ಪ್ರೀತಿ ಸಹಾನುಭೂತಿ, ಪರಸ್ಪರರ ಕಂಪನಿ, ಸಂತೋಷ, ನಂಬಿಕೆ ಹೀಗೆ ಎಲ್ಲಾ ಭಾವನೆಗಳನ್ನು ಒಟ್ಟುಗೂಡಿಸುವಂತಹ ಪದವೆ ಸ್ನೇಹಾ.(Friendship) ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಪ್ರೀತಿ, ಚಿಗುರೊಡಗಿರುತ್ತದೆ ಎಂಬ ಮಾತಿದೆ ಆದರೆ ಪ್ರತಿಯೊಬ್ಬರ ಜೀವನದಲ್ಲಿಯೂ ಚಿರಕಾಲ ಉಳಿಯುವಂತಹ ಸ್ನೇಹ ಇದ್ದೇ ಇರುತ್ತದೆ. ಇಂತಹ ಸ್ನೇಹಿತರೆನಾದರೂ ಒಟ್ಟಿಗೆ ಸೇರಿ ಬಿಟ್ಟರೆ ಸಾಕು ಅಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು ಗೆಳೆಯರೇ ಪ್ರತಿನಿತ್ಯ ಭೇಟಿ ಮಾಡದೆ ಹೋದರು ಅಪರೂಪಕ್ಕೆ ಒಂದಿನ ಭೇಟಿ ಮಾಡಿದರು ಆ ಸಮಯವನ್ನು ಬಹಳ ಸಂತೋಷಕರವಾಗಿ ಕಳೆಯುವ ಮೂಲಕ ತಮ್ಮ ನೆನಪಿನ ಬುತ್ತುಗೆ ಮತ್ತೊಂದು ಮೆಮೊರಿಸ್ಗಳನ್ನು (memories) ಸೇರ್ಪಡಿಸುತ್ತಾರೆ. ಹೀಗೆ ನಾಲ್ಕು ಜನ ಯುವತಿಯರು ಒಟ್ಟಾಗಿ ಸೇರಿ ಬಾವಿಯೊಳಗೆ ಬಿದ್ದು ಸ್ವಿಮ್ಮಿಂಗ್ ಮಾಡುವ ಮೂಲಕ ಸ್ವೀಟ್ ಮೆಮೊರಿಸ್(sweet memories) ಒಂದನ್ನು ಕ್ರಿಯೇಟ್ ಮಾಡಿದ್ದಾರೆ.
ಹೌದು ಗೆಳೆಯರೇ ಹಳ್ಳಿಯಲ್ಲಿ ಮಾಡಲಾದ ವಿಡಿಯೋ ಶೂಟ್ ಇದಾಗಿದ್ದು, ಇದರಲ್ಲಿ ನಾಲ್ಕು ಜನ ಹುಡುಗಿಯರು ಸ್ವಿಮಿಂಗ್ ಕಲಿಯುವ ಸಲುವಾಗಿ ಬಾವಿಯೊಳಗೆ ಹಾರಿದ್ದಾರೆ. ಒಬ್ಬಾಕಿಯಂತೂ ಮೂಗು ಹಿಡಿದುಕೊಂಡು ಬಾವಿಯೊಳಗೆ ಹೆಗರಿದರೆ ಇನ್ನು ಮೂವರು ಈಜಿನಲ್ಲಿ ಪ್ರವೀಣರಂತೆ ಹಾರಿ ಸ್ವಿಮ್ಮಿಂಗ್ ಮಾಡ ತೊಡಗಿದ್ದಾರೆ. ಈ ವಿಡಿಯೋವನ್ನು ಅನಿತಾ ಕುಮಾರಿ(Anita kunari) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಇದನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ” ಎಂಬ ಕ್ಯಾಪ್ಶನ್(caption) ಬರೆದು ವಿಡಿಯೋ ಶೇರ್ ಮಾಡಿದ್ದಾರೆ.
View this post on Instagram
ಈ ವಿಡಿಯೋ ಕಂಡಂತಹ ನೆಟ್ಟಿಗರು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರೆಸ ತೊಡಗಿದ್ದು. ಸ್ನೇಹಿತರೆಲ್ಲರೂ ಒಟ್ಟಿಗೆ ಸೇರಿ ಈ ರೀತಿಯಾದಂತಹ ಚಟುವಟಿಕೆಗಳಲ್ಲಿ ಭಾಗಿಯಾದರೆ ಬಹಳ ಅದ್ಭುತವಾಗಿರುತ್ತದೆ ಎನ್ನುವಂತಹ ರೀತಿಯಲ್ಲಿ ಕಮೆಂಟ್ ಮಾಡ ತೊಡಗಿದ್ದಾರೆ. ಇನ್ನು ಹಲವರು ಹುಡುಗಿಯರ ಸ್ವಿಮಿಂಗ್ (swimming) ಚಟುವಟಿಕೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.