ಗಡಿಯಾರದ ಮುಳ್ಳಿನ ರೀತಿ ತನ್ನ ಕಾಲನ್ನು ಮೇಲಿಂದ ಕೆಳಗಿನ ವರೆಗೆ ತಿರುಗಿಸಿದ ಯುವತಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಕನ್ನಡಿಗರು!!

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಜನರೆಲ್ಲರೂ ಮಾಡ್ರನ್ ವ್ಯಾಯಾಮಕ್ಕೆ ಅಳವಡಿಕೆಯಾಗುತ್ತಾ ಜಿಮ ನಲ್ಲಿ ಕಸರತ್ತುಗಳನ್ನು ಮಾಡುವ ಮೂಲಕ ತಮ್ಮ ದೇಹವನ್ನು ಫಿಟ್ಟಾಗಿಸಿಕೊಳ್ಳುತ್ತಿದ್ದಾರೆ. ಆದರೆ ಹಿಂದೆಲ್ಲ ದೇವಾನುದೇವತೆಗಳು ಋಷಿಮುನಿಗಳೆಲ್ಲರೂ ವಿಭಿನ್ನ ಭಂಗಯಲ್ಲಿ ಯೋಗ ಹಾಗೂ ವ್ಯಾಯಾಮಗಳನ್ನು ಮಾಡುವ ಮೂಲಕ ತಮ್ಮ ದೇಹವನ್ನು ದಂಡಿಸುತ್ತಿದ್ದರು. ಹೀಗಾಗಿ ನಮ್ಮ ಸನಾತನ ಧರ್ಮದಿಂದಲೂ ಯೋಗಕ್ಕೆ ಅದರದೇ ಆದ ಮಹತ್ವವಿದೆ.

ಹೀಗೆ ಮನುಷ್ಯ ತನ್ನ ಪರಮ ಸ್ಥಿತಿಯನ್ನು ತಲುಪಲು ಯೋಗ ಹಾಗೂ ವ್ಯಾಯಾಮವನ್ನು ಪ್ರತಿನಿತ್ಯ ಆಚರಿಸುವುದು ಒಳ್ಳೆಯದು. ಹೀಗಾಗಿ ಸೋಶಿಯಲ್ ಮೀಡಿಯಾಗಳ ಮುಖಾಂತರ ಜನರಿಗೆ ಯೋಗ ಬೋಧನೆಯನ್ನು ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತದೆ. ತಮ್ಮ ದೇಹವನ್ನು ವಿಭಿನ್ನವಾದ ಯೋಗಗಳಿಗೆ ಹೊಂದಿಸಿಕೊಂಡು ಎಂದು ಕಂಡಿರದ ರೀತಿಯಲ್ಲಿ ಯೋಗ ಮಾಡುವ ಮೂಲಕ ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಿರುತ್ತಾರೆ.

ಅದರಲ್ಲಿ ಮುಂಬೈ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಯೋಗಾಸನದ ಬೋಧಕಿ ಅಪೂರ್ವ ತಿಲ್ವಾನಿ ಕೂಡ ಒಬ್ಬರು. ಹೌದು ಗೆಳೆಯರೇ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೂಟ್ಯೂಬ್ ನಂತಹ ಸೋಶಿಯಲ್ ಮೀಡಿಯಾಗಳನ್ನೂ ಬಳಸಿಕೊಂಡು ಅತಿ ಅದ್ಭುತ ಯಾರು ಮಾಡಿರದ ಬಂಗಿಯಲ್ಲೆಲ್ಲಾ ಯೋಗವನ್ನು ಮಾಡಿ ಆ ಕೆಲ ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿದ ಜನರನ್ನು ಯೋಗ ಮಾಡುವಂತೆ ಪ್ರೇರೇಪಿಸುತ್ತಿರುತ್ತಾರೆ.

ಹೀಗೆ ಪ್ರತಿದಿನ ಒಂದಲ್ಲ ಒಂದು ವಿಭಿನ್ನ ಯೋಗಗಳನ್ನು ಟ್ರೈ ಮಾಡಿದ ಅದರ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಈಕೆ ಗಡಿಯಾರದ ರೀತಿ ಯೋಗ ಮಾಡಿ ಮತ್ತೆ ಗಡಿಯಾರಕ್ಕೆ ಹಿಂತಿರುಗಿದ್ದೇನೆ ಎಂಬ ಕ್ಯಾಪ್ಷನ್ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ಒಂದು ವಿಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು ಇವರ ದೇಹದ ಫ್ಲೆಕ್ಸಿಬಿಲಿಟಿ ಕಂಡು ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದ್ದಾರೆ.

ಅಲ್ಲದೆ ಇದನ್ನು ಕಂಡಂತಹ ಸಾಕಷ್ಟು ಅಭಿಮಾನಿಗಳು ಇದನ್ನು ನೋಡಿಯೇ ನನ್ನ ಮೂಳೆಗಳೆಲ್ಲ ಮುರಿದು ಹೋದವು, ಕೆಲವರಿಗೆ ಇದು ಕೇವಲ 30 ಸೆಕೆಂಡಿನ ರೀಲ್ ವಿಡಿಯೋ ಇರಬಹುದು. ಆದರೆ ಆಕೆಗೆ ಇದು ವರ್ಷನು ವರ್ಷದ ಪ್ರಾಕ್ಟೀಸ್ ಎಂದು ಅಪೂರ್ವ ಅವರನ್ನು ಹಾಡಿ ಹೊಗಳುತ್ತಿದ್ದಾರೆ.

Public News

Leave a Reply

Your email address will not be published. Required fields are marked *