7 Hot News
A Karnataka Times Affiliate Kannada News Portal

ಬ್ರಿಟನ್ ದೇಶದ ಪ್ರಧಾನಮಂತ್ರಿ, ಸುಧಾಮೂರ್ತಿ ಅಮ್ಮನವರ ಅಳಿಯ, ರಿಷಿ ಸುನಕ್ ಅವರ ಕುಟುಂಬ ಬ್ರಿಟನ್ ನಲ್ಲಿ ದೀಪಾವಳಿ ಆಚರಿಸಿದ ಸುಂದರ ಕ್ಷಣಗಳು ನೋಡಿ!!

advertisement

ಯುನೈಟೆಡ್ ಕಿಂಗ್ಡಂನ ಪ್ರಧಾನ ಮಂತ್ರಿ ಆಗಿರುವಂತಹ ರಿಷಿ ಸುನಕ್(Rishi Sunak) ನಮ್ಮ ಕರ್ನಾಟಕ ರಾಜ್ಯದ ಆದರ್ಶ ಮಹಿಳೆ ಸುಧಾ ಮೂರ್ತಿ ಅಮ್ಮನವರ ಅಳಿಯ ಎನ್ನುವುದು ಮತ್ತಷ್ಟು ಹೆಮ್ಮೆ ತರುವಂತಹ ವಿಚಾರ. ಹಲವಾರು ಸಂದರ್ಶನಗಳಲ್ಲಿ ಸುಧಾ ಮೂರ್ತಿ(Sudhamurthy) ಅಮ್ಮನವರೇ ಹೇಳಿರುವ ಹಾಗೆ ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದೆ ನನ್ನ ಮಗಳು ಅಕ್ಷತಾ(Akshatha) ಆಕೆಯ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ. ನನ್ನ ಅಳಿಯ ಪಂಜಾಬಿಯವರು ಅವರ ಕುಟುಂಬ ನೂರು- ನೂರೈವತ್ತು ವರ್ಷಗಳಿಂದ ಲಂಡನ್ನಲ್ಲಿಯೇ ಇದ್ದಾರೆ ಅವರು ಬಹಳ ಸಂಪ್ರದಾಯನಿಷ್ಠರು ಎಂದು ತಮ್ಮ ಅಳಿಯನ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು.

advertisement

ಅಕ್ಟೋಬರ್ 25, 2022 ರಂದು ಲಂಡನ್ನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂತಹ ರಿಷಿ ಸುನಕ್(Rishi Sunak) ಅವರು ಸದ್ಯ ದೇಶ ಒಂದರ ಆಡಳಿತವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಅದ್ಭುತವಾಗಿ ಜನರ ಆಗು ಹೋಗುಗಳನ್ನು ನೋಡುತ್ತಾ ಬಂದಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿಯು ಆಕ್ಟಿವ್ ಆಗಿ ಇರುವಂತಹ ರಿಷಿ ಸುನಕ್(Rishi Sunak) ಅವರು ಜನರಿಗೆ ಉಪಯುಕ್ತ ವಾಗುವಂತಹ ಸಾಮಾಜಿಕ ಪೋಸ್ಟ್ಗಳು ಹಾಗೂ ತಮ್ಮ ವೈಯಕ್ತಿಕ ಸಂಭ್ರಮದ ಕೆಲ ಸುಂದರ ಚಿತ್ರಣಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತಾರೆ.

advertisement

ಅದರ ತಮ್ಮ ಪತಿ ಹಾಗೂ ಮಗಳನೊಂದಿಗೆ ದೀಪಾವಳಿ ಹಬ್ಬವನ್ನು ನೆಂಟರಸ್ತರ ಜೊತೆಗೆ ಸೇರಿ ಬಹಳ ಅದ್ದೂರಿಯಿಂದ ಆಚರಿಸುತ್ತಿರುವ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಸುಧಾ ಮೂರ್ತಿ ಅವರ ಮಗಳು ಅಕ್ಷತಾ ದೀಪಗಳು ತುಂಬಿರುವಂತಹ ತಟ್ಟೆಯನ್ನು ಹಿಡಿದು ಸಾಂಪ್ರದಾಯಿಕವಾಗಿ ನೀಲಿ ಬಣ್ಣದ ಸೀರೆಯುಟ್ಟು ತಮ್ಮ ಇಬ್ಬರು ಮಕ್ಕಳಾದ ಕೃಷ್ಣ ಸುನಕ್ ಮತ್ತು ಅನುಷ್ಕಾ ಸುನಕ್ ಅವರೊಂದಿಗೆ ನಗುತ್ತ ಬಂದರು.

advertisement

advertisement

 

View this post on Instagram

 

A post shared by Rishi Sunak (@rishisunakmp)

advertisement

advertisement

ಹಾಗೂ ರಿಷಿ ಸುನಕ್ ವಿಶೇಷ ದೀಪಾವಳಿ ಹಬ್ಬವನ್ನುದ್ದೇಶಿಸಿ ಅಲ್ಲಿದ್ದಂತಹ ಕುಟುಂಬಸ್ಥರು ಸ್ನೇಹಿತರು ಹಾಗೂ ಆತ್ಮೀಯರಿಗೆ ಹಬ್ಬದ ಶುಭಾಶಯ ಕೋರಿದರು. ಈ ವಿಡಿಯೋವನ್ನು ತಮ್ಮ instagram ಪ್ರೊಫೈಲ್ ನಲ್ಲಿ ಹಂಚಿಕೊಂಡಿರುವಂತಹ ರಿಷಿ ಸುನಕ್(Rishi Sunak) ದೀಪಗಳ ದೀಪಲಂಕಾರದೊಂದಿಗೆ ಭವಿಷ್ಯವನ್ನು ನಾವು ಭರವಸೆಯಿಂದ ನೋಡುವ ಕ್ಷಣವಾಗಲಿ, ದೀಪಾವಳಿಯ ಶುಭಾಶಯಗಳು ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ವಿಡಿಯೋ ಹಂಚಿಕೊಳ್ಳಲಾದ ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಲಕ್ಷಾಂತರ ವ್ಯೂಸ್ ಗಳ ಜೊತೆಗೆ ಎಂಟು ಸಾವಿರಕ್ಕೂ ಅಧಿಕ ಕಾಮೆಂಟ್ ಗಳ ಸುರಿಮಳೆ ಹರಿದು ಬಂದಿದೆ.

advertisement

Leave A Reply

Your email address will not be published.