Health Tips : ಎಲ್ಲೆಡೆ ಕೊಂಚ ತಣ್ಣಗಿನ ವಾತಾವರಣ ಸೃಷ್ಟಿಯಾಗುತ್ತಾ ಇದ್ದಹಾಗೆ ಹೊಟ್ಟೆ ಏನನ್ನಾದರೂ ಸವಿಯಬೇಕೆಂಬ ಸೂಚನೆಯನ್ನು ನೀಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಜನರು ಸುಟ್ಟ ಜೋಳವನ್ನು ಅಥವಾ ಬೇಯಿಸಿದ ಜೋಳವನ್ನು ತಿನ್ನುವ ಮೊರೆ ಹೋಗುತ್ತಿರುವುದನ್ನು ಗಮನಿಸಿದ ಪೌಷ್ಟಿಕ ತಜ್ಞರು ಈ ಕುರಿತು ಸಂದರ್ಶನ ಒಂದರಲ್ಲಿ ಯಾವ ಜೋಳ ತಿಂದರೆ ಒಳ್ಳೆಯದು ಎಂಬ ವಿವರವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.
ಹೌದು ಗೆಳೆಯರೆ ಕಾರ್ನ ಅಥವಾ ಜೋಳದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಕಬ್ಬಿಣಾಂಶ, ಪೊಟ್ಯಾಶಿಯಂ, ಫೈಬರ್, ಸತು, ಮೆಗ್ನೇಷಿಯಮ್, ಮ್ಯಾಂಗನೀಸ್ ಹೀಗೆ ಮುಂತಾದ ಪೌಷ್ಟಿಕಾಂಶಗಳು ಏರಳಿತವಾಗಿರುವ ಕಾರಣದಿಂದ ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ(digestion) ಸುಗಮಗೊಳ್ಳುತ್ತದೆ. ಮಲಬದ್ಧತೆಯಿಂದ ಸಮಸ್ಯೆಗಳಿಗೆ ಎಂದಿಗೂ ನಿಮ್ಮ ದೇಹ ತುತ್ತಾಗುವುದಿಲ್ಲ ಹಾಗೂ ಮಧುಮೇಹ(diabetes) ಸಮಸ್ಯೆಯಿಂದ ಬಳಲುತ್ತಿರುವವರು ಜೋಳ ತಿನ್ನುವುದರಿಂದ ಸಕ್ಕರೆ ಮಟ್ಟವು ನಿಯಂತ್ರದಲ್ಲಿರುತ್ತದೆ.
ಕಣ್ಣಿಗೆ ಸಂಬಂಧಪಟ್ಟಂತಹ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ದರೆ ಜೋಳ ಹೇಳಿ ಮಾಡಿಸಿದಂತಹ ಔಷಧಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೋಗಲಾಡಿಸಲು ನಿಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಜೋಳ ಬೆಸ್ಟ್ ಆಯ್ಕೆ. ಅಷ್ಟೇ ಅಲ್ಲದೆ ಜೋಳದಲ್ಲಿ(Corn) ಆಂಟಿ ಆಕ್ಸಿಡೆಂಟ್ ಆಂಟಿ ಏಜಿಂಗ್ ಗುಣಗಳು ಹೇರಳವಾಗಿರುವುದರಿಂದ ಇದು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತದೆ.
ಕ್ಯಾ-ನ್ಸ-ರ್ ನಂತಹ ಕಾಯಿಲೆಗಳನ್ನು ತಡೆಯಬಲ್ಲ ಅಂಶಗಳು ಜೋಳದಲ್ಲಿರುವ ಮಾಹಿತಿಯು ತಿಳಿದು ಬಂದಿದೆ. ಮಕ್ಕಳು ಬಹಳ ಇಷ್ಟಪಟ್ಟು ಸೇವಿಸುವಂತಹ ಈ ಜೋಳವು ಮಕ್ಕಳ ಬೆಳವಣಿಗೆಗೆ ಸಹಾಯಕಾರಿ, ಹೀಗೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿರುವ ಜೋಳವನ್ನು ಬೇಯಿಸಿ ತಿನ್ನಬೇಕೋ ಅಥವಾ ಸುಟ್ಟಿ ತಿನ್ನಬೇಕೋ ಎಂಬುದು ಹಲವರಿಗೆ ಇರುವಂತಹ ಅನುಮಾನ. (Health Tips)ಪೌಷ್ಟಿಕ ತಜ್ಞರ ಪ್ರಕಾರ ಜೋಳವನ್ನು ಸದಾ ಬೇಯಿಸಿ ತಿನ್ನುವುದೇ ಒಳಿತು.(ಇದನ್ನು ಓದಿ)Poco 5G : ಫೋನಿನ ಹೊಸ ವರ್ಷನ್ ಬರೋಬರಿ 2 ಸಾವಿರಕ್ಕಿಂತ ಕಡಿಮೆ ಬೆಲೆಗೆ ಮಾರಾಟ, ಬಂಪರ್ ಆಫರ್ ಇರುವ ಈ ಮೊಬೈಲ್ ಖರೀದಿಸಲು ಮುಗಿಬಿದ್ದ ಜನತೆ!
ಹೌದು ಗೆಳೆಯರೇ ಜೋಳವು ನೀರಿನಲ್ಲಿ ಬೆಂದ ನಂತರ ತಿನ್ನುವುದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮವನ್ನು ದೇಹದ ಮೇಲೆ ಉಂಟುಮಾಡುವುದಿಲ್ಲ. ಮೊದಲಿಗೆ ಜೋಳವನ್ನು ಸುಟ್ಟಿ ಏನಾದರೂ ಸೇವಿಸಿದರೆ ಅದರ ಮೇಲ್ಭಾಗದಲ್ಲಿರುವಂತಹ ಕಪ್ಪು ಕೂಡ ನಮ್ಮ ದೇಹದೊಳಗೆ ಒಕ್ಕುತ್ತದೆ. ಪೌಷ್ಟಿಕ ತಜ್ಞರ (Nutritionist) ಪ್ರಕಾರ ಜೋಳ ಸುಟ್ಟ(Roasted corn) ನಂತರ ತಿರುಗುವಂತಹ ಕಪ್ಪು ಬಣ್ಣದಲ್ಲಿ ಅತಿಯಾದ ಕಾರ್ಸಿನೋಜನ್ ಇರುತ್ತದೆ.

ಇದು ದೇಹಕ್ಕೆ ಅಡ್ಡ ಪರಿಣಾಮವನ್ನು ಬೀರುವುದರ ಜೊತೆಗೆ ಅರ್ಧಂಬರ್ಧ ಬೆಂದಂತಹ ಜೋಳ ತಿಂದರೆ ಹೊಟ್ಟೆ ನೋವು ಹೀಗೆ ಮುಂತಾದ ಸಮಸ್ಯೆಗೂ ಕೂಡ ದಾರಿ ಮಾಡಿಕೊಡುತ್ತದೆ. ಸದಾ ಜೋಳವನ್ನು ಬೇಯಿಸಿ, ಅದಕ್ಕೆ ಸ್ವಲ್ಪ ನಿಂಬೆರಸ ಹಾಗೂ ಉಪ್ಪು ಕಾರವನ್ನು ಸೇರಿಸಿ ಸವಿದರೆ ಬಾಯಿಗೂ ರುಚಿ ಹಾಗೂ ದೇಹಕ್ಕೂ ರುಚಿ.