ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮೇಲೆ ಮುಗಿದೇ ಹೋಯಿತು, ನಟ ನಟಿಯರು ಮಾಡಿದರೂ ಕೂಡ ಸುದ್ದಿ. ಸುದ್ದಿಯ ಮೇಲೆ ಸುದ್ದಿಯಾಗುವ ನಟಿ ಆಗಾಗ ರೀಲ್ಸ್ ವಿಡಿಯೋಗಳು ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ದಾವಣಗೆರೆ (Davanagere) ಯ ಬೆಡಗಿ ನಟಿ ವಿದ್ಯಾ (Vidhya) ಕೂಡ ರೀಲ್ಸ್ ಮೂಲಕ ಸುದ್ದಿಯಾಗಿದ್ದಾರೆ.
ಕಿರುತೆರೆಯ ನಟಿ ಬಣ್ಣದ ಲೋಕದಲ್ಲಿ ಬ್ಯುಸಿಯಾಗುವುದರ ಜೊತೆಗೆ ರೀಲ್ಸ್ ನಲ್ಲಿಯು ಬ್ಯುಸಿ ಎಂದರೆ ತಪ್ಪಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ವಿದ್ಯಾರವರು ಆಗಾಗ ಹಾಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ನಟಿಯರಿಂದ ಸಾಮಾನ್ಯರವರದ್ದು ಕೂಡ ರೀಲ್ಸ್ ಟ್ರೆಂಡ್ (Reels Trend) ಜೋರಾಗಿದೆ.
ನಟಿ ವಿದ್ಯಾರವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಪ್ಪು ಬಣ್ಣದ ಸೀರೆಯುಟ್ಟು ಕೈಯಲ್ಲಿ ಛತ್ರಿ ಹಿಡಿದು, ಹೆಣ್ಣೆಂದರೆ ಗೌರವ ನೀಡೋನು ಮಾನವ ಎನ್ನುವ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಕಪ್ಪು ಬಣ್ಣದ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿರುವ ನಟಿಯ ಈ ರೀಲ್ಸ್ ಗೆ ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಅದಲ್ಲದೆ, ನಟಿಯ ವಿಡಿಯೋ ನೋಡಿ ಕೆಲವರು ಮೆಚ್ಚಿಕೊಂಡರೆ, ಇನ್ನು ಕೆಲವರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.
ದಾವಣಗೆರೆಯ ಹುಡುಗಿ ವಿದ್ಯಾ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ವಿದ್ಯಾ ಬಿ ಶರಣಪ್ಪ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಬದುಕು ಕಟ್ಟಿಕೊಂಡದ್ದು ಬಣ್ಣದ ಲೋಕದಲ್ಲಿ. ದಾವಣಗೆರೆಯಲ್ಲಿಯೇ ಕಂಪ್ಯೂಟರ್ ಸೈನ್ಸ್ (Computer Scince) ನಲ್ಲಿ ಇಂಜಿನಿಯರಿಂಗ್ ಮುಗಿಸಿದ ನಂತರ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ವೆಬ್ ಡಿಸೈನಿಂಗ್ (Web designing) ವಿಭಾಗದಲ್ಲಿ ಉದ್ಯೋಗ ಕೂಡ ದೊರಕಿತ್ತು. ಆದರೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ತಾನು ನಟಿಯಾಗಬೇಕೆನ್ನುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.
View this post on Instagram
ಹೌದು ಬಣ್ಣದ ಲೋಕದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಸಿರಿಕನ್ನಡ ವಾಹಿನಿಯಲ್ಲಿ ‘ಅಮರ ಮಧುರ ಪ್ರೇಮ’ (Amara Mdhura Prema) ಎಂಬ ಧಾರಾವಾಹಿಗೆ ನಾಯಕಿಯಾದ ವಿದ್ಯಾ ಪ್ರಸ್ತುತ ‘ಬ್ರಾಹ್ಮೀನ್ಸ್ ಕಫೆ’ (Brahmins Kefe) ಎಂಬ ಮತ್ತೊಂದು ಧಾರಾವಾಹಿಯಲ್ಲಿ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಬ್ಯುಸಿಯಾಗಿದ್ದು, ನಟಿಗೆ ಇನ್ನಷ್ಟು ಅವಕಾಶಗಳು ಲಭಿಸಲಿ.