7 Hot News
A Karnataka Times Affiliate Kannada News Portal

ಯುವತಿಯ ಅದೃಷ್ಟವನ್ನೇ ಬದಲಾಯಿಸಿದ ತೆಂಗಿನಕಾಯಿ ಚಿಪ್ಪು! ತೆಂಗಿನ ಕಾಯಿ ಚಿಪ್ಪಿನಿಂದ ಕೋಟಿ ಕೋಟಿ ಹಣ ಮಾಡಿದ್ದು ಹೇಗೆ ನೋಡಿ!!

advertisement

ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು, ಹೆಚ್ಚಿನ ಯಶಸ್ಸು ಹಾಗೂ ಹಣ ಸಂಪಾದನೆ ಮಾಡಬೇಕೆಂಬ ಉದ್ದೇಶವಿದ್ದರೆ, ಅತಿ ಹೆಚ್ಚಿನ ಸ್ಪರ್ಧೆ ಇರದಂತಹ ಜಾಗಕ್ಕೆ ಇಳಿಯಬೇಕು. ನಮ್ಮ ಸ್ವಂತ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಂಡರೆ ನೋವು ಯಾವ ದಾರಿಯೆಡೆಗೆ ನಡೆಯಬೇಕೆಂಬ ಸುಳಿವು ನಮಗೆ ದೊರಕುತ್ತದೆ‌. ಅದರಂತೆ ಮರಿಯಾ ಕುರಿಯಾಕೋಸ್ ಎಂಬಾಕೆಯು ಕೋಟ್ಯಾಂತರ ಜನರು ಉಪಯೋಗಿಸಿ ಬಿಸಾಕುವಂತಹ ವಸ್ತುವನ್ನು ಉಪಯೋಗಿಸಿಕೊಂಡು ಇದು ಕೋಟಿ ಕೋಟಿ ಹಣ ಸಂಪಾದನೆ ಮಾಡುವಂತಹ ಉದ್ಯೋಗಕ್ಕೆ ಇಳಿದಿದ್ದಾಳೆ.

advertisement

ಹೌದು ಸ್ನೇಹಿತರೆ, ನಾವು ಪ್ರತಿದಿನ ಉಪಯೋಗಿಸಿ ತ್ಯಾಜ್ಯವೆಂದು ಬಿಸಾಡುವಂತಹ ವಸ್ತುಗಳಿಗೆ ಮರು ಜೀವ ನೀಡುತ್ತ ಅದರಿಂದ ಸಾಕಷ್ಟು ಜನರು ತಮ್ಮ ಆದಾಯದ ಮೂಲವನ್ನು ಕಟ್ಟಿಕೊಂಡಿದ್ದಾರೆ. ಅದರಂತೆ ಮರಿಯಾ ಕೂಡ ಭಾರತದ ಬಹುತೇಕ ಮಂದಿ ಉಪಯೋಗಿಸುವಂತಹ ತೆಂಗಿನಕಾಯಿಯ ಚಿಪ್ಪನ್ನು ಬಳಸಿಕೊಂಡು ಇಂದು ಅತ್ಯಂತ ಯಶಸ್ವಿ ಉದ್ಯಮಿಯಾಗಿ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

advertisement

ಮೂಲತಃ ಕೇರಳದವರಾದ ಮರಿಯಾ ಕೊರಿಯಾ ಕೋಸ್ ಅವರಿಗೆ ತಮ್ಮ ರಾಜ್ಯದಲ್ಲಿ ಹೆಚ್ಚು ಬಳಕೆಯಾಗುವಂತಹ ವಸ್ತು ಅಂದರೆ ತೆಂಗಿನಕಾಯಿಯ ಚಿಪ್ಪುಗಳನ್ನು ಉಪಯೋಗಿಸಿಕೊಂಡು ಏನನ್ನಾದರೂ ಉದ್ಯಮ ಶುರು ಮಾಡಬೇಕೆಂಬ ಐಡಿಯಾ ಬರುತ್ತದೆ. ಹೀಗಾಗಿ ಆ ವಿಚಾರದ ಕುರಿತಾಗಿ ಹೆಚ್ಚಿನ ಅಧ್ಯಯನವನ್ನು ನಡೆಸಿ ಆನಂತರ ತನ್ನ ಬಿಸಿನೆಸ್ ಅನ್ನು ಜಾರಿಗೆ ತರುತ್ತಾರೆ.

advertisement

ಮೂಲತಹ ಕೇರಳದ ತ್ರಿಶೂರ್ ನಿವಾಸಿಯಾಗಿರುವಂತಹ ಮರಿಯ ಕೊರಿಯ ಕೋಸ್ ಅವರು ಈ ಹಿಂದೆ ಐಟಿ ಉದ್ಯಮಿಯಾಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ನೀಡುವಂತಹ ಸಾವಿರಾರು ರೂಪಾಯಿ ಹಣಕ್ಕೋಸ್ಕರ ಬೆಳಗ್ಗೆ 9 ಗಂಟೆಯಿಂದ ಸಂಜೆ ಆರರವರೆಗೂ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಮರಿಯಾರವರಿಗೆ ಬಹಳ ತ್ರಾಸದಾಯಕವೆನಿಸುತ್ತಿತ್ತು.

advertisement

advertisement

ಹೀಗಾಗಿ ಸ್ವಂತ ಉದ್ಯಮ ಪ್ರಾರಂಭಿಸಲು ನಿರ್ಧಾರ ಮಾಡಿ 2017ರಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಆನಂತರ ತಮ್ಮ ಕನಸಿನ ಬೆನ್ನನ್ನು ಹತ್ತಿ ಹೋದಂತಹ ಮರಿಯಾ ಸಂಶೋಧನೆ ನಡೆಸುತ್ತಿದ್ದ ಸಮಯದಲ್ಲಿ ಕೇರಳದಲ್ಲಿ ಆಹಾರ ಹಾಗೂ ಎಣ್ಣೆಗಾಗಿ ಅತಿ ಹೆಚ್ಚು ಉಪಯೋಗವಾಗುವಂತಹ ತೆಂಗಿನ ಕಾಯಿಯ ಮೇಲೆ ಗಮನವನ್ನು ಹರಿಸುತ್ತಾರೆ.

advertisement

ತೆಂಗಿನ ಒಳಗೆ ಇರುವಂತಹ ಬಿಳಿಯ ಅಂಶವನ್ನು ಹೊರತೆಗೆದು ಚಿಪ್ಪನ್ನು ಸಾಮಾನ್ಯವಾಗಿ ಎಲ್ಲರೂ ಎಸೆದು ಬಿಡುತ್ತಾರೆ ತ್ಯಾಜ್ಯವೆಂದು ಪ್ರತಿಯೊಬ್ಬರ ಮನೆಯಲ್ಲೂ ಬಿಸಾಡುವಂತಹ ತೆಂಗಿನ ಚಿಪ್ಪನ್ನು ಉಪಯೋಗಿಸಿಕೊಂಡು ಅಲಂಕಾರಿಕ ವಸ್ತುವನ್ನು ಮಾಡಲು ಮುಂದಾಗುತ್ತಾರೆ. ಸತತ ನಾಲ್ಕು ವರ್ಷಗಳ ಕಾಲ ತಮ್ಮ ಸುಧೀರ್ಘ ಶ್ರದ್ದೆ ಹಾಗೂ ಪ್ರಯತ್ನವನ್ನು ಮರಿಯಾ ಮಾಡಿದರು. ಅನಂತರ ತಾವು ಮಾಡಿದಂತಹ ಅಮೂಲ್ಯವಾದ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ.

advertisement

advertisement

ಇಂತಹ ನೈಸರ್ಗಿಕ ಅಲಂಕಾರಿಕ ವಸ್ತುಗಳಿಂದ ಪ್ರವಾಸಿಗರು ಹೆಚ್ಚು ಆಗರ್ಷಿತರಾಗಿ ಅದನ್ನು ಖರೀದಿಸಲು ಪ್ರಾರಂಭ ಮಾಡಿದ್ದು, ಸದ್ಯ ಮರಿಯಾ ಕೊರಿಯಕೋಸ್ ಅವರು ವರ್ಷಕ್ಕೆ ಬರೋಬ್ಬರಿ ಒಂದರಿಂದ ಒಂದೂವರೆ ಕೋಟಿ ಹಣವನ್ನು ಮನೆಯಲ್ಲೇ ಕೂತು ಸಂಪಾದನೆ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೆ 40 ಜನ ಸ್ಥಳಿಯ ಕುಶಲ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿದ್ದಾರೆ.

advertisement

Leave A Reply

Your email address will not be published.