7 Hot News
A Karnataka Times Affiliate Kannada News Portal

ದನ ಕರುಗಳಿಗೆ ಪೂಜೆ ಮಾಡಿ ಬಹಳ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ ಡಿ ಬಾಸ್! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ನಿನ್ನೆಯ ವಿಶೇಷ ಸಂಕ್ರಾಂತಿ ಹಬ್ಬವನ್ನು (Sankranthi Festival) ದೇಶದಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಲಾಗಿದೆ. ಸ್ಟಾರ್ಸ್ ಸೆಲೆಬ್ರಿಟಿಗಳು ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳನ್ನು ಬದಿಗೆ ಸೇರಿಸಿ ಮನೆಗಳಲ್ಲಿ ಬಹಳ ಲವಲವಿಕೆಯಿಂದ ತಮ್ಮನ್ನು ತಾವು ತೊಡಗಿಕೊಂಡು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಆ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಿದ್ದಾರೆ.

advertisement

ಹೀಗಿರುವಾಗ ದಾಸ ದರ್ಶನ್ ಅವರಿಗೆ ಇದು ವಿಶೇಷ ಹಬ್ಬ ಎಂದರೆ ತಪ್ಪಾಗಲಾರದು. ಒಂದೆಡೆ ದರ್ಶನವರಿಗೆ ಕಾಟೇರ ಸಿನಿಮಾದ (Kateera cinema) ಸಕ್ಸಸ್ ಸಂತಸ ಮತ್ತೊಂದೆಡೆ ಮೂಕ-ಪ್ರಾಣಿಗಳಿಗೆ ಸೀಮಿತವಾಗಿರುವಂತಹ ವಿಶೇಷ ಹಬ್ಬ. ಪ್ರಾಣಿ ಸಂಕುಲವನ್ನು ಅತಿ ಹೆಚ್ಚಾಗಿ ಪ್ರೀತಿಸುವಂತಹ ದಾಸ ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕುತ್ತಾ ಅದರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

advertisement

ಪ್ರತಿ ವರ್ಷದ ಆರಂಭದಲ್ಲಿ ಬರುವಂತಹ ಈ ವಿಶೇಷ ಸಂಕ್ರಾಂತಿ ಹಬ್ಬವನ್ನು ದರ್ಶನ್ ಮತ್ತು ಕುಟುಂಬಸ್ತರು ಪ್ರತಿಬಾರಿಯಂತೆ ಈ ಬಾರಿಯೂ ತಮ್ಮ ಫಾರ್ಮ್ ಹೌಸ್ ನಲ್ಲಿ ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ದನ ಕರುಗಳಿಗೆ ಕಿಚ್ಚಯಿಸುವಂತಹ ವಾಡಿಕೆ ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗಿದೆ. ಅದರಂತೆ ದರ್ಶನ್ (Darshan) ಕೂಡ ಈ ವಿಶೇಷ ಹಬ್ಬದಂದು ಸ್ವತಃ ಎತ್ತುಗಳ ಮೈ ತೊಳೆದು ಅಲಂಕಾರ ಮಾಡಿ ಕಿಚ್ಚು ಹಾಯಿಸಲು ಸಜ್ಜಾಗಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಟೈಟಲ್ ಖಾತೆಯಲ್ಲಿ ಹಂಚಿಕೊಂಡು ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ.

advertisement

advertisement

advertisement

ಹಬ್ಬಕ್ಕೆಂದು ದರ್ಶನ ಅವರ ಮನೆ ಮಂದಿಯವರೆಲ್ಲರೂ ಸಾಂಪ್ರದಾಯಿಕ ಉಡುಗೆ ಧರಿಸಿ ಪ್ರಾಣಿಗಳೊಂದಿಗೆ ಅವುಗಳ ಮೈಸವರುತ್ತ ಪ್ರೀತಿ ತೋರಿಸುತ್ತಾರೆ.‌ ಅದರಂತೆ ದರ್ಶನ್ (Darshan) ಕೂಡ ಬಹು ವರ್ಷಗಳಿಂದ ಸಾಕಿರುವ ಎತ್ತುಗಳನ್ನು ಹಿಡಿದು ಫೋಟೋ ಕ್ಲಿಕ್ಕಿಸಿ ಕೊಂಡು “ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ ನವ ಚೈತನ್ಯ ನೆಮ್ಮದಿಯ ಬಾಳನ್ನು ಕರುಣಿಸಲಿ.

advertisement

advertisement

ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ನಿಮ್ಮದಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ” ಎಂಬ ಕ್ಯಾಪ್ಷನ್ ಬರೆಯುವ ಮೂಲಕ ಎಲ್ಲರಿಗೂ ಶುಭ ಹಾರೈಸಿದರು. ಸದ್ಯ ಈ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲಾಗುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿದೆ.

advertisement

Leave A Reply

Your email address will not be published.