ದಾಂಪತ್ಯ ಜೀವನವು ಚೆನ್ನಾಗಿರಬೇಕು ಎಂದರೆ ಸತಿಪತಿಯರಿಬ್ಬರೂ ಅನ್ಯೋನ್ಯವಾಗಿರಬೇಕು ಹಾಗೂ ಹೊಂದಿಕೊಂಡು ಹೋಗಬೇಕು. ಆದರೆ ಹೆಚ್ಚಿನವರಲ್ಲಿ ಹೊಂದಾಣಿಕೆಯೆನ್ನುವುದು ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಮದುವೆ (Marriage) ಯು ಬೇರ್ಪಡಿಸಲಾಗದ ಬಂಧವಾಗಿತ್ತು. ಎಷ್ಟೇ ಜಗಳವಾದರೂ, ಹಿರಿಯರ ಸಮ್ಮುಖದಲ್ಲಿ ಕಾರಣವೇನಿದ್ದರೂ ಬಗೆಹರಿಸುತ್ತಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಯಾರು ಕೂಡ ಯಾರ ಮಾತನ್ನು ಕೇಳಲು ಸಿದ್ಧವಿಲ್ಲ.
ಅದಲ್ಲದೇ ಮದುವೆಯ ನಂತರದಲ್ಲಿ ವಿವಾಹ ಸಂಬಂಧಗಳು ಹೆಚ್ಚಾಗುತ್ತಿದೆ. ಅ-ನೈತಿಕ ಸಂಬಂಧಗಳ ಕಡೆಗೆ ಹೆಚ್ಚಿನವರು ಮುಖ ಮಾಡುತ್ತಿದ್ದಾರೆ. ಇತ್ತೀಚೆಗಿನ ಕೆಲವು ವ್ಯವಸ್ಥೆಗಳು ವಿವಾಹ ಸಂಬಂಧದಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಕೆಲವು ಘಟನೆಯನ್ನು ಗಮನಿಸಿದಾಗ ಯಾರನ್ನು ಯಾರು ನಂಬಬೇಕು ಎನ್ನುವ ಪ್ರಶ್ನೆ ಯೊಂದು ಮೂಡುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತಹ ಘಟನೆಯೊಂದು ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
54 ವರ್ಷದ ವ್ಯಕ್ತಿಯ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿದ್ದು ಈ ಘಟನೆಯೂ ನಡೆದಿರುವುದು ಚಿಕ್ಕಬಳ್ಳಾಪುರದಲ್ಲಿ (Chikkaballapur). ಇದೇನಪ್ಪಾ ಹೀಗೆ ಎನ್ನುವ ಪ್ರಶ್ನೆಯೊಂದು ಮೂಡಬಹುದು. ಆದರೆ ಈ ಜೋಡಿಯ ಅಸಲಿ ಬೇರೇನೇ ಇದೆ. ಮಹಿಳೆಯೊಬ್ಬಳು ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಳು..
ಆದರೆ ಕೊನೆಗೆ ಈ ವಿವಾಹಿತ ಮಹಿಳೆ (Women) ಕೊನೆಗೆ ಪೂಜಾರಿ ಜೊತೆಯೇ ಪರಾರಿಯಾಗಿದ್ದಾಳೆ. ಗಂಗಮ್ಮ ದೇವಾಲಯ (Gangamma Temple)ದ ಪೂಜಾರಿಯೇ ಈ ಮುನಿರಾಜು (Muniraju). ಈತನು ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮ (Kadashigenahalli Grama) ದ ನಿವಾಸಿಯಾಗಿದ್ದು, ಈ ಲಲಿತಾ (Lalitha) ಎನ್ನುವ ಮಹಿಳೆಯೂ ಕೂಡ ಅದೇ ಗ್ರಾಮಕ್ಕೆ ಸೇರಿದವಳಾಗಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ (Chikkaballapur Police Station) ಲಲಿತಾ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಆದರೆ ಇದ್ದಕ್ಕಿದ ಹಾಗೆ ಬನ್ನಿಕುಪ್ಪೆ ಗ್ರಾಮದ ಬಳಿ ಅಮಾನಿಗೋಪಾಲಕೃಷ್ಣ ಕೆರೆ ದಡದಲ್ಲಿ ಬಟ್ಟೆ, ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಆದರೆ ಈ ಘಟನೆ ನಡೆದು ಒಂದು ತಿಂಗಳ ಬಳಿಕ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮತ್ತೊಂದು ಶಾಕ್ ಪೊಲೀಸರಿಗೆ ಕಾದಿತ್ತು.
ಲಲಿತಾ-ಮುನಿರಾಜು ಕೆರೆಗೆ ಬಿದ್ದು ಆ-ತ್ಮಹತ್ಯೆ ಮಾಡಿಕೊಂಡಿರಬಹುದಾ ಅಥವಾ ಬೇರೆ ಏನಾದರೂ ಆಗಿರಬಹುದು ಎನ್ನುವ ನಾನಾ ಅ-ನುಮಾನದ ನಡುವೆಯೇ ಈ ಪೊಲೀಸರು ಕೆರೆಯಲ್ಲಿ ಮೃ-ತದೇಹಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಆದರೆ ಕೊನೆಗೆ ಈ ಜೋಡಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಹಾಗೆ ಬಿಂಬಿಸಿದ ಈ ಜೋಡಿ ಪೊಲೀಸರ ಅತಿಥಿಯಾಗಿದ್ದಾರೆ