ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಜೊತೆ ದೀಪಾವಳಿ ಹಬ್ಬ ಆಚರಣೆಯ ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement
ಕಳೆದ ಮೂರು ದಿನಗಳಿಂದ ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು ಎಲ್ಲರೂ ಮನೆ ತುಂಬಾ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ ಬೆಳಕಿನ ಹಬ್ಬ ದೀಪಾವಳಿಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಿದರು. ಅದರಂತೆ ನಮ್ಮ ಕನ್ನಡ ಸಿನಿಮಾ ರಂಗದ ತಾರೆಯರು ಕೂಡ ತಮ್ಮ ತಮ್ಮ ಮನೆಯವರೊಂದಿಗೆ ಸೇರಿ ಬಹಳ ಅದ್ದೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.
advertisement
ಹೌದು ಗೆಳೆಯರೇ ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ಕೂಡ ಹಬ್ಬ ಹರಿದಿನಗಳನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುವ ನಮ್ಮ ಗಂಧದಗುಡಿಯಲ್ಲಿ ಹಿರಿಯ ನಟರಿಂದ ಹಿಡಿದು ಜೂನಿಯರ್ ಆರ್ಟಿಸ್ಟ್ (jnr artist) ಗಳವರೆಗೆ ಅರ್ಥಪೂರ್ಣವಾಗಿ ಆಚರಿಸಿ ಮನೆಯವರೊಟ್ಟಿಗೆ ಸಂಭ್ರಮಿಸುವಂತಹ ಹಬ್ಬದ ಕ್ಷಣಗಳನ್ನು ಫೋಟೋ ತೆಗೆದು ಅದನ್ನು ತಮ್ಮ ಸೋಶಿಯಲ್ ಮೀಡಿಯಾಗಳಾದ instagram ಹಾಗೂ facebook ನಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ.
advertisement
ಅದರಂತೆ ಮಂಡ್ಯದ ಸೊಸೆ ಅವಿವ ಹಾಗೂ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮೊದಲ ದೀಪಾವಳಿ ಹಬ್ಬ ಇದಾಗಿದ್ದು ಪತಿ-ಪತ್ನಿಯರಿಬ್ಬರೂ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಒಟ್ಟಿಗೆ ಸೇರಿ ಪೂಜಾ ನೆರವೇರಿಸಿ ಫೋಟೋ ತೆಗೆದುಕೊಂಡಿದ್ದಾರೆ. ಅಲ್ಲದೆ ಈ ಕೆಲ ಫೋಟೋಗಳನ್ನು ಅಭಿಷೇಕ್ ಅಂಬರೀಶ್ ಅವರ ಪತ್ನಿ ಅವಿವಾ ಬಿಡಪ್ಪ ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಹಂಚಿಕೊಂಡು ದೀಪಾವಳಿ ಸಂಭ್ರಮದ ಖುಷಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
advertisement
advertisement

advertisement
ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು ಪ್ರೀತಿ ಹಾಗೂ ಬೆಳಕು ತುಂಬಿರಲಿ ಎಂಬ ಸಿಹಿಯಾದ ಕ್ಯಾಪ್ಷನ್ ಬರೆದು ಮಂಡ್ಯದ ಸೊಸೆ ಅವಿವ ಬಿಡಪ್ಪ(Aviva Bidapa) ಅವರು ತಮ್ಮ ಪತಿ ಜೊತೆಗೆ ನಿಂತು ತೆಗಿಸಿಕೊಂಡಿರುವಂತಹ ಕೆಲ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿ ನೆಟ್ಟಿಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಕೋರಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತಿದ್ದು ನವಜೋಡಿಗಳನ್ನು ಮತ್ತೊಮ್ಮೆ ಒಂದೇ ಫ್ರೇಮ್ ನಲ್ಲಿ ಕಂಡಂತಹ ಅಭಿಮಾನಿಗಳು ಸಂತಸಗೊಂಡಿದ್ದಾರೆ.
advertisement

advertisement
ಇನ್ನೂ ಮದುವೆಯಾದ ಬಳಿಕ ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್(Bad manners) ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ದೀಪಾವಳಿ ಹಬ್ಬದ ಅಂಗವಾಗಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು ಸಿನಿಮಾ ಇದೇ ತಿಂಗಳು 24 ನೇ ತಾರೀಕು 2023 ರಂದು ತೆರೆ ಕಾಣಲಿರುವ ಮಾಹಿತಿಯನ್ನು ಅಧಿಕೃತವಾಗಿ ಹೊರಹಾಕಿದ್ದಾರೆ.
advertisement