Meghana Raj News : ಹಲವು ವರ್ಷಗಳ ನಂತರ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಿರುವಂತಹ ಮೇಘನ ರಾಜ್(Meghana Raj) ಅವರ ಸೈಕಾಲಜಿಕಲ್ ತ್ರಿಲ್ಲರ್ ಸಿನಿಮಾ ತತ್ಸಮ ತದ್ಭವ ಬಿಡುಗಡೆಯಾಗಿ ಜನರಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತದೆ. ಎಲ್ಲರಿಂದ ನಟಿ ಮೇಘನಾ ರಾಜ್ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಿನಿಮಾದ ಪ್ರಮೋಷನ್ ಕೆಲಸಗಳನ್ನು ಯಶಸ್ವಿಯಾಗಿ ಮಾಡುತ್ತಿರುವಂತಹ ಮೇಘನಾ ರಾಜ್ ಏಕಾಯಕಿ ಬೆಂಗಳೂರಿನ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಹೌದು ಗೆಳೆಯರೇ ಓರ್ವ ಸ್ಟಾರ್ ಸೆಲೆಬ್ರಿಟಿ ಆದರೂ ಕೂಡ ಸರಳವಾಗಿ ಯಾವುದೇ ಬಾಡಿಗಾರ್ಡ್ ಗಳಿಲ್ಲದೆ ಮೇಘನಾ ರಾಜ್(Meghana Raj News) ಜನಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದು, ಇದರ ಹಿಂದೆ ಮಹತ್ತರವಾದ ಉದ್ದೇಶ ಒಂದಿದೆ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಯಾವ ಕಾರಣದಿಂದ ಮೇಘನ ರಾಜ್ ಐಷಾರಾಮಿ ಕಾರುಗಳನ್ನು ತೊರೆದು ಮೆಟ್ರೋದಲ್ಲಿ ಸಂಚರಿಸಿದರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. (ಇದನ್ನು ಓದಿ)Health Tips : ತಜ್ಞರ ಪ್ರಕಾರ ಬೇಯಿಸಿದ ಜೋಳ ಅಥವಾ ಸುಟ್ಟ ಜೋಳ ಎರಡರಲ್ಲಿ ಯಾವುದನ್ನು ತಿಂದರೆ ಆರೋಗ್ಯಕ್ಕೆ ಪೌಷ್ಟಿಕಾಂಶ ದೊರಕುತ್ತೆ ಗೊತ್ತಾ?
2010ರಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಮೇಘನಾ ರಾಜ್ 2013ರಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ರಾಜಾಹುಲಿ(Rajahuli) ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಮಾಡಿ ಇಂದು ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕುರುಕ್ಷೇತ್ರ (Kurukshetra) ಸಿನಿಮಾದ ನಂತರ ಯಾವ ಸಿನಿಮಾದಲ್ಲಿಯೂ ನಟಿ ಮೇಘನಾ ಕಾಣಿಸಿಕೊಂಡಿರಲಿಲ್ಲ.

2020 ರ ಜೂನ್ 7 ರಂದು ಹೃ-ದಯಘಾತ ದಿಂದಾಗಿ ತಮ್ಮ ಪತಿಯನ್ನು ಕಳೆದುಕೊಂಡ ಮೇಘನಾ ರಾಜ್, ಅಗಲಿಕೆಯ ನೋವು ಹಾಗೂ ತಮ್ಮ ಮಗನ ಲಾಲನೆ ಪಾಲನೆಯಲ್ಲಿ ಬಿಜಿಯಾಗಿದ್ದರು. ಹೀಗಾಗಿ ಹಲವು ವರ್ಷಗಳ ನಂತರ ಮತ್ತೆ ಕಂಬ್ಯಾಕ್ ಮಾಡಿರುವ ಮೇಘನಾ ರಾಜ್ ಅವರು ತತ್ಸಮ ತದ್ಭವ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸಿದ್ದು, ಈ ಚಿತ್ರವು ಕನ್ನಡ ಮಲಯಾಳಂ ತೆಲುಗು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮೂಡಿ ಬಂದಿದೆ.
ಸಿನಿಮಾಗೆ ಪನ್ನಗಾಭರಣ ಹಣ ಹೂಡಿಕೆ ಮಾಡಿದರೆ, ವಾಸುಕಿ ವೈಭವ್ ಅವರ ಅದ್ಭುತ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿದೆ. ಚಿತ್ರದ ಪ್ರಮೋಷನ್ ಕೆಲಸವನ್ನು ಭರ್ಜರಿಯಾಗಿ ನೆರವೇರಿಸಿರುವ ಮೇಘನಾ ರಾಜ್(Meghana Raj) ಮತ್ತು ತಂಡ ನಿನ್ನೆ ಮೆಟ್ರೋದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಚಿತ್ರದ ಯಶಸ್ವಿ ಪ್ರಚಾರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪನ್ನಗ ಭರಣ, ಮೇಘನ ರಾಜ್(Meghana Raj) ಮತ್ತು ವಾಸಕಿ ವೈಭವ(Vasuki Vaibhav) ಪ್ರಯಾಣಿಸುತ್ತಿರುವ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.