7 Hot News
A Karnataka Times Affiliate Kannada News Portal

ನಟ ರೀಷಬ್ ಶೆಟ್ಟಿ ಮನೆಯಲ್ಲಿ ಸಂಕ್ರಾಂತಿ ಸಡಗರ ಹೇಗಿತ್ತು ನೋಡಿ! ಸುಂದರವಾದ ಫೋಟೋಗಳು ಇಲ್ಲಿವೆ!!

advertisement

ಪ್ರತಿ ಹಬ್ಬ ಹರಿದಿನಗಳನ್ನು ಬಹಳ ಅರ್ಥಪೂರ್ಣವಾಗಿ ಮನೆಯಲ್ಲಿ ಆಚರಿಸುವ ಮೂಲಕ ತಮ್ಮಿಬ್ಬರು ಮಕ್ಕಳಿಗೆ ಹಬ್ಬದ ವೃತ್ತಾಂತ ಮತ್ತು ಮಹತ್ವದ ಕುರಿತು ಅರಿವು ಮೂಡಿಸಿರುವ ರಿಷಭ ಶೆಟ್ಟಿ(Rishab Shetty) ಮತ್ತು ಪ್ರಗತಿ ಶೆಟ್ಟಿ(Pragathi Shetty) ಮನೆಯಲ್ಲಿ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯು ಬಹಳ ಅದ್ದೂರಿಯಾಗಿ ಆಚರಿಸಲಾಗಿದೆ, ಅದರ ಕೆಲವು ಸುಂದರ ಫೋಟೋಗಳನ್ನು ಪ್ರಗತಿ ಶೆಟ್ಟಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

advertisement

ಕಾಂತರಾ ಚಿತ್ರವೂ ಬ್ಲಾಕ್ಬಸ್ಟರ್ ಹಿಟ್ ಆದ ಬಳಿಕ ರಿಷಬ್ ಶೆಟ್ಟಿ ದಂಪತಿಗಳು ಏನೇ ಮಾಡಿದರೂ ಅದು ಬಹು ದೊಡ್ಡ ಮಟ್ಟದಲ್ಲಿ ಸುದ್ದಿಗೊಳದಾಗುತ್ತದೆ. ಅದರಂತೆ ಈ ದಂಪತಿಗಳು ಪ್ರತಿ ವಿಶೇಷ ದಿನವನ್ನು ಬಹಳ ಮಹತ್ವಪೂರ್ಣವಾಗಿ ಆಚರಣೆ ಮಾಡಿ ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ.

advertisement

ಹೀಗೆ ಮೊನ್ನೆ ಅಷ್ಟೇ ರಾಜ್ಯದಾದ್ಯಂತ ಎಲ್ಲೆಡೆ ಬಹಳ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದ್ದು ಪ್ರಗತಿ ಶೆಟ್ಟಿ ದಂಪತಿಗಳು ಕೂಡ ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೆ ಹೊಸ ಉಡುಪನ್ನು ಖರೀದಿಸಿ ಎಳ್ಳು ಬೆಲ್ಲ ಹಂಚಿ ಹಬ್ಬ ಆಚರಿಸಿದ್ದಾರೆ. ಹೌದು ಸ್ನೇಹಿತರೆ ಹಬ್ಬದ ದಿನ ಪ್ರಗತಿ ಶೆಟ್ಟಿ(Pragathi Shetty) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಂತಹ ಫೋಟೋಗಳು.

advertisement

advertisement

advertisement

ಬಹಳ ಮುದ್ದಾಗಿದ್ದು ಫೋಟೋದಲ್ಲಿ ಪುಟಾಣಿ ರಾಧ್ಯ ನೀಲಿ ಬಣ್ಣದ ಸೀರೆಯನ್ನು ಹುಟ್ಟಿಕೊಂಡು ಅದಕ್ಕೆ ಮ್ಯಾಚಿಂಗ್ ಆದ ಓಲೆ, ಸರ ಬಳೆಗಳನ್ನು ಧರಿಸಿ ಬಹಳ ಸಾಂಪ್ರದಾಯಕವಾಗಿ ಸಿಂಗರಿತಗೊಂಡು ಮುದ್ದಾಗಿ ಪೋಸ್ ನೀಡುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ. ಅಣ್ಣ ರನ್ವಿತ್ ಶೆಟ್ಟಿ (Ranvit Shetty) ಕೂಡ ಕೆಂಪು ಬಣ್ಣದ ಜುಬ್ಬಾ ಪೈಜಾಮ ಧರಿಸಿ ಹಬ್ಬದ ಔಟ್ ಫೀಟ್ ನಲ್ಲಿ ಮಿಂಚಿದ್ದಾರೆ. ಅಮ್ಮ ಪ್ರಗತಿ ಶೆಟ್ಟಿಯವರು ಈ ಬಾರಿಯ ಹಬ್ಬಕ್ಕೆ ಹೆಚ್ಚಾಗಿ ರೆಡಿಯಾಗದೆ ಮಕ್ಕಳಿಗೆ ಅಲಂಕಾರ ಮಾಡಿ ಖುಷಿ ಪಟ್ಟಿದ್ದಾರೆ. ಹೌದು ಸ್ನೇಹಿತರೆ ತಮ್ಮ ಇಬ್ಬರೂ ಮಕ್ಕಳಿಗೆ ಎಳ್ಳು ಬೆಲ್ಲವನ್ನು ನೀಡಿ ಇತರರಿಗೆ ಹಂಚುವಂತೆ ಹೇಳಿಕೊಡುತ್ತಿರುವ ಹಾಗೆ ಫೋಟೋ ಮೂಡಿಬಂದಿದ್ದು.

advertisement

advertisement

ಈ ಎಲ್ಲಾ ಸುಂದರ ಫೋಟೋಗಳನ್ನು ಪ್ರಗತಿಯವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ‘ಎಳ್ಳು ಬೆಲ್ಲ ತಿಂದು ಮುದ್ದು ಮುದ್ದಾಗಿ ಮಾತನಾಡೋಣ ನಮ್ಮಿಂದ ತಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು’ ಎಂಬ ಕ್ಯಾಪ್ಷನ್ ಬರೆದಿದ್ದಾರೆ. ಪೋಸ್ಟ್ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರಿ ವೈರಲಾಗಿದ್ದು, ಪುಟಾಣಿ ರಾಧ್ಯ (Baby Radhya) ಫೋಟೋಗೆ ನೀಡಿರುವಂತಹ ಮುಖಭಾವಕ್ಕೆ ಮನಸೋತು ಕ್ಯೂಟ್, ಬ್ಯೂಟಿಫುಲ್, ಮೊದಲು ನಿಮ್ಮ ಇಬ್ಬರು ಮಕ್ಕಳಿಗೆ ದೃಷ್ಟಿ ತೆಗೆಯಿರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಅವರಿಬ್ಬರ ಅಂದವನ್ನು ಕೊಂಡಾಡಿದ್ದಾರೆ.

advertisement

Leave A Reply

Your email address will not be published.