ಕೆಲ ದಿನಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿ ಅಲ್ಪಾವಧಿಯಲ್ಲಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಳ್ಳುವಂತಹ ಭಾಗ್ಯ ಗಿಟ್ಟಿಸಿಕೊಂಡು, ಗಣೇಶ್ ಹಾಗೂ ಡಾರ್ಲಿಂಗ್ ಕೃಷ್ಣ (Golden Star Ganesh & Darling Krishna) ಅವರ ಸಿನಿಮಾದಲ್ಲಿ ಅಭಿನಯಿಸಿ ಕನ್ನಡದ ಭರವಸೆಯ ನಟಿಯಾಗಿ ಹೊರಹೊಮ್ಮಿರುವಂತಹ ಮೇಘ ಶೆಟ್ಟಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಸುಂದರ ಫೋಟೋಶೂಟ್ ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ನೆಟ್ಟಿಗರನ್ನು ರಂಗಿಸುತ್ತಿರುತ್ತಾರೆ.
ಹೌದು ಸ್ನೇಹಿತರೆ ಜೊತೆ ಜೊತೆಯಲಿ(Jote Joteyali) ಸೀರಿಯಲ್ ಮುಗಿದ ನಂತರ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಯಾವುದೇ ರೀತಿಯಾದಂತಹ ಅಪ್ಡೇಟ್ ಗಳನ್ನು ಮೇಘ ಶೆಟ್ಟಿ(Megha Shetty) ನೀಡಿಲ್ಲ. ಇದರ ನಡುವೆ ಮೂಗುತಿ ಹಾಕಿಕೊಳ್ಳುತ್ತಿರುವಂತಹ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾ ಇದ್ದ ಹಾಗೆ ನೆಟ್ಟಿಗರೆಲ್ಲರೂ ಮದುವೆ ಫಿಕ್ಸ್ ಆಯ್ತಾ ಬಂಗಾರ ಎಂದು ಕಾಮೆಂಟ್ ಮಾಡುತ್ತಾ ಮೇಘ ಶೆಟ್ಟಿ ಅವರ ಕಾಲು ಎಳೆಯುತ್ತಿದ್ದಾರೆ.
ಹೌದು ಗೆಳೆಯರೇ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಮೇಘ ಶೆಟ್ಟಿ ಅನು ಸಿರಿಮನೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಅವರ ತಂದೆ ಸುಬ್ಬು (Subbu) ಸದಾ ಮೇಘ ಶೆಟ್ಟಿಯವರನ್ನು ಬಂಗಾರ ಎಂದೇ ಕರೆಯುತ್ತಿದ್ದರು. ಈ ಕಾರಣದಿಂದ ನೆಟ್ಟಿಗರು ಕೂಡ ಬಂಗಾರ ಎಂದು ಕಾಮೆಂಟ್ ಮಾಡುತ್ತಾ ಮೇಘ ಶೆಟ್ಟಿ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಆಕೆಯ ಕಾಲೆಳೆಯುತ್ತಿದ್ದಾರೆ.
ಹೌದು ಗೆಳೆಯರೇ ಕಳೆದ ಕೆಲ ದಿನಗಳಿಂದ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ಮೇಘ ಶೆಟ್ಟಿ(Megha Shetty) ಅವರು ತಮ್ಮ ಬೋಲ್ಡ್ ಫೋಟೋಗಳು ಹಾಗೂ ವಿಡಿಯೋಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿದ್ದರು. ಆದರೆ ಈಗ ಏಕಾಏಕಿ ಕೆಂಪು ಬಣ್ಣದ ಟೀಶರ್ಟ್ ಧರಿಸಿ ಒಡವೆ ಅಂಗಡಿವೊಂದಕ್ಕೆ ಹೋಗಿ ತಮ್ಮ ಮೂಗನ್ನು ಚುಚ್ಚಿಸಿಕೊಂಡಿದ್ದು ಆ ವೇಳೆ ನಿಧಾನವಾಗಿ ಚುಚ್ಚಿ ಎನ್ನುತ್ತಾ ಅದರ ನೋವಿಗೆ ಮೇಘ ಶೆಟ್ಟಿ ಕಣ್ಣೀರು ಹಾಕಿದ್ದಾರೆ.
View this post on Instagram
ಈ ವಿಡಿಯೋವನ್ನು ತಮ್ಮ ಅಭಿಮಾನಿಗಳು ಒಟ್ಟಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ಮೇಘ ಶೆಟ್ಟಿ(Megha Shetty) ಅವರ ಈ ಕಾರ್ಯಕ್ಕೆ ಅಭಿಮಾನಿಗಳು ವಿಭಿನ್ನ ರೀತಿಯಾದಂತಹ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದು, ಸದ್ದಿಲ್ಲದ ಮೇಘ ಶೆಟ್ಟಿ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೂಡ ಬಾರಿ ವೈರಲಾಗುತ್ತಿದೆ.