7 Hot News
A Karnataka Times Affiliate Kannada News Portal

ಜೋಡಿ ಹಕ್ಕಿ ಧಾರಾವಾಹಿಯ ನಟಿ ಮಧುಶ್ರೀಯವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಕ್ಷಣದ ಫೋಟೋಗಳು!!

advertisement

ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ಹಕ್ಕಿ (Jodi Hakki) ಧಾರಾವಾಹಿಯು ನೆನಪಿರಬಹುದು. ಈ ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ಮಿಂಚಿದ್ದ ಮಧುಶ್ರೀ ಎಲ್ಲರಿಗೂ ಕೂಡ ಚಿರಪರಿಚಿತರು. ಜೋಡಿ ಹಕ್ಕಿಯ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದ ಚೈತ್ರಾ ರಾವ್‌ (Chaitra Rao) ಗೆ ಸ್ನೇಹಿತೆಯಾಗಿ ಮಧುಶ್ರೀ ಅಯ್ಯರ್ (Madhushree Ayyar) ನಟಿಸಿದ್ದರು. ಹೀಗೆ ಧಾರಾವಾಹಿಯಿಂದಾಗಿ ಖ್ಯಾತಿ ಗಳಿಸಿಕೊಂಡಿರುವ ನಟಿ ಮಧುಶ್ರೀ ಇದೀಗ ಸುದ್ದಿಯಲ್ಲಿದ್ದಾರೆ.

advertisement

ಜೋಡಿ ಹಕ್ಕಿ ಸೀರಿಯಲ್ ನಟಿ ಮಧುಶ್ರೀಯವರು ಪತಿ ಯಶ್ ಅಯ್ಯರ್ (Yash Ayyar) ಹಾಗೂ ಮಗಳ ಜೊತೆಗೆ ಸಮಯ ಕಳೆದಿರುವ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ನಟಿ ಮಧುಶ್ರೀ ದಂಪತಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವುದು ತಿಳಿಯುತ್ತದೆ. ತಮ್ಮ ಮುದ್ದಿನ ಮಗಳು ಹಾಗೂ ಪತಿಯ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿರುವ ಈ ಫೋಟೋಗೆ ಲೈಕ್ಸ್ ಗಳು ಹರಿದು ಬಂದಿವೆ. ಅದಲ್ಲದೇ ನೆಟ್ಟಿಗರು ಈ ನಟಿಯ ಮುದ್ದಾದ ಕುಟುಂಬವನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.

advertisement

ನಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟದ್ದು ಅಚಾನಕ್ ಆಗಿಯಂತೆ. ಬಿಕಾಂ ಡಿಗ್ರಿ (Bcom Degree) ಪಡೆದುಕೊಂಡ ಬಳಿಕ ಶಿವಮೊಗ್ಗದಿಂದ ಬೆಂಗಳೂರಿಗೆ ಬ್ಯಾಂಕ್ ಎಕ್ಸಾಂ (Bank Exam) ಬರೆಯಲೆಂದು ಬಂದಿದ್ದರಂತೆ. ಆದರೆ ಈ ಸಮಯದಲ್ಲಿ ಮಧುಶ್ರೀಗೆ ಸಂಬಂಧಿಕರೊಬ್ಬರು ಧಾರಾವಾಹಿಯೊಂದಕ್ಕೆ ಆಡಿಷನ್ ನೀಡಲು ಹೇಳಿದ್ದಾರೆ. ಹೀಗಾಗಿ ಒಂದು ಟ್ರೈ ಮಾಡಿಬಿಡೋಣ ಎನ್ನುವ ಕಾರಣಕ್ಕೆ ಆಡಿಷನ್ ಕೊಟ್ಟರು.

advertisement

advertisement

advertisement

ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಇವರು ಜೋಡಿ ಹಕ್ಕಿ (Jodi Hakki), ರಾಧಾ ರಮಣ (Radha Ramana), ಅವಳು (Avalu) ಧಾರಾವಾಹಿಯಲ್ಲಿ ಸೈಡ್ ರೋಲ್ ನಲ್ಲಿ ನಟಿಸಿ ಸೈ ಎನಿಸಿಕೊಂಡರು. ಹೀಗೆ ಕನ್ನಡ ಕಿರುತೆರೆ ಲೋಕದಲ್ಲಿ ನೆಲೆ ಕಂಡುಕೊಂಡು ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾರೆ. ನಟಿ ಮಧುಶ್ರೀಯವರು 2018ರಲ್ಲಿ ಮಧುಶ್ರೀ ಅವರು ಯಶ್ ಅಯ್ಯರ್ (Yash Ayyar) ಅವರನ್ನು ಮದುವೆ ಮಾಡಿಕೊಂಡರು.

advertisement

advertisement

ಟಿಕ್ ಟಾಕ್ ಎಂದು ಯಶ್ ಹಾಗೂ ಮಧು ಆಕ್ಟಿವ್ ಆಗಿದ್ದರು. ನಟನೆ ಹಾಗೂ ಸಂಸಾರ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದ ಮಧುಶ್ರೀಯವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ವರ್ಷ ಕಳೆಯುತ್ತಿದ್ದಂತೆ ತಾಯಿಯಾಗುತ್ತಿರುವ ವಿಚಾರವನ್ನು ತಿಳಿಸಿದ್ದರು. ತದನಂತರದಲ್ಲಿ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುತ್ತಿದ್ದ ನಟಿ ಮಧುಶ್ರೀ ಸೀಮಂತದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು. 2020 ಜುಲೈ 3ರಂದು ಹೆಣ್ಣುಮಗುವಿಗೆ ಜನನ ನೀಡಿದ್ದ ಈ ವಿಚಾರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಹೀಗೆ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವ ನಟಿ ಮಧುಶ್ರೀಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎನ್ನುವುದೇ ಆಶಯ.

advertisement

Leave A Reply

Your email address will not be published.