ಸಿನಿಮಾರಂಗದಲ್ಲಿ ಬದುಕುಕಟ್ಟಿಕೊಂಡವರು ಹಲವರಿದ್ದಾರೆ. ನಟ, ನಟಿ, ಪೋಷಕರು ಹಾಗೂ ಖಳ ನಟ ಪಾತ್ರದಲ್ಲಿ ಮಿಂಚಿದ್ದಾರೆ. ಹೌದು, ಯಾವುದೇ ಸಿನಿಮಾದಲ್ಲಿ ನಾಯಕ ಹಾಗೂ ನಾಯಕಿರಂತೆ, ಪೋಷಕ ನಟರು , ಖಳ ನಟರು ಹಾಗೂ ಹಾಸ್ಯ ನಟರು ಮುಖ್ಯವಾಗಿರುತ್ತಾರೆ. ಇದೀಗ ಕನ್ನಡ ಸಿನಿಮಾರಂಗದಲ್ಲಿ ಖಳನಟರಾಗಿ ಖ್ಯಾತಿಗಳಿಸಿಕೊಂಡವರಲ್ಲಿ ಬಿಎಸ್ ಅವಿನಾಶ್ (BS Avinash) ಕೂಡ ಒಬ್ಬರು.
ಇದೀಗ ಖ್ಯಾತ ಖಳ ನಟ ಬಿಎಸ್ ಅವಿನಾಶ್ ಅವರು ಮದುವೆ ವಾರ್ಷಿಕೋತ್ಸವ (Wedding Anniversary) ಕ್ಕೆ ವಿಶೇಷ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಮುದ್ದಿನ ಮಡದಿಯ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ನಟ ಬಿ.ಎಸ್ ಅವಿನಾಶ್ ಅವರು ನಾನೇನು ಮಾಡಿದರೂ ನೀನಿಲ್ಲದೇ ಅಲ್ಲವೇ ಅಲ್ಲ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ರಾಣಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಐದು ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ.
ಬಿ.ಎಸ್.ಅವಿನಾಶ್ ಅವರು ಮೂಲತಃ ಉದ್ಯಮಿ (Bussiness Man) ಯಾಗಿದ್ದು, ಆದರೆ ಕನ್ನಡ ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಉದ್ಯಮ ನಡೆಸುತ್ತಿದ್ದ ಇವರಿಗೆ ಸಿನಿಮಾರಂಗ ನಟಿಸುವ ಆಸೆಯಿತ್ತು. ಹೀಗಿರುವಾಗ ಒಂದು ಸಲ ಜಿಮ್‌ನಲ್ಲಿ ತಮ್ಮ ಸ್ನೇಹಿತರ ಮುಖಾಂತರ ಚಿರಂಜೀವಿ ಸರ್ಜಾ (Chiranjeevi Sarja) ರನ್ನು ಭೇಟಿ ಮಾಡಿದ್ದರು. ಟಿ.ಎಸ್.ನಾಗಾಭರಣ (TS Nagarabharana) ರವರ ಪುತ್ರ ಪನ್ನಾಗಭರಣರವರನ್ನು ಭೇಟಿ ಮಾಡಿದ ನಂತರ ಕೆಲವು ನಟನಾ ತರಬೇತಿಗಳಲ್ಲಿ ಭಾಗವಹಿಸಿದ್ದರು.
ಪನ್ನಾಗಭರಣರವರು ತಮ್ಮ ತಂದೆಯ ಚಿತ್ರ ಡಾಲಿ ಧನಂಜಯ (Dali Dhananjay) ಅಭಿನಯದ `ಅಲ್ಲಮ’ (Allama) ದಲ್ಲಿ ಒಂದು ಪಾತ್ರಕ್ಕೆ ಮಾಡುವಂತೆ ಹೇಳಿದ್ದರು. ಅಲ್ಲಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಕೆ.ಜಿ.ಎಫ್ (KGF) ಚಿತ್ರದಲ್ಲಿ ಅವಕಾಶವೊಂದು ಸಿಕ್ಕಿತು. ಕೆಜಿಎಫ್ ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ಗಡ್ಡವನ್ನು ಬಿಟ್ಟಿದ್ದರು.
ಈ ಚಿತ್ರದ ಮೂಲಕ ಅವಿನಾಶ್ ಕನ್ನಡ ಸಿನಿರಂಗಕ್ಕೆ ಖಳನಾಗಿ ಪರಿಚಯವಾದರು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ `ಬಾರ್ ಆಂಡ್ ರೆಸ್ಟೊರೆಂಟ್’ (Bar And Restorent) ಒಂದನ್ನು ನೆಡೆಸುತ್ತಿದ್ದಾರೆ. ವೃತ್ತಿ ಜೀವನದ ಜೊತೆಗೆ ಸಿನಿಮಾಗಳನ್ನು ಎರಡು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಟಿಯಲ್ಲಿ ಬಹುಬೇಡಿಕೆಯ ಖಳನಟರಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.