7 Hot News
A Karnataka Times Affiliate Kannada News Portal

ಲಕ್ಷಣ ಸೀರಿಯಲ್ ನಟ ಜಗನ್ನಾಥ್ ಚಂದ್ರಶೇಖರ್ ದಂಪತಿಗಳು! ಸುಂದರವಾದ ಜೋಡಿ ಹೇಗಿದೆ ನೋಡಿ!!

advertisement

ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಮನೋಜ್ಞ ಹಾಗೂ ಫಿಟ್ಟಾದ ಮೈಮಾಟದಿಂದ ಹಲವು ವರ್ಷಗಳಿಂದ ಯಶಸ್ವಿ ಸೀರಿಯಲ್ ಗಳನ್ನು ನೀಡುತ್ತಾ ಕಿರುತೆರೆ ಪ್ರಿಯರ ಫೇವರೆಟ್ ನಟರಾಗಿರುವಂತಹ ಜಗನ್ ಅಲಿಯಾಸ್ ಜಗನ್ನಾಥ್ ಚಂದ್ರಶೇಖರ್(Jagannath Chandrashekar) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ. ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಅಭಿನಯಿಸುತ್ತಾ, ಪುನರ್ ವಿವಾಹ, ಗಾಂಧಾರಿ, ಸೀತಾ ವಲ್ಲಭದಂತಹ ಧಾರವಾಹಿಗಳ ಮೂಲಕ ಸದ್ದು ಮಾಡಿದ್ದ ಈ ನಟ ಕಳೆದ ಕೆಲವು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು.

advertisement

ಜಗನ್ನಾಥ್ ಚಂದ್ರಶೇಖರ್ ದಂಪತಿಗಳ ಸುಂದರ ಫೋಟೋಗಳು ನೆಟ್ಟಿಗರ ಮನಸ್ಸನ್ನು ಸೆಳೆದಿದೆ. ಹೌದು ಸ್ನೇಹಿತರೆ 2019ರಲ್ಲಿ ತಮ್ಮ ಬಹುಕಾಲದ ಗೆಳತಿ ರಕ್ಷಿತಾ ಮುನಿಯಪ್ಪ ಅವರೊಂದಿಗೆ ಜಗನ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಆನಂತರ ಅದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಪ್ರೀತಿ ಜೀವನವನ್ನು ಅಧಿಕೃತಗೊಳಿಸಿಕೊಂಡರು. ಶೂಟಿಂಗ್ ಸಮಯದಲ್ಲಿ ಬಿಡುವು ಸಿಕ್ಕಾಗ ತಮ್ಮ ಮಡದಿಯೊಂದಿಗೆ ವಿಶೇಷವಾದ ಸ್ಥಳಗಳಿಗೆ ಭೇಟಿ ನೀಡುತ್ತಾ, ಸಮಯ ಕಳೆಯುವಂತಹ ಜಗನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (instagram account) ಹೆಂಡತಿಯ ಸಾಕಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದು.

advertisement

advertisement

ಸದ್ಯ ಈ ಜೋಡಿಗಳ ಮುದ್ದಾದ ಫೋಟೋಸ್ ನೆಟ್ಟಿಗರ ಮನಸನ್ನು ಗೆದ್ದಿದೆ.ಇನ್ನು ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದ ನಿರೂಪಕನಾಗಿ ತಮ್ಮ ಸಿನಿ ಬದುಕಿನ ಜರ್ನಿಯನ್ನು ಪ್ರಾರಂಭಿಸಿದಂತಹ ಜಗನ್ನಾಥ್ ಚಂದ್ರಶೇಖರ್(Jagannath Chandrashekar) ಅವರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುನರ್ ವಿವಾಹ ಧಾರವಾಹಿಯ ಮುಖ್ಯ ಪಾತ್ರದಲ್ಲಿ ನಟಿಸುವಂತಹ ಅವಕಾಶ ಸಿಗುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಈ ನಟ ಹೆಚ್ಚಿನ ಯಶಸ್ಸು ಬೇಡಿಕೆ ಹಾಗು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು.

advertisement

advertisement

ಅಷ್ಟೇ ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿ ವೀಕ್ಷಕರ ಮನಸ್ಸನ್ನು ಗೆದ್ದರು. ಇದರ ಜೊತೆ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದ ರಕ್ಷಾ ಬಂಧನ (raksha bandhan serial) ಧಾರಾವಾಹಿಯ ನಿರ್ಮಾಪಕನಾಗಿ ಕೆಲಸ ಮಾಡಿದ ಜಗನ್ ಟಿ ಆರ್ ಪಿ ಕಡಿಮೆ ಬಂದ ಕಾರಣದಿಂದ ಸೋಲನ್ನು ಅನುಭವಿಸಿದರು. ಅನಂತರಾ ನಿರ್ಮಾಣದ ಹಾಗೂ ಅದರ ಹಿಂದಿರುವ ಲೆಕ್ಕಾಚಾರದ ಕುರಿತದ ಎಲ್ಲಾ ವಿಚಾರಗಳನ್ನು ಅರಿತು ತಾವೇ ಅಭಿನಯಿಸುತ್ತಿದ್ದಂತಹ ಲಕ್ಷಣ ಧಾರಾವಾಹಿಗೆ(lakshana serial) ಹಣ ಹೂಡಿಕೆ ಮಾಡಿದರು.

advertisement

Leave A Reply

Your email address will not be published.