಕ್ಕಾಗಿ ಹಾಗೂ ನಾವಿಬ್ಬರೂ ಕಳೆದ 12 ವರ್ಷಗಳಿಂದ ಹಂಚಿಕೊಂಡ ಅದ್ಭುತ ಕ್ಷಣಗಳಿಗಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ! ಎಲ್ಲದಕ್ಕೂ ಧನ್ಯವಾದಗಳು.

ಜನ್ಮದಿನದ ಶುಭಾಶಯಗಳು ನಿನಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಅದ್ಭುತ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನೆಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ನಟಿ ನೇಹಾ ಗೌಡರವರಿಗೆ ಫ್ಯಾನ್ಸ್ ಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಓದು ಮುಗಿಯುತ್ತಿದ್ದಂತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹೌದು, ನಟಿ ನೇಹಾ ಗೌಡರವರಿಗೆ ನಟಿಯಾಗಬೇಕು ಎನ್ನುವ ಕನಸಿತ್ತು. ನಟಿಯಾಗಬೇಕು ಎನ್ನುವ ಕಾರಣಕ್ಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು.

ಹೀಗಿರುವಾಗ ಕಿರುತೆರೆಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ನೇಹಾ ಗೌಡ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ನಟಿ ನೇಹಾ ಗೌಡರವರಿಗೆ ಬ್ ಲಕ್ಷ್ಮಿ ಬಾರಮ್ಮ ಧಾರಾವಾಹಿ ಬ್ರೇಕ್ ನೀಡಿತು. ಅದಲ್ಲದೇ ಪತಿಯ ಜೊತೆಗೆ ರಾಜಾ ರಾಣಿ ಶೋನಲ್ಲಿ ಭಾಗವಹಿಸಿ ವಿನ್ನರ್ ಆದರು. ಆದರೆ ಇತ್ತೀಚೆಗಷ್ಟೇ ನಮ್ಮ ಲಚ್ಚಿ (Namma Lacchi) ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಯಾವುದೇ ಧಾರಾವಾಹಿಯಲ್ಲಿ ನಟಿಸದೇ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದಾರೆ.

Public News

Leave a Reply

Your email address will not be published. Required fields are marked *